Brain Teaser: ನೀವು ಬುದ್ಧಿವಂತರಾಗಿದ್ರೆ ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ನೋಡೋಣ
ಈಗಂತೂ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಟ್ರೆಂಡಿಂಗ್‌ನಲ್ಲಿದೆ. ಬುದ್ಧಿವಂತಿಗೆ ಸವಾಲೊಡ್ಡುವಂತಹ ಇಂತಹ ಆಟಗಳನ್ನು ಆಡುವ ಮಜಾನೇ ಬೇರೆ. ಇದೀಗ ಗಣಿತದ ಲೆಕ್ಕವನ್ನು ನೀಡಲಾಗಿದ್ದು, ನೀವು ಲೆಕ್ಕ ಬಿಡಿಸೋದ್ರಲ್ಲಿ ಪಂಟರಾಗಿದ್ದರೆ ಈ ಒಗಟು ಬಿಡಿಸಿ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ.

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬ್ರೈನ್ ಟೀಸರ್ (Brain Teaser) ಚಿತ್ರಗಳು ಆಗಾಗ್ಗೆ ಕಣ್ಣಿಗೆ ಬೀಳುತ್ತವೆ. ಒಂದಕ್ಕಿಂತ ಒಂದು ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿದ್ದು, ಬಿಡಿಸುವುದು ಕಷ್ಟಕರ. ಇದೀಗ ಅಂತಹ ವೈರಲ್ ಬ್ರೈನ್ ಟೀಸರ್ ಒಗಟು ವೈರಲ್ ಆಗಿದೆ. ಇದೊಂದು ಗಣಿತದ ಪಜಲ್ ಆಗಿದ್ದು, ಉತ್ತರ ಕಂಡುಹಿಡಿಯಬೇಕು. ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ.
ಒಗಟಿನ ಪ್ರಶ್ನೆ ಹೀಗಿದೆ ನೋಡಿ
break the silos ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್ ಟೀಸರ್ ಒಗಟಿನ ಪ್ರಶ್ನೆ ತಲೆಗೆ ಹುಳ ಬಿಟ್ಟಂತಿದೆ. 1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. ಈ ಪ್ರಶ್ನೆಗೆ ಸರಿ ಉತ್ತರ ಹೇಳುವುದು ಅಷ್ಟು ಸುಲಭವಲ್ಲ. ಆದರೆ ನೀವು ಬುದ್ಧಿ ಉಪಯೋಗಿಸಿ ಇದಕ್ಕೆ ಹತ್ತೇ ಹತ್ತು ಸೆಕೆಂಡುಗಳೊಳಗೆ ಉತ್ತರ ಹೇಳಲು ಪ್ರಯತ್ನಿಸಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಲೆಕ್ಕ ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಮ್ಯಾಥ್ಸ್ ಪಝಲ್ ಬಿಡಿಸಿ ನಿಖರ ಉತ್ತರ ಹೇಳಿ
ಲೆಕ್ಕ ಬಿಡಿಸಿ ಉತ್ತರ ಕಂಡು ಕೊಳ್ಳಲು ಸಾಧ್ಯವಾಯಿತೇ?
ಟ್ರಿಕ್ಕಿ ಲೆಕ್ಕವನ್ನು ಬಿಡಿಸಿ ಉತ್ತರ ಹೇಳಲು ಸಾಧ್ಯವಾಗಿಲ್ಲವೇ, ಹೆಚ್ಚು ಚಿಂತಿಸಬೇಡಿ. 1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎನ್ನುವ ಪ್ರಶ್ನೆಗೆ ನಾವೇ ಉತ್ತರ ಹೇಳುತ್ತೇವೆ. 8 + 11 ಈ ಲೆಕ್ಕವನ್ನು ಬಿಡಿಸಿದಾಗ ಉತ್ತರವು 96 ಬರುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sun, 14 December 25




