
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಇದೊಂದು ಮೋಜಿನ ಆಟವಾಗಿದ್ದು, ಸಮಯ ಕಳೆದದ್ದೇ ತಿಳಿಯುವುದಿಲ್ಲ. ಈ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದರ ಜೊತೆಗೆ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಮೇಲ್ನೋಟಕ್ಕೆ ಈ ಒಗಟಿನ ಚಿತ್ರಗಳು ಸುಲಭವಾಗಿ ಕಂಡರೂ ಇದು ಟ್ರಿಕ್ಕಿಯಾಗಿದ್ದು ಉತ್ತರ ಹುಡುಕುವುದು ಕಷ್ಟ. ಇದೀಗ ಇಂತಹದ್ದೇ ಭ್ರಮೆಯನ್ನು ಉಂಟು ಮಾಡುವ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಕಪ್ಪೆಯೊಂದು ಅಡಗಿದೆಯಂತೆ. ಮೇಲ್ನೋಟಕ್ಕೆ ಸುಲಭವಾಗಿದೆ ಎಂದುಕೊಂಡರೂ ಒಗಟನ್ನು ಬಿಡಿಸುವಾಗಲೇ ಎಷ್ಟು ಕಷ್ಟಕರ ಎಂದು ತಿಳಿಯುತ್ತದೆ. ಈ ಕಪ್ಪೆಯನ್ನು ಕಂಡು ಹಿಡಿಯಲು ಹತ್ತೇ ಹತ್ತು ನಿಮಿಷ ಕಾಲಾವಕಾಶವಿದ್ದು, ಈ ಒಗಟನ್ನು ಬಿಡಿಸಲು ರೆಡಿ ನೀವು ಇದ್ದೀರಾ? ಹಾಗಾದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ ಎಂದು ನೋಡಿ
ರೋಬೋ-ಡ್ರ್ಯಾಗನ್ ಎಂಬ ಬಳಕೆದಾರರು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ಮೊದಲ ಬಾರಿಗೆ ಕಂಡಾಗ ಹಚ್ಚ ಹಸಿರಿನ ಗಿಡಗಳು ಹಾಗೂ ಪೊದೆಗಳಿಂದ ಆವೃತ್ತವಾಗಿರುವ ದೃಶ್ಯ ಮಾತ್ರ ಕಾಣಿಸುತ್ತದೆ. ಹಿನ್ನಲೆಯಲ್ಲಿ ಒಂದು ಸಣ್ಣದಾದ ಮನೆಯೊಂದಿದೆ. ಈ ಮನೆಯ ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಮರ ಗಿಡಗಳು ಹಾಗೂ ಪೊದೆಯನ್ನು ಕಾಣಬಹುದು. ಈ ಗಿಡಗಳಿಂದ ಒಂದೆರಡು ಗುಲಾಬಿ ಬಣ್ಣದ ಹೂವುಗಳಿವೆ. ಆದರೆ ಈ ಚಿತ್ರದಲ್ಲಿ ಕಪ್ಪೆಯೊಂದು ಅಡಗಿದೆ. ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಸವಾಲು ಸ್ವೀಕರಿಸಲು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ?
ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ?
ಮೊದಲಿಗೆ ಈ ಚಿತ್ರ ನೋಡಿದಾಗ ಇದು ಉದ್ಯಾನವನದಂತೆ ಭಾಸವಾದರೂ, ತೀಕ್ಷ್ಣ ಕಣ್ಣುಗಳನ್ನು ಹೊಂದಿರುವ ಕೆಲವೇ ಜನರು ಅದನ್ನು ಕೇವಲ 10 ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯ. ಈ ಚಿತ್ರದಲ್ಲಿ ಕಪ್ಪೆ ಮೈಬಣ್ಣವು ಹಸಿರು ಪರಿಸರದೊಂದಿಗೆ ಬೆರೆತಿದ್ದು, ಹೀಗಾಗಿ ಗೊಂದಲಕ್ಕೆ ಒಳಗಾಗುವುದು ಸಹಜ. ಎಷ್ಟೇ ಪ್ರಯತ್ನ ಪಟ್ಟರೂ ಕಪ್ಪೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ, ಚಿಂತಿಸಬೇಡಿ. ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದ ಮಧ್ಯಭಾಗವನ್ನು ಗಮನಿಸಿ, ಸಸ್ಯದ ಎಲೆಯ ಮೇಲೆ ಕಪ್ಪೆಯೊಂದು ಕುಳಿತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ