
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಕಣ್ಣು ಹಾಗೂ ಮೆದುಳಿಗೆ ಸವಾಲು ನೀಡುತ್ತವೆ. ಈ ಒಗಟುಗಳನ್ನು ಬಿಡಿಸುವುದು ಸೇರಿದಂತೆ ಇಂತಹ ಸವಾಲಿನ ಆಟಗಳೆಂದರೆ ಬಹುತೇಕರಿಗೆ ಇಷ್ಟ. ಆದರೆ ಇಂತಹ ಒಗಟನ್ನು ಬಿಡಿಸುವಾಗ ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವರು ಒಗಟು ಬಿಡಿಸುವಲ್ಲಿ ವಿಫಲವಾಗುತ್ತಾರೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಎರಡು ಸಂಖ್ಯೆಗಳು ಅಡಗಿದ್ದು, ನೀವು ಐದು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ಐಕ್ಯೂ ಪರೀಕ್ಷೆಯೊಂದಿಗೆ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಚಲಿಸುತ್ತಿರುವಂತೆ ಕಾಣುವ ಈ ವೃತ್ತಾಕಾರದ ಚಿತ್ರದಲ್ಲಿ ಎರಡು ಸಂಖ್ಯೆಗಳಿವೆ. ಆದರೆ ಕೆಲವೇ ಕೆಲವು ಜನರು ಈ ಸಂಖ್ಯೆಗಳನ್ನು ಗುರುತಿಸಲು ಸಾಧ್ಯ. ಆದರೆ ನೀವು ನಿರ್ದಿಷ್ಟ ಸಮಯದೊಳಗೆ ಈ ಸಂಖ್ಯೆಯನ್ನು ಗುರುತಿಸಿ, ನಿಮ್ಮ ದೃಷ್ಟಿ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಒಂದೊಳ್ಳೆ ಅವಕಾಶವಿದೆ.
ಇದನ್ನೂ ಓದಿ:ಜಸ್ಟ್ 5 ಸೆಕೆಂಡುಗಳಲ್ಲಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಗುರುತಿಸುವಿರಾ
ನೀವು ಎಷ್ಟೇ ಹುಡುಕಿದರೂ ಐದು ಸೆಕೆಂಡಿನಲ್ಲಿ ಎರಡು ಸಂಖ್ಯೆಗಳನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ. ನಿರ್ದಿಷ್ಟ ಸಮಯ ಮೀರಿ ಹೋದರೂ ನಿಮ್ಮ ಕಣ್ಣಿಗೆ ಸಂಖ್ಯೆಗಳು ಕಾಣಿಸಿಲ್ಲವೇ. ಈ ಚಿತ್ರವನ್ನು ದೊಡ್ಡದಾಗಿಸಿ ಇಲ್ಲವಾದರೆ ಚಿಕ್ಕದಾಗಿಸಿ. ಹೀಗೆ ಮಾಡಿದಾಗ ಸಂಖ್ಯೆಗಳು ನಿಮಗೆ ಕಾಣಿಸುತ್ತದೆ. ಈಗ ನಿಮಗೆ ಈ ಚಿತ್ರದಲ್ಲಿರುವ ಸಂಖ್ಯೆಗಳನ್ನು ಗುರುತಿಸಲು ನಿಮಗೆ ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ