Illusion : ಭ್ರಮಾತ್ಮಕ ಚಿತ್ರಗಳು ತಂದೊಡ್ಡುವ ಸವಾಲುಗಳು ಪ್ರತೀ ಬಾರಿಯೂ ಹೊಸತೇ. ಇಷ್ಟೊಂದು ಸವಾಲುಗಳನ್ನು ಬಿಡಿಸಿದ ನಮಗೆ ಇದೂ ಸುಲಭವೇ ಎಂದು ಒಮ್ಮೊಮ್ಮೆ ಎನ್ನಿಸುವುದುಂಟು. ಆದರೆ ಇವು ಮತ್ತೆ ಮತ್ತೆ ನಿಮ್ಮನ್ನು ಭ್ರಮೆಗೆ ಕೆಡವಿ ಸೋಲಿಸಲು ನೋಡುತ್ತಿರುತ್ತವೆ. ನೋಡಿ ಮತ್ತೀಗ ಹೊಸ ಸವಾಲನು ನಿಮಗಾಗಿ ಕಾಯುತ್ತಿದೆ. ಇಲ್ಲಿರುವ ವೃತ್ತಗಳು ಚಲಿಸುತ್ತಿವೆಯೇ ಅಥವಾ ಸ್ಥಿರವಾಗಿವೆಯೇ? ಇದಕ್ಕೆ ಸಮಯದ ಮಿತಿ ಏನೂ ಇಲ್ಲ. ಆದರೆ ನಿಮ್ಮ ಮೆದುಳಿಗೆ ಮತ್ತು ಕಣ್ಣಿಗೆ ಮಾತ್ರ ಸಾಕಷ್ಟು ಶ್ರಮವಂತೂ ಇಲ್ಲಿದೆ. ಈ ಚಿತ್ರ ಹುಟ್ಟುಹಾಕುವ ಭ್ರಮೆಯಿಂದ ಎಷ್ಟು ಬೇಗ ಬಿಡಿಸಿಕೊಂಡು ಉತ್ತರ ಕಂಡುಕೊಳ್ಳುತ್ತೀರಿ ಎನ್ನುವುದನ್ನು ನೋಡೋಣ.
This is not a GIF: it’s an optical illusion created by @AkiyoshiKitaoka that demonstrates the strong (and beautiful) rotation of the “wheels”, occurring in relation to your eye movements. On steady fixation the effect vanishes
[Read more: https://t.co/XLyGSHyf0L] pic.twitter.com/5bh8GBBCi4
— Massimo (@Rainmaker1973) June 27, 2023
ನೆಟ್ಟಿಗರಂತೂ ಭಾರೀ ಗೊಂದಲದಲ್ಲಿದ್ದಾರೆ. ಇವು ತಿರುಗುತ್ತಿರುವುದಷ್ಟೇ ಅಲ್ಲ ಬಣ್ಣವನ್ನೂ ಬದಲಾಯಿಸುವ ವೃತ್ತಗಳನ್ನೂ ಹೊಂದಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಮೊದಲ ಸಲ ನೋಡಿದಾಗ ಇರುವುದೊಂದು ಆಕೃತಿ ನೋಡುತ್ತ ಹೋದಂತೆ ಆಕೃತಿಗಳು ಬದಲಾಗುತ್ತ ಹೋಗುತ್ತವೆ ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಗಮನಿಸಿದ್ದೀರಾ? ಯಾವುದಾದರೂ ಒಂದು ವೃತ್ತದ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದರೆ ಚಲನೆ ನಿಂತುಕೊಳ್ಳುತ್ತದೆ!
ಇದನ್ನೂ ಓದಿ : Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್ ಟಾಟಾ
ಮನಶಾಸ್ತ್ರಜ್ಞ ಅಕಿಯೋಶಿ ಕಿಟೋಕಾ (Akiyoshi Kitaoka) ಈ ಆಪ್ಟಿಕಲ್ ಭ್ರಮೆಯನ್ನು ರಚಿಸಿದ್ದಾರೆ. ವೃತ್ತಗಳು ತಿರುಗುವ ಹಾಗೆ ಭ್ರಮೆ ಉಂಟಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಈಗಾಗಲೇ ಈ ಚಿತ್ರವನ್ನು 1,00,000 ಜನರು ನೋಡಿದ್ದಾರೆ. ನೂರಾರು ಜನರು ತಮ್ಮ ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನನಗಂತೂ ಇವು ವೃತ್ತಗಳು ಚಲಿಸುತ್ತಿಲ್ಲ ಎನ್ನಿಸುತ್ತಿದೆ ಎಂದಿದ್ದಾರೆ ಕೆಲವರು. ಅಯ್ಯೋ ಈ ಚಿತ್ರ ನನ್ನ ಕಣ್ಣುಗಳಿಗೆ ಹಿಂಸೆ ಮಾಡುತ್ತಿದೆ ಎಂದು ಕೆಲವರು. ಹೌದು ಈ ಎಲ್ಲ ವೃತ್ತಗಳು ತಿರುಗುತ್ತಲೇ ಇವೆ ಎಂದು ಬಹುತೇಕ ಜನರು ಹೇಳಿದ್ದಾರೆ. ನಿಮ್ಮ ಮನಸ್ಸು ಶಾಂತವಾಗಿದ್ದರೆ ಸ್ಥಿರವಾಗಿ ಇರುತ್ತದೆ. ಹಾಗೆಯೇ ಈ ವೃತ್ತವೂ ಎಂದು ಒಬ್ಬರು ಹೇಳಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ