AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಯಾರಿಂದಲೂ ಹೀಗೆ ಕೊಲೆ ಮಾಡಲು ಸಾಧ್ಯವಿಲ್ಲ

ನಮ್ಮಲ್ಲಿ ಕೆಲವರ ವಿಚಿತ್ರ ನಡವಳಿಕೆ, ಹವ್ಯಾಸಗಳನ್ನು ಕಂಡ್ರೆ ಶಾಕ್ ಆಗುತ್ತೆ. ಇಂತಹ ಜನರು ಇರ್ತಾರಾ ಎಂದೆನಿಸುತ್ತದೆ. ನೀವೆಲ್ಲಾ ಹಳೆಯ ನ್ಯಾಣಗಳನ್ನು, ತಮ್ಮ ಇಷ್ಟದ ಪುಸ್ತಕಗಳನ್ನು ಸಂಗ್ರಹಿಸಿಡುವುದನ್ನು ನೋಡಿರ್ತೀರಾ. ಆದರೆ ಈ ವ್ಯಕ್ತಿ ಮಾತ್ರ ಸ್ವಲ್ಪ ವಿಭಿನ್ನ. ಸೊಳ್ಳೆಯನ್ನು ಸಾಯಿಸಿ ಅದನ್ನು ಸಂಗ್ರಹಿಸಿಡೋದು ಈ ವ್ಯಕ್ತಿಯ ಹವ್ಯಾಸವಂತೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಯಾರಿಂದಲೂ ಹೀಗೆ ಕೊಲೆ ಮಾಡಲು ಸಾಧ್ಯವಿಲ್ಲ
ಸೊಳ್ಳೆ ಸಂಗ್ರಹಿಸುವ ಹವ್ಯಾಸImage Credit source: Facebook
ಸಾಯಿನಂದಾ
|

Updated on: Sep 18, 2025 | 3:04 PM

Share

ಈ ಜಗತ್ತಿನಲ್ಲಿ ಎಂತೆಂಹ ಜನರು ಇರ್ತಾರೆ ಎಂದು ಇದಕ್ಕೆ ಹೇಳೋದು ಇರ್ಬೇಕು. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಅಭಿರುಚಿ ಹಾಗೂ ಹವ್ಯಾಸ (hobbies) ಗಳು ಭಿನ್ನವಾಗಿರುತ್ತದೆ. ಹೀಗಾಗಿ ಕೆಲವರು ತಮ್ಮ ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ರೀಲ್ಸ್ ಮಾಡುವುದು, ಸಿನಿಮಾ ನೋಡುವುದು ಇಲ್ಲವಾದ್ರೆ ಕ್ರಾಫ್ಟ್ ಸೇರಿದಂತೆ ಇನ್ನಿತ್ತರ ಆಸಕ್ತಿದಾಯಕ ಹವ್ಯಾಸವನ್ನು ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯದ್ದು ಸೊಳ್ಳೆ ಸಂಗ್ರಹಿಸುವುದು ಹವ್ಯಾಸ. ಹೌದು, ಸೊಳ್ಳೆ (mosquitoes) ಗಳನ್ನು ಸಾಯಿಸಿ ಅದರ ಸಮಯವನ್ನು ಉಲ್ಲೇಖಿಸುತ್ತಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Bright Life ಹೆಸರಿನ ಖಾತೆಯಲ್ಲಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು,. ವ್ಯಕ್ತಿಯೊಬ್ಬ ತನಗೆ ಕಚ್ಚುವ ಸೊಳ್ಳೆಯನ್ನು ಸಾಯಿಸಿ ಸಂಗ್ರಹಿಸಿಡುವುದನ್ನು ನೋಡಬಹುದು. ಹೌದು, ಸೊಳ್ಳೆಯನ್ನು ಸಾಯಿಸುವ ವಿಧಾನವು ಭಿನ್ನವಾಗಿದ್ದು, ಡಬ್ಬದಲ್ಲಿ ಸೊಳ್ಳೆಯನ್ನು ಹಾಕಿ ಶಾಕ್ ಟ್ರೀಟ್ ಮೆಂಟ್ ನೀಡುವ ಮೂಲಕ ಸಾಯಿಸಲಾಗುತ್ತದೆ. ಆ ಬಳಿಕ ಸೊಳ್ಳೆಯನ್ನು ಬಿಳಿ ಹಾಳೆಯ ಮೇಲೆ ಅಂಟಿಸಿ ಅದರ ಹೆಸರು, ಸಮಯ, ನಮೂದಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
Image
ಮಹಿಳೆಯರಿಗೆ ಪಕ್ಕದ ಮನೆಯ ಜಗಳಗಳನ್ನು ಕದ್ದು ನೋಡೋದೆಂದ್ರೆ ಎಷ್ಟು ಇಷ್ಟ ನೋಡಿ
Image
ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಹುಚ್ಚು ಪ್ರೇಮಿ
Image
ಈಗಷ್ಟೇ ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ
Image
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವಾರು ಜನರು ವೀಕ್ಷಿಸಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ ಸೊಳ್ಳೆ ಕೂಡ ದೇವರ ಸೃಷ್ಟಿಯೇ… ನಮಗೆ ರೋಗ ತರೋ ದುರುದ್ದೇಶ ಅದಕ್ಕೆ ಖಂಡಿತ ಇಲ್ಲ. ಅದರ ಉದ್ದೇಶ ತನ್ನ ಏಳು ದಿನಗಳ ಜೀವಿತಾವಧಿಯಲ್ಲಿ ಒಮ್ಮೆ ಆದ್ರೂ ರಕ್ತ ಕುಡಿಯ ಬೇಕು ಅನ್ನೋದು ಅಷ್ಟೇ. ಇದೆಲ್ಲಾ ಗೊತ್ತಿದ್ರು ದಿನಕ್ಕೆ ಕನಿಷ್ಠ ಅಂದ್ರು 20 ಸೊಳ್ಳೆ ಹೊಡೆದು ಸಾಯಿಸಿಯೇ ಮಲಗೋದು ನಾನು ಎಂದಿದ್ದಾರೆ.

ಇದನ್ನೂ ಓದಿ: Video: ಕರೆ ಮಾಡಿದಾಗ ಬ್ಯುಸಿ ಬಂದ ಲವ್ವರ್‌ ಫೋನ್;‌ ಕೋಪದಲ್ಲಿ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರಿಯಕರ

ಇನ್ನೊಬ್ಬರು ಬಹುಷಃ ಇವನೊಬ್ಬ ಮಾನಸಿಕ ರೋಗಿ ಆಗಿರಲು ಬಹುದು. ಈತನಿಗೆ ಮಾಡೋಕೆ ಬೇರೆ ಕೆಲಸ ಇದ್ದಂತಿಲ್ಲ. ಕೊಂದ ಸೊಳ್ಳೆ ಶವದ ಕಳೇಬರವನ್ನು ಪುಸ್ತಕದಲ್ಲಿ ಅಂಟಿಸಿ ಮರಣ ದಿನಾಂಕವನ್ನು ನಮೂದಿಸಿ, ಟೇಪನನ್ನು ಹೊದಿಕೆಯ ಸಂಸ್ಕಾರ ಮಾಡುವುದೇ ಕಾಯಕ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೆಲಸ ಇಲ್ಲದ ಮನುಷ್ಯ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ