
ದಿನಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳನ್ನು ನೋಡುತ್ತಿರುತ್ತೀರಿ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಬಿಡಿಸುವುದು ಅಷ್ಟೇ ಕಷ್ಟಕರ. ಆದರೆ ಕೆಲವರು ಎಷ್ಟೇ ಸಮಯ ತೆಗೆದುಕೊಂಡರೂ ಈ ಒಗಟುಗಳನ್ನು ಬಿಡಿಸಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಮೊಸಳೆಯನ್ನು ಹದಿಮೂರು ಸೆಕೆಂಡುಗಳೊಳಗೆ ಪತ್ತೆ ಹಚ್ಚುವ ಸವಾಲು ಇಲ್ಲಿದೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೆದುಳಿಗೆ ಕೆಲಸ ನೀಡುತ್ತದೆ. ಆದರೆ ನಿಯಮಿತವಾಗಿ ಇಂತಹ ಒಗಟು ಬಿಡಿಸುವುದು ನಿಮ್ಮ ಮೆದುಳನ್ನು ಚುರುಕಾಗಿಸುತ್ತದೆ. ಆದರೆ ಈ ಚಿತ್ರದಲ್ಲಿ ಶಾಂತ ನದಿ ತೀರದ ಪಿಕ್ನಿಕ್ ದೃಶ್ಯವನ್ನು ನೋಡಬಹುದು. ಶಾಂತವಾಗಿರುವ ಈ ಪರಿಸರದಲ್ಲಿ ಮೊಸಳೆಯೊಂದು ಅಡಗಿ ಕುಳಿತಿದ್ದು ಅದನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಸುಂದರವಾದ ಚಿತ್ರದಲ್ಲಿರುವ ಮೊಸಳೆಯನ್ನು ಹುಡುಕಲು ನಿಮಗೆ 13 ಸೆಕೆಂಡುಗಳಿವೆ. ನೀವು ಸವಾಲಿಗೆ ಸಿದ್ಧರಿದ್ದೀರಾ? ಹಾಗಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.
ಇದನ್ನೂ ಓದಿ:ಬಂಡೆಗಳಿಂದ ಆವೃತ್ತವಾದ ಈ ಬೆಟ್ಟದಲ್ಲಿ ಅಡಗಿ ಕುಳಿತಿರುವ ಕುರಿಯನ್ನು ಹುಡುಕಬಲ್ಲಿರಾ
ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು ನಿಮಗೆ ಕೊಟ್ಟಿರುವ ಸಮಯಾವಕಾಶದಲ್ಲಿ ಒಗಟು ಬಿಡಿಸಲು ಸಾಧ್ಯವಾಯಿತೇ. ಒಂದು ವೇಳೆ ಉತ್ತರ ಸಿಕ್ಕಿದರೆ ನಿಮಗೆ ಅಭಿನಂದನೆಗಳು. ಆದರೆ ಈ ಫೋಟೋದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಮೊಸಳೆಯೂ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ. ನೀವು ಭರವಸೆಯನ್ನು ಕಳೆದುಕೊಳ್ಳದೇ ಮೊಸಳೆಯನ್ನು ಹುಡುಕಿ. ಸಮಯ ಮೀರಿ ಹೋದರೂ ನಿಮಗೆ ಮೊಸಳೆಯೂ ಸಿಕ್ಕೇ ಸಿಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ