Optical Illusion: ಜಸ್ಟ್ 5 ಸೆಕೆಂಡುಗಳಲ್ಲಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಗುರುತಿಸುವಿರಾ

ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವತ್ತ ಆಸಕ್ತಿ ತೋರುತ್ತಾರೆ. ಈ ಒಗಟಿನ ಚಿತ್ರಗಳು ಟೈಮ್ ಪಾಸ್ ಮಾತ್ರವಲ್ಲ, ಮೆದುಳಿಗೆ ಕೆಲಸ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದೆ. ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು. ಬಿಡಿಸಿ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಿ.

Optical Illusion: ಜಸ್ಟ್ 5 ಸೆಕೆಂಡುಗಳಲ್ಲಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಗುರುತಿಸುವಿರಾ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Dec 14, 2025 | 10:33 AM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಈ ಒಗಟಿನ ಚಿತ್ರ ತಲೆಗೆ ಹುಳ ಬಿಡುತ್ತದೆ. ಹೀಗಾಗಿ ಕೆಲವೇ ಕೆಲವು ಜನರಷ್ಟೇ ಇಂತಹ ಒಗಟುಗಳನ್ನು ಬಿಡಿಸಲು ಆಸಕ್ತಿ ತೋರಿಸುತ್ತಾರೆ. ಇದೀಗ ಚಿತ್ರವೊಂದು ವೈರಲ್‌ ಆಗಿದ್ದು ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದೆ. ಟ್ರಿಕ್ಕಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಕಂಡು ಹಿಡಿಯುವುದು. ಐದು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರವು ಏನನ್ನು ಒಳಗೊಂಡಿದೆ?

ಇಲ್ಯೂಷನ್ ಚಿತ್ರದಲ್ಲಿ ಬಣ್ಣ ಬಣ್ಣದ ಎಲೆಗಳನ್ನು ಕಾಣಬಹುದು. ಆದರೆ 47 ಸಂಖ್ಯೆಯನ್ನು ಎಲೆಗಳ ಮಾದರಿ ನಡುವೆ ಮರೆಮಾಡಲಾಗಿದೆ. ಈ ಎಲೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿವೆ. ಈ ನೈಸರ್ಗಿಕ ಮಾದರಿಯೊಳಗೆ 47 ಸಂಖ್ಯೆಯನ್ನು ಜಾಣತನದಿಂದ ಮರೆಮಾಡಲಾಗಿದೆ. ಹೀಗಾಗಿ ನೀವು ಈ ಎಲೆಗಳ ನಡುವೆ ಅಡಗಿರುವ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿ. ಏಕ್ರಾಗತೆಯಿಂದ ಈ ಒಗಟು ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ:ಈ ವೃತ್ತಾಕಾರದ ಚಿತ್ರದಲ್ಲಿರುವ ಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಹೇಳಬಲ್ಲಿರಾ

47 ಸಂಖ್ಯೆಯನ್ನು ಗುರುತಿಸಲು ಸಾಧ್ಯವಾಯಿತೇ?

ಇದು ಕಷ್ಟಕರವಾದ ಒಗಟಿನ ಚಿತ್ರವಾಗಿದ್ದು ಮೊದಲ ನೋಟದಲ್ಲಿ 47 ಸಂಖ್ಯೆಯನ್ನು ಹುಡುಕುವುದು ಕಷ್ಟಕರ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಎರಡು ಎಲೆಯ ನಾಳಗಳು 4 ಅನ್ನು ಹೇಗೆ ರೂಪಿಸುತ್ತವೆ ಹಾಗೂ ಬಾಗಿದ ನೆರಳುಗಳು 7 ಅನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ನೀವು ಗಮನಹರಿಸಿದರೆ 47 ಸಂಖ್ಯೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ