Video: ಬೆಂಗಳೂರಿನ ಸಣ್ಣ ಅಂಗಡಿಯಲ್ಲಿ ಟೀ ಸವಿದು ಇಲ್ಲಿನ ಅತಿಥಿ ಸತ್ಕಾರಕ್ಕೆ ಫಿದಾ ಆದ ವಿದೇಶಿಗ
ಅತಿಥಿ ದೇವೋ ಭವ ಎನ್ನುವ ಮಾತಿದೆ. ಯಾರೇ ಬಂದರೂ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಸತ್ಕರಿಸುವ ಗುಣ ನಮ್ಮದು. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ವಿಡಿಯೋ. ಬೆಂಗಳೂರಿಗೆ ಬಂದ ವಿದೇಶಿ ಪ್ರಜೆಯು ಇಲ್ಲಿನ ಜನರ ಅತಿಥಿ ಸತ್ಕಾರಕ್ಕೆ ಕಳೆದೇ ಹೋಗಿದ್ದು, ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 14: ವಿದೇಶಿಗರು (Foreigners) ಭಾರತಕ್ಕೆ ಬಂದು ಇಲ್ಲಿನ ಪ್ರವಾಸಿ ತಾಣಗಳು, ವಿವಿಧ ಆಹಾರಗಳನ್ನು ಸವಿಯುತ್ತಾರೆ. ಹೀಗೆ ಬಂದ ವಿದೇಶಿಗರನ್ನು ತಮ್ಮವರೆಂದು ಭಾವಿಸಿ ಅವರ ಜತೆಗೆ ಭಾರತೀಯರು ಬೆರೆಯುತ್ತಾರೆ. ವಿದೇಶಿಗರು ಇಲ್ಲಿನ ಅತಿಥಿ ಸತ್ಕಾರಕ್ಕೆ ಮನ ಸೋಲುತ್ತಾರೆ. ಬೆಂಗಳೂರಿನ (Bengaluru) ಡಿ.ಜೆ. ಹಳ್ಳಿಗೆ ಭೇಟಿ ನೀಡಿದ ಅಮೆರಿಕನ್ ಪ್ರಜೆಗೆ ವಿಶಿಷ್ಟ ಅನುಭವವಾಗಿದೆ. ಸಣ್ಣ ಚಹಾ ಅಂಗಡಿಯ ಮಾಲೀಕ ಇವರನ್ನು ಕಂಡು ಖುಷಿಯಿಂದಲೇ ಮಾತನಾಡಿಸಿ ಸತ್ಕರಿಸಿದ ರೀತಿಗೆ ಕಳೆದೇ ಹೋಗಿದ್ದಾರೆ. ತಮಗಾದ ಈ ಅನುಭವವನ್ನು ಹಂಚಿಕೊಂಡಿದ್ದು ದೊಡ್ಡ ಮನಸ್ಸಿನ ಈ ವ್ಯಕ್ತಿಯ ಗುಣವನ್ನು ಮೆಚ್ಚಿಕೊಂಡಿದ್ದಾರೆ.
ಅಮೆರಿಕನ್ ವ್ಲಾಗರ್ ನಿಕ್ ಮೆಕ್ ಕಚಿಯನ್ (Nickabroad) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ನೀವು ತುಂಬಾ ದಯೆ ತೋರುತ್ತೀರಿ. ವಾಹ್! ಸ್ನೇಹಿತ ನನ್ನ ಚಹಾಕ್ಕೆ ಹಣ ನೀಡುತ್ತಿದ್ದಾನೆ. ಎಷ್ಟು ಚೆನ್ನಾಗಿದೆ ನಿಮ್ಮ ಆತಿಥ್ಯ. ಭಾರತೀಯ ಆತಿಥ್ಯವು ಪ್ರಪಂಚದ ಬೇರೆಲ್ಲಿಯೂ ಇಲ್ಲ ಎಂದು ತಮಗಾದ ಒಳ್ಳೆಯ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ನಿಕ್ ಮೆಕ್‌ಕಚನ್ ಸ್ಥಳೀಯರೊಂದಿಗೆ ಬೆರೆಯುತ್ತಾ ಸಣ್ಣ ಅಂಗಡಿಯೊಂದರಲ್ಲಿ ಚಹಾ ಕುಡಿದಿದ್ದಾರೆ. ಆದರೆ ಅಂಗಡಿ ಮಾಲೀಕ ಈ ವಿದೇಶಿ ಪ್ರಜೆಯಿಂದ ಹಣ ನಿರಾಕರಿಸಿದ್ದು ದೊಡ್ಡಗುಣವನ್ನು ಹೊಗಳಿದ್ದಾರೆ. ಈ ಭೇಟಿಯಿಂದ ಈ ಜನರು ಖುಷಿಪಟ್ಟಿದ್ದನ್ನು ನೋಡಿ ತಮಗೂ ಸಂತೋಷವಾಗಿದೆ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ: ಆಟೋದಲ್ಲಿನ ಪೋಸ್ಟರ್ ಕಂಡು ಬೆಂಗಳೂರು ಹೆಣ್ಣುಮಕ್ಕಳಿಗೆ ಸೇಫ್ ಎಂದ ಮಹಿಳೆ
ಈ ವಿಡಿಯೋ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಮ್ಮ ದೇಶಕ್ಕೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಇಂತಹ ಅತಿಥಿ ಸತ್ಕಾರ ಭಾರತದಲ್ಲಿ ನೋಡಲು ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಪ್ರತಿಯೊಂದು ದೇಶದಲ್ಲೂ ಒಳ್ಳೆಯದು ಕೆಟ್ಟದ್ದು ಎರಡು ಇದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




