Optical Illusion: ಈ ವೃತ್ತಾಕಾರದ ಚಿತ್ರದಲ್ಲಿರುವ ಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಹೇಳಬಲ್ಲಿರಾ
ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರಗಳನ್ನು ಬಿಡಿಸುವುದಲ್ಲಿರುವ ಮಜಾನೇ ಬೇರೆ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುತ್ತವೆ. ಟೈಮ್ ಪಾಸ್‌ನೊಂದಿಗೆ ಮೆದುಳಿಗೆ ಕೆಲಸ ನೀಡುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಗುಪ್ತ ಸಂಖ್ಯೆಯನ್ನು ನೀವು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯಾವಕಾಶ ಹತ್ತು ಸೆಕೆಂಡುಗಳು ಮಾತ್ರ. ಉತ್ತರ ಕಂಡು ಕೊಳ್ಳಲು ಸಾಧ್ಯವೇ ಎಂದು ನೋಡಿ.

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ. ಕೆಲವರು ಕ್ಷಣಾರ್ಧದಲ್ಲಿ ಇಂತಹ ಒಗಟುಗಳನ್ನು ಬಿಡಿಸುತ್ತಾರೆ. ಆದರೆ, ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ವೃತ್ತಾಕಾರದ ಚಿತ್ರದಲ್ಲಿ ಸಂಖ್ಯೆಯೊಂದಿದೆ. ಆ ಸಂಖ್ಯೆ ಎಷ್ಟೆಂದು ಹೇಳಬೇಕು. ನೀವು 10 ಸೆಕೆಂಡುಗಳ ಒಳಗೆ ಸರಿಯಾದ ಉತ್ತರ ಹೇಳಿದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಅತ್ಯುತ್ತಮವಾಗಿದೆ ಎಂದರ್ಥ.
benonwine ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ ಟ್ರಿಕ್ಕಿ ಒಗಟಿನ ಚಿತ್ರವಿದೆ. ಕಪ್ಪು ಬಿಳುಪಿನ ಈ ವೃತ್ತಾಕಾರದಲ್ಲಿ ಗುಪ್ತ ಸಂಖ್ಯೆಯೊಂದು ಅಡಗಿದೆ. ಈ ಸಂಖ್ಯೆಯನ್ನು ಹತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಿ ಸರಿಯಾದ ನಿಖರ ಉತ್ತರ ಹೇಳಲು ಪ್ರಯತ್ನಿಸಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
DO you see a number?
If so, what number? pic.twitter.com/wUK0HBXQZF
— Benonwine (@benonwine) February 16, 2022
ಇದನ್ನೂ ಓದಿ:ಒಗಟು ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಚಿತ್ರದಲ್ಲಿರುವ ಆನೆಯನ್ನು ಗುರುತಿಸಿ
ಸರಿಯಾದ ಸಂಖ್ಯೆ ಕಂಡು ಹಿಡಿಯಲು ಸಾಧ್ಯವಾಯಿತೇ?
ಈ ಒಗಟಿನ ಚಿತ್ರದಲ್ಲಿರುವ ಗುಪ್ತ ಸಂಖ್ಯೆಯನ್ನು ಕಂಡು ಹಿಡಿಯಲು ಅನೇಕರು ಪ್ರಯತ್ನಿಸಿದ್ದಾರೆ. ಕೆಲವರು ವಿಭಿನ್ನ ಸಂಖ್ಯೆಗಳನ್ನು ಟೈಪ್ ಮಾಡುವ ಮೂಲಕ ಈ ಒಗಟಿಗೆ ಸರಿಯಾದ ಉತ್ತರ ಹೇಳಿದ್ದಾರೆ. ಆದರೆ ಈ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಎಷ್ಟು ಎಂದು ಹೇಳಲು ನಾವು ನಿಮಗೆ ಸುಳಿವು ನೀಡುತ್ತಿದ್ದೇವೆ. ಸರಿಯಾದ ಉತ್ತರವು ಮೂರರಿಂದ ಎಂಟು ಸಂಖ್ಯೆಗಳವರೆಗೆ ಇರಬಹುದು. ಆ ಸಂಖ್ಯೆ ಯಾವುದು ಎಂದು ಗುರುತಿಸಲು ಸಾಧ್ಯವಾಗಿಲ್ಲವೇ, ಚಿಂತಿಸಬೇಡಿ, ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಈ ವೃತ್ತದಲ್ಲಿರುವ ಸಂಖ್ಯೆ 3452839.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




