Optical Illusion: ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಗುರುತಿಸಿ ಜಾಣರು ಎನಿಸಿಕೊಳ್ಳಿ
ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರತಿನಿತ್ಯ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಕರಡಿಯೊಂದು ಅಡಗಿದೆ. ಈ ಪ್ರಾಣಿಯನ್ನು ನಿರ್ದಿಷ್ಟ ಸೆಕೆಂಡುಗಳ ಒಳಗೆ ಕಂಡುಹಿಡಿಯಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ಈ ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸಿ.

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಇನ್ನು ಕೆಲವರಿಗೆ ಕಠಿಣ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕೂಡ ಟ್ರಿಕ್ಕಿ ಒಗಟುಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳಲ್ಲಿ ಉತ್ತರ ಹುಡುಕುವ ಮೂಲಕ ಮೆದುಳಿಗೆ ವ್ಯಾಯಾಮದೊಂದಿಗೆ ಬ್ರೈನ್ ಶಾರ್ಪ್ ಆಗಿಸುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಬಿಳಿ ಕರಡಿಯೊಂದು ಅಡಗಿದೆ. ಹದಿನೈದು ಸೆಕೆಂಡುಗಳಲ್ಲಿ ಈ ಕರಡಿಯನ್ನು ಕಂಡು ಹಿಡಿಯಬೇಕು. ಒಂದು ವೇಳೆ ನೀವು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಲು ಸಾಧ್ಯವಾದ್ರೆ ನೀವು ಶಾರ್ಪ್ ಇದ್ದೀರಾ ಎಂದರ್ಥ.
ಈ ಭ್ರಮೆ ಉಂಟು ಮಾಡುವ ಈ ಚಿತ್ರದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಹಿಮದಿಂದ ಆವೃತ್ತವಾದ ಸ್ಥಳವನ್ನು ಕಾಣಬಹುದು. ಇಲ್ಲಿ ಮಕ್ಕಳು ಆಟ ಆಡುತ್ತಿರುವುದನ್ನು ನೋಡಬಹುದು. ಕುಟುಂಬವೊಂದು ತಮ್ಮ ಅಮೂಲ್ಯ ಸಮಯವನ್ನು ಇಲ್ಲಿ ಕಳೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಬಿಳಿ ಕರಡಿಯೊಂದು ಅಡಗಿದೆ. ಅದನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಸವಾಲನ್ನು ಪೂರ್ಣಗೊಳಿಸಲು ಇರುವ ಸಮಯವಕಾಶ 15 ಸೆಕೆಂಡುಗಳು ಮಾತ್ರ. ಇಂತಿಷ್ಟು ಸಮಯದೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ಎಂದು ಪ್ರಯತ್ನಿಸಿ.
ಇದನ್ನೂ ಓದಿ :Optical Illusion: ಈ ಚಿತ್ರದಲ್ಲಿ ಅಡಗಿರುವ ಕಾಳಿಂಗ ಸರ್ಪಗಳನ್ನು ಕಂಡುಹಿಡಿಯಿರಿ
ನಿಮ್ಮ ಕಣ್ಣಿಗೆ ಕರಡಿ ಕಂಡಿತೇ?

ಈ ಚಿತ್ರದಲ್ಲಿರುವ ಬಿಳಿ ಕರಡಿಯನ್ನು ಹದಿನೈದು ಸೆಕೆಂಡುಗಳಲ್ಲಿ ಹುಡುಕಲು ಸಾಧ್ಯವಾದರೆ ಅನುಭವವಿ ಹಾಗೂ ಬುದ್ಧಿವಂತರು ಎನ್ನುವುದು ಖಚಿತವಾಗುತ್ತದೆ. ಆದರೆ ನೀವೆಷ್ಟು ಹುಡುಕಿದರೂ ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ಸೂಕ್ಷ್ಮವಾಗಿ ಬಹಳ ಹತ್ತಿರದಿಂದ ಗಮನಿಸಿ, ಈ ಚಿತ್ರದಲ್ಲಿ ಕರಡಿ ಎಲ್ಲಿದೆ ಎಂದು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








