
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಆಟಗಳನ್ನು ಹೆಚ್ಚಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಈ ಒಗಟುಗಳನ್ನು ಬಿಡಿಸುವುದರಲ್ಲಿ ಸಮಯ ಕಳೆಯುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಕೆಲವೊಮ್ಮೆ ಕಣ್ಣನ್ನು ಮೋಸಗೊಳಿಸಿ ಭ್ರಮೆಯಲ್ಲಿ ಸಿಲುಕಿಸಲು ಬಹುದು. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಚ್ಚ ಹಸಿರಿನ ಕಾಡಿನಲ್ಲಿ ಜಿಂಕೆಯೊಂದು (deer) ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶವಿದೆ. ಆದರೆ ಇಲ್ಲಿ ನೀಡಿರುವ ಟೈಮ್ ಒಳಗೆ ಈ ಒಗಟನ್ನು ಚಿತ್ರ ಬಿಡಿಸಲು ಸಾಧ್ಯವಾದರೆ ನೀವು ಜಾಣರು ಎಂದರ್ಥ.
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಮೊದಲ ನೋಟದಲ್ಲೇ ನಿಮ್ಮ ಕಣ್ಣಿಗೆ ಹಚ್ಚ ಹಸಿರಿನ ಕಾಡು ಕಾಣಿಸುತ್ತದೆ. ಇಲ್ಲಿ ಮರಗಿಡಗಳು ಹಾಗೂ ಬಂಡೆಗಳು ಹಸಿರು ಬಣ್ಣದಲ್ಲಿವೆ. ಈ ಹಚ್ಚಹಸಿರಿನಿಂದ ಆವೃತ್ತವಾದ ಈ ಕಾಡಿನಲ್ಲಿ ಜಿಂಕೆಯೊಂದು ಅಡಗಿಕೊಂಡಿದೆ. ಈ ಫೋಟೋದಲ್ಲಿರುವ ಸವಾಲು ಜಿಂಕೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ಹತ್ತು ಸೆಕೆಂಡುಗಳೊಳಗೆ ಈ ಜಿಂಕೆಯನ್ನು ಕಂಡು ಹಿಡಿಯಲು ಪ್ರಯತ್ನಿಸಿ.
ಇದನ್ನೂ ಓದಿ:Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯಿರಿ
ನಮ್ಮ ಆಲೋಚನಾ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಮೆದುಳನ್ನು ಸಿದ್ಧಪಡಿಸುವಲ್ಲಿ ಒಗಟುಗಳು ಈ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಈ ಒಗಟಿನ ಚಿತ್ರದಲ್ಲಿ 10 ಸೆಕೆಂಡುಗಳಲ್ಲಿ ಜಿಂಕೆಯನ್ನು ಹುಡುಕಬೇಕು. ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳಲೇಬೇಕು. ನೀವು ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜಿಂಕೆ ಎಲ್ಲಿದೆ ಎಂದು ನೋಡಿ. ಆದರೆ ಕೆಲವೇ ಕೆಲವೂ ಜನರು ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ನಾವೇ ನಿಮಗೆ ಜಿಂಕೆ ಎಲ್ಲಿದೆ ಎಂದು ಈ ಹೇಳುತ್ತೇವೆ. ಈ ಮೇಲಿನ ಫೋಟೋವನ್ನು ನೋಡಿ, ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿರುವುದನ್ನು ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ