Video: ಕ್ರಿಯೇಟಿವಿ ಅಂದ್ರೆ ಇದೇ ಇರ್ಬೇಕು; ಒಳ ಉಡುಪನ್ನು ಬ್ಯಾಗ್ ಆಗಿ ಪರಿವರ್ತಿಸಿದ ಭಾರತೀಯ ನಾರಿ
ಭಾರತೀಯರು ಈ ಕೆಲವು ವಿಚಾರದಲ್ಲಿ ಅತೀ ಬುದ್ಧಿವಂತರು. ಹಳೆಯ ವಸ್ತುಗಳಿದ್ದರೆ ಅದನ್ನು ಎಸೆಯುವ ಬದಲು ಅದಕ್ಕೊಂದು ಹೊಸ ರೂಪ ನೀಡಿ ಬಳಸುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಪುರುಷರ ಒಳ ಉಡುಪನ್ನು ಬ್ಯಾಗ್ ಆಗಿ ಪರಿವರ್ತಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ (talent) ಯಾವ ಕೊರತೆಯಿಲ್ಲ. ಹೀಗಾಗಿ ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ಹಳೆಯ ವಸ್ತುಗಳಿಗೆ ಹೊಸ ರೂಪ ನೀಡುತ್ತಾರೆ. ಕ್ರಿಯೇಟಿವಿ ಬಳಸಿ ಮಾಡುವ ಸಣ್ಣ ಪುಟ್ಟ ಆವಿಷ್ಕಾರಗಳ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತದೆ. ಇಲ್ಲೊಬ್ಬ ಮಹಿಳೆಯ ಬುದ್ಧಿವಂತಿಕೆಗೆ ಈ ವಿಡಿಯೋನೇ ಸಾಕ್ಷಿ. ಹೌದು, ನೀವೇನಾದ್ರೂ ತರಕಾರಿಕೊಳ್ಳಲು ಮಾರುಕಟ್ಟೆಗೆ ಹೋಗ್ತೀರಾ ಅಂತಾದ್ರೆ ಪ್ಲಾಸ್ಟಿಕ್ ಅಥವಾ ಬಟ್ಟೆ ಚೀಲವನ್ನು ತೆಗೆದುಕೊಂಡು ಹೋಗ್ತೀರಾ. ಆದ್ರೆ ಮಹಿಳೆಯೊಬ್ಬಳು ಪುರುಷರ ಒಳ ಉಡುಪುನ್ನು (Underwear) ಬ್ಯಾಗ್ ಆಗಿ ಪರಿವರ್ತಿಸಿದ್ದು ತರಕಾರಿ ಹಾಕಲು ಬಳಸಿದ್ದಾಳೆ. ಈ ದೃಶ್ಯವೊಂದು ಬಳಕೆದಾರರ ಗಮನ ಸೆಳೆಯುತ್ತಿದೆ.
mr-meme -here ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿದ್ದಾಳೆ. ಆದರೆ ಆಕೆಯ ಬಳಿಯಿರುವ ಬ್ಯಾಗ್ ಎಲ್ಲರ ಗಮನ ಸೆಳೆದಿದೆ. ಪುರುಷರ ಒಳ ಉಡುಪನ್ನೇ ಬ್ಯಾಗ್ ಆಗಿ ಪರಿವರ್ತಿಸಿ ಅದರಲ್ಲೇ ತರಕಾರಿಗಳನ್ನು ಒಯ್ದಿದ್ದಾಳೆ. ತರಕಾರಿಗಳನ್ನು ನೇರವಾಗಿ ಚಡ್ಡಿ ಬ್ಯಾಗ್ ಒಳಗೆ ಹಾಕಿಕೊಳ್ಳುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಇದು ಮ್ಯಾಜಿಕ್ ಅಲ್ಲ ಮೋಸ, ಪಾರಿವಾಳ ಹೇಗೆ ಬಂತು ನೋಡಿ
ಈ ವಿಡಿಯೋ ನಲವತ್ತೆಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಐದು ನಿಮಿಷದ ಕ್ರಾಫ್ಟ್ ಎಂದಿದ್ದಾರೆ. ಇನ್ನೊಬ್ಬರು ಒಳಉಡುಪನ್ನು ಹೀಗೂ ಬಳಸಬಹುದೆಂದು ತೋರಿಸಿಕೊಟ್ಟ ಏಕೈಕ ಮಹಿಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಆಂಡರ್ ವೇರ್ ಆಂಡರ್ ಕವರ್ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 14 October 25








