Optical Illusion: ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ

ಸುಮ್ಮನೆ ಕುಳಿತಿರುವಾಗ ಮೆದುಳಿಗೆ ಕೆಲಸ ಕೊಡುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದೆಂದರೆ ಅನೇಕರಿಗೆ ಇಷ್ಟ. ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಬುದ್ಧಿ ಮಟ್ಟ ಹಾಗೂ ಯೋಚನಾಶಕ್ತಿಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಇದೀಗ ಈ ಚಿತ್ರದಲ್ಲಿ ನದಿ ದಡದಲ್ಲಿ ಅವಿತು ಕುಳಿತಿರುವ ನಾಯಿ ಮರಿಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ.

Optical Illusion: ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Dec 21, 2025 | 10:43 AM

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಸಂಬಂಧಿತ ಚಿತ್ರಗಳು ಪಝಲ್ ಪ್ರಿಯರನ್ನು ಆಕರ್ಷಿಸುತ್ತವೆ. ಈ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯ ಜತೆಗೆ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಇದೀಗ ನಿಮಗೆ ಇಲ್ಲೊಂದು ಸವಾಲು ಇದೆ. ಈ  ಹಿಮ ಮಿಶ್ರಿತ ನದಿ ದಡದಲ್ಲಿ ನಾಯಿಮರಿಯೊಂದು ಅಡಗಿ ಕುಳಿತಿದೆ. ಈ ನಾರಿಮರಿಯನ್ನು ಹದಿನೈದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.

ವೈರಲ್ ಚಿತ್ರದಲ್ಲಿ ಏನಿದೆ?

ನೀವು ನಿಮ್ಮ ಬುದ್ಧಿ ಮಟ್ಟವನ್ನು ಪರೀಕ್ಷಿಸಲು ಸಜ್ಜಾಗಿದ್ದೀರಾ. ಹಾಗಾದ್ರೆ ಈ ಚಿತ್ರವು ನಿಮಗೆ ಸಹಾಯ ಮಾಡುತ್ತದೆ. ಈ ಚಿತ್ರದಲ್ಲಿ ನೀವು ನದಿ ದಡವನ್ನು ಕಾಣಬಹುದು. ಈ ನದಿಯ ದಡವು ಬಿಳಿ ಹಿಮದಿಂದ ಆವೃತ್ತವಾಗಿದ್ದು, ಇಲ್ಲಿ ನಾಯಿಮರಿ ಅಡಗಿಕೊಂಡಿದೆ. ಈ ನಾಯಿಮರಿಯನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ, ನಿಮ್ಮ ಮೆದುಳಿಗೆ ಕೆಲಸ ನೀಡಿ.

ಇದನ್ನೂ ಓದಿ:ಜಸ್ಟ್‌ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ

ನಾಯಿಮರಿ ಸಿಕ್ಕಿತೇ?

ಅಯ್ಯೋ ಎಷ್ಟೇ ಹುಡುಕಿದರೂ ಹಿಮದಿಂದ ಆವೃತ್ತವಾದ ನದಿಯ ದಡದಲ್ಲಿ ಅಡಗಿರುವ ನಾಯಿ ಮರಿಯನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗಿಲ್ಲವೇ. ಹಾಗಾದ್ರೆ ನೀವು ಹೆಚ್ಚು ಯೋಚಿಸಬೇಡಿ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರದಲ್ಲಿ ನದಿಯ ದಡದಲ್ಲಿ ನಾಯಿಮರಿ ಎಲ್ಲಿದೆ ಎಂದು ಕಪ್ಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ