
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಕಠಿಣ ಸವಾಲಿನ ಈ ಒಗಟಿನ ಚಿತ್ರಗಳು ಕಷ್ಟವೆನಿಸಿದರೂ ಉತ್ತರ ಸಿಕ್ಕರಂತೂ ಆಗುವ ಖುಷಿಯೇ ಬೇರೆ. ಆದರೆ ಇಂತಹ ಚಿತ್ರಗಳನ್ನು ಕಣ್ಣನ್ನು ಮೋಸ ಗೊಳಿಸಿ ಭ್ರಮೆಯಲ್ಲಿ ಸಿಲುಕಿಸುತ್ತದೆ. ದೃಷ್ಟಿ ಸಾಮರ್ಥ್ಯ ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತವೆ. ವೈರಲ್ ಆಗಿರುವ ಈ ಚಿತ್ರವು ಅಷ್ಟು ಸುಲಭದಾಯಕವಾಗಿಲ್ಲ. ಕಪ್ಪು ಬಿಳುಪಿನ ಸುರುಳಿಯಂತಿರುವ ಈ ಚಿತ್ರದಲ್ಲಿ ಸಂಖ್ಯೆಯೊಂದು ಅಡಗಿದೆ. ನಿಮ್ಮ ಕಣ್ಣು ಶಾರ್ಪ್ ಇದ್ರೆ ನಿರ್ದಿಷ್ಟ ಸಮಯದೊಳಗೆ ಆ ಸಂಖ್ಯೆಯನ್ನು ಕಂಡುಹಿಡಿಯಬೇಕು. ಈ ಚಿತ್ರವನ್ನು ಗಮನಿಸಿ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಪ್ಪು ಬಿಳುಪಿನ ಸುರುಳಿಯಕಾರದ ರಚನೆಯನ್ನು ಕಾಣಬಹುದು. ಆದರೆ ಈ ಚಿತ್ರದಲ್ಲಿ ಸಂಖ್ಯೆಯೊಂದು ಅಡಗಿದೆ. ನೀವು ಅತ್ಯಂತ ಚುರುಕು ಮನಸ್ಸಿನವರಾಗಿದ್ದರೆ, ವೀಕ್ಷಣಾ ಕೌಶಲ್ಯ, ತೀಕ್ಷ್ಣ ದೃಷ್ಟಿ ಹೊಂದಿದ್ದರೆ ನೀವು ಈ ಒಗಟಿನ ಚಿತ್ರವನ್ನು ಕೇವಲ 12 ಸೆಕೆಂಡುಗಳಲ್ಲಿ ಬಿಡಿಸಿ ಆ ಸಂಖ್ಯೆ ಯಾವುದೆಂದು ಹೇಳಲು ಸಾಧ್ಯ. ನೀವು ಈ ಒಗಟನ್ನು ಬಿಡಿಸಲು ರೆಡಿ ಇದ್ದರೆ ಈಗಲೇ ಈ ಸವಾಲು ಸ್ವೀಕರಿಸಲು ಸಿದ್ಧರಾಗಿ.
ಇದನ್ನೂ ಓದಿ:Optical Illusion: ತೋಳಗಳ ನಡುವೆ ಅಡಗಿರುವ ಜೇಡವನ್ನು 8 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಎಷ್ಟೇ ಹುಡುಕಿದರೂ ಕಪ್ಪು ಬಿಳುಪಿನ ಸುರುಳಿಯಾಕಾರದ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಲೆ ಕಡೆಸಿಕೊಂಡಿದ್ದೀರಾ?. ಈ ಒಗಟನ್ನು ನೂರರಲ್ಲಿ ಹತ್ತು ಜನರಿಗೆ ಮಾತ್ರ ಬಿಡಿಸಲು ಸಾಧ್ಯ. ನಿಮಗೆ ಈ ಭ್ರಮೆಯನ್ನುಂಟು ಮಾಡುವ ಈ ಒಗಟಿನ ಚಿತ್ರ ಬಿಡಿಸಲು ಆಗಲಿಲ್ಲವೆಂದು ಚಿಂತಿಸಬೇಡಿ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆ 2025, ಸೂಕ್ಷ್ಮವಾಗಿ ಗಮನಿಸಿದರೆ ಆ ಸಂಖ್ಯೆ ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ