
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಟ್ರಿಕ್ಕಿ ಒಗಟಿನ ಚಿತ್ರಗಳಾಗಿದ್ದು, ಇವುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಈ ಚಿತ್ರಗಳು ಯೋಚನಾ ಸಾಮರ್ಥ್ಯ, ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಹೀಗಾಗಿ ಹೆಚ್ಚಿನವರು ಈ ರೀತಿಯ ಒಗಟುಗಳನ್ನು ಇಷ್ಟ ಪಡುತ್ತಾರೆ. ಈ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಕಠಿಣ ಸವಾಲಿನ ಒಗಟನ್ನು ಬಿಡಿಸಲು ಪ್ರಯತ್ನಿಸಿ. ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದ್ದು, ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನೀವು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಫೈಂಡ್‌ದಿಸ್ನೈಪರ್ (r/FindTheSniper) ಹೆಸರಿನ ಖಾತೆಯಲ್ಲಿ ಹಂಚಿಕೊಂಡ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಬೆಕ್ಕೊಂದು ಅಡಗಿದೆ. ಈ ಪೋಸ್ಟ್ ಗೆ “ನನ್ನ ಕಿತ್ತಳೆ ಬೆಕ್ಕನ್ನು ಹುಡುಕಿ” ಎಂಬ ಶೀರ್ಷಿಕೆ ನೀಡಲಾಗಿದೆ. ಮೊದಲ ನೋಟದಲ್ಲಿ, ಚಿತ್ರದಲ್ಲಿ ಕೆಲವು ಪೆಟ್ಟಿಗೆಗಳು, ಶೂ, ಕ್ಯಾಬಿನೆಟ್ ಮತ್ತು ನೀರಿನ ಜಗ್ ಹೊಂದಿರುವ ವಿಶಿಷ್ಟ ಪ್ರವೇಶದ್ವಾರವು ನಿಮ್ಮ ಕಣ್ಣಿಗೆ ಬೀಳುತ್ತದೆ. ಆದರೆ ರೂಫಸ್ ಎಂಬ ಹೆಸರಿನ ಬೆಕ್ಕು ಅಡಗಿದ್ದು ಅದನ್ನು ಹುಡುಕುವ ಸವಾಲು ಇಲ್ಲಿದೆ.
Find my orange cat
byu/hakunamagabi inFindTheSniper ಇದನ್ನೂ ಓದಿ
ಆಪ್ಟಿಕಲ್ ಇಲ್ಯೂಷನ್ ನೋಡಿದ ತಕ್ಷಣ ನೀವು ಗೊಂದಲಕ್ಕೆ ಒಳಗಾಗುವುದು ಸಹಜ. ಮೊದಲ ನೋಟಕ್ಕೆ ಈ ಒಗಟು ಬಿಡಿಸಲು ನಿಮಗೆ ಕಷ್ಟಕರ ಎಂದೆನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಉತ್ತರ ಸುಲಭದಾಯಕವಾಗಿದೆ. ತಾಳ್ಮೆಯಿಂದ ಈ ಚಿತ್ರವನ್ನು ನೋಡಿ, ಇದರಲ್ಲಿ ಅಡಗಿರುವ ಬೆಕ್ಕನ್ನು ನೀವು ಕಂಡು ಹಿಡಿಯಿರಿ. ಈ ಕಠಿಣ ಸವಾಲಿನ ಚಿತ್ರವನ್ನು ಬಿಡಿಸಲು ರೆಡಿ ಇದ್ದೀರಾ ಎಂದು ನಾವು ಅಂದುಕೊಳ್ಳುತ್ತೇವೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ನೋಡೋಣ
ಸಮಯ ಮಿತಿಯಿಲ್ಲದಿದ್ದರೂ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಆದರೆ ನೀವು ರೂಫಸ್ ಅನ್ನು ಹುಡುಕಲಾಗದಿದ್ದರೆ, ಚಿಂತಿಸಬೇಡಿ. ರೂಫಸ್ ಎಂಬ ಬೆಕ್ಕು ಬಲಭಾಗದಲ್ಲಿರುವ ದೊಡ್ಡ ನೀರಿನ ಜಗ್ ಹಿಂದೆ ಅಡಗಿಕೊಂಡಿದೆ. ಅಮೆಜಾನ್ ಪೆಟ್ಟಿಗೆಯೊಳಗಿದ್ದು, ಅದರ ಪಕ್ಕದಲ್ಲಿ ಇರಿಸಲಾದ ಬಟ್ಟೆಯ ದುಂಡಗಿನ ರಂಧ್ರದ ಮೂಲಕ ಇಣುಕುತ್ತಿರುವುದನ್ನು ಕಾಣಬಹುದು. ಪೆಟ್ಟಿಗೆಯ ಮೇಲ್ಭಾಗದಿಂದ ಬೆಕ್ಕಿನ ಮುಖ ಮತ್ತು ಕಣ್ಣುಗಳ ಒಂದು ಸಣ್ಣ ಭಾಗ ಮಾತ್ರ ಗೋಚರಿಸುತ್ತದೆ. ಸರಿಯಾಗಿ ನೋಡಿದರೆ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Tue, 14 October 25