Optical Illusion: ಒಗಟು ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಚಿತ್ರದಲ್ಲಿರುವ ಆನೆಯನ್ನು ಗುರುತಿಸಿ
ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ ಇದು ನೂರಕ್ಕೆ ನೂರರಷ್ಟು ಮೆದುಳಿಗೆ ಕೆಲಸ ನೀಡುತ್ತವೆ. ಎಷ್ಟೇ ಗಮನಿಸಿದ್ರು ಒಗಟು ಬಿಡಿಸಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಆನೆಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. 20 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ.

ಆಪ್ಟಿಕಲ್ ಇಲ್ಯೂಷನ್ (optical illusion) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಕೆಲವರು ಇಂತಹ ಒಗಟುಗಳನ್ನು ಬಿಡಿಸಲು ಇಷ್ಟ ಪಡುತ್ತಾರೆ. ಆದರೆ ಟ್ರಿಕ್ಕಿ ಒಗಟುಗಳು ಮೆದುಳಿಗೆ ಮಾತ್ರವಲ್ಲದೇ ಬುದ್ಧಿವಂತಿಕೆಗೂ ಸವಾಲು ಎಸಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ಒಗಟಿನ ಚಿತ್ರ ಸಹಜವಾಗಿ ಕಂಡರೂ ಉತ್ತರವನ್ನು ಹುಡುಕಲು ತಲೆ ಖರ್ಚು ಮಾಡಬೇಕಾಗಿದೆ. ಇಲ್ಲಿ ಉದ್ಯಾನವನವೊಂದಿದ್ದು, ಇದರಲ್ಲಿ ಅಡಗಿ ಕುಳಿತಿರುವ ಆನೆಯನ್ನು (elephant) ಹುಡುಕುವ ಸವಾಲು ನಿಮ್ಮ ಮುಂದಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಉದ್ಯಾನವನದ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸುಲಭವಾಗಿ ಕಂಡರೂ ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಹಚ್ಚ ಹಸಿರಾದ ಉದ್ಯಾನವನ ಕಾಣಿಸುತ್ತದೆ. ಈ ಗಾರ್ಡನ್ ನಲ್ಲಿ ಕುಟುಂಬಗಳು ಸಮಯ ಕಳೆಯುತ್ತಿದೆ. ಮಕ್ಕಳು ಆಟ ಆಡುತ್ತಿರುವುದನ್ನು ನೋಡಬಹುದು. ಐಸ್ ಕ್ಯಾಂಡಿ ಮಾರುವ ವ್ಯಕ್ತಿಯೂ ಸೈಕಲ್ ತುಳಿಯುತ್ತಾ ಹೋಗುತ್ತಿದ್ದು, ಅಲ್ಲಲ್ಲಿ ಶ್ವಾನಗಳಿವೆ. ಈ ಎಲ್ಲದರ ನಡುವೆ ಆನೆಯೊಂದು ಅಡಗಿದೆ. ಈ ದೈತ್ಯ ಪ್ರಾಣಿಯನ್ನು 20 ಸೆಕೆಂಡುಗಳೊಳಗೆ ಹುಡುಕಿ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ.
ಇದನ್ನೂ ಓದಿ: ಕ್ರಿಸ್‌ಮಸ್ ಟ್ರೀ ನಡುವೆ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ?
ಆನೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಈ ಒಗಟಿನ ಉತ್ತರವು ಕಣ್ಣಿಗೆ ಕಾಣದಂತೆ ಅಡಗಿದ್ದು, ನೀವು ಒಮ್ಮೆ ನೋಡಿದ ಕೂಡಲೇ ಆನೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಬೇರೆಡೆ ಗಮನ ಹರಿಸದೇ ಆನೆ ಎಲ್ಲಿದೆ ಎಂದು ಹುಡುಕಬೇಕು. ಎಷ್ಟೇ ತಲೆ ಕೆಡಿಸಿಕೊಂಡರೂ ಈ ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದಲ್ಲಿ ಆನೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 11 December 25




