Video: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ
ವಿದೇಶಿಗರು ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯುತ್ತಾರೆ. ವಿದೇಶಿಗ ಕೋಲ್ಕತ್ತಾದಲ್ಲಿ ಸ್ಲೀಪರ್ ಬಸ್‌ನಲ್ಲಿ 12 ಗಂಟೆಗಳ ಕಾಲ ರಾತ್ರಿ ಪ್ರಯಾಣಿಸಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಈ ಪ್ರಯಾಣಕ್ಕೆ ಖರ್ಚು ಆದದ್ದು1,300 ರೂ ಮಾತ್ರ ಎಂದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ವಿದೇಶಿಗರು (foreigner) ಭಾರತ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ವಿವಿಧ ರುಚಿಕರ ಖಾದ್ಯಗಳನ್ನು ಸವಿಯುವುದು ಮಾತ್ರವಲ್ಲ, ಇಲ್ಲಿನ ರೈಲ್ವೆ ಹಾಗೂ ಬಸ್ ಪ್ರಯಾಣವನ್ನು ಎಂಜಾಯ್ ಮಾಡ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಕೆನಡಾದ ಕಂಟೆಂಟ್ ಕ್ರಿಯೇಟರ್ ಜಸ್ಟಿನ್ ಕೋಲ್ಕತ್ತಾದಲ್ಲಿ (Kolkata) ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆಯುರೋಪಿಯನ್ ಬಸ್‌ಗಳಿಗೆ ಹೋಲಿಸಿದ್ರೆ ಭಾರತದ ಸ್ಲೀಪರ್ ಬಸ್ ಬೆಸ್ಟ್ ಎನ್ನುವುದು ಅವರಿಗೆ ತಿಳಿದಿದೆ. ತಮ್ಮ ಹೊಸ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
@side_quest_project ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಸ್ಟಿನ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಭಾರತೀಯ ಸ್ಲೀಪರ್ ಬಸ್‌ಗಳಲ್ಲಿ ಇದ್ದಷ್ಟು ಸೌಕರ್ಯ ಯುರೋಪಿಯನ್ ಬಸ್‌ಗಳಿಗೆ ಇಲ್ಲ ಎಂದು ಜಸ್ಟಿನ್ ವೀಡಿಯೊದ ಆರಂಭದಲ್ಲಿಯೇ ಹೇಳುವುದನ್ನು ನೋಡಬಹುದು. ಆ ನಂತರ ಸ್ಲೀಪರ್ ಬಸ್‌ಗಳಲ್ಲಿನ ವ್ಯವಸ್ಥೆಗಳನ್ನು ತೋರಿಸುತ್ತಾರೆ. ನೀವು ಸಂಪೂರ್ಣ ಹಾಸಿಗೆ, ತಿಂಡಿ ತಿನಿಸು, ನೀರಿನ ಬಾಟಲ್ ಹಾಗೂ ಬೆಡ್ ಶೀಟ್ ಪಡೆಯುತ್ತೀರಿ. ಸ್ಲೀಪರ್ ಬಸ್‌ಗಳ ಬಗ್ಗೆ ಅತ್ಯುತ್ತಮವಾದ ವಿಷಯವೆಂದರೆ ನೀವು ನಿದ್ರಿಸಲು ಮತ್ತು ನಿಮ್ಮ ಗಮ್ಯಸ್ಥಾನದಲ್ಲಿ ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ. ಆದರೆ ಯುರೋಪಿಯನ್ ಬಸ್‌ಗಳು ಯಾವುದೇ ಮೂಲ ಸೌಕರ್ಯ ನೀಡಿಲ್ಲ ಎಂದು ಹೇಳುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಬೆಂಗಳೂರಿನ ಸಣ್ಣ ಅಂಗಡಿಯಲ್ಲಿ ಟೀ ಸವಿದು ಇಲ್ಲಿನ ಅತಿಥಿ ಸತ್ಕಾರಕ್ಕೆ ಫಿದಾ ಆದ ವಿದೇಶಿಗ
ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕೋಲ್ಕತ್ತಾದಿಂದ ಈ ಮಾರ್ಗದಲ್ಲಿ ಇನ್ಫೋಟೈನ್‌ಮೆಂಟ್ ವ್ಯವಸ್ಥೆಗಳೊಂದಿಗೆ ಬಸ್‌ಗಳಿವೆ ಮತ್ತು ಇದು ಅಕ್ಷರಶಃ ಕೇವಲ 15 ರಿಂದ 20 ಡಾಲರ್‌ಗಳಷ್ಟು ಮಾತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಒಳ್ಳೆಯ ಬಜೆಟ್ ಇಟ್ಟುಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಹಳೆಯ ಮತ್ತು ತುಕ್ಕು ಹಿಡಿದ ಬಸ್ ಬದಲಿಗೆ ಪ್ರಯಾಣಕ್ಕಾಗಿ ಉತ್ತಮ ಬಸ್ ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




