Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಿ
ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಒಗಟಿನ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ಒಗಟುಗಳನ್ನು ಬಿಡಿಸುವುದು ಕಷ್ಟವಾದರೂ ಈ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ. ಇದೀಗ ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ತೆಂಗಿನ ಮರದ ಮೇಲೆ ಹಲ್ಲಿಯೊಂದು ಅಡಗಿ ಕುಳಿತಿದ್ದು, ಇದನ್ನು ಹುಡುಕುವ ಸವಾಲು ನೀಡಲಾಗಿದೆ.

ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುತ್ತಿದ್ದರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಹೆಚ್ಚಿನವರು ಇಂತಹ ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸುತ್ತಾರೆ. ಈ ಚಿತ್ರವನ್ನು ನೋಡಿದ ಕೂಡಲೇ ಉತ್ತರ ಕಂಡುಕೊಳ್ಳಲು ಕಷ್ಟವಾಗಬಹುದು. ಎಷ್ಟೋ ಸಲ ಭ್ರಮೆಯಲ್ಲಿ ಸಿಲುಕಿಸಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗುವುದೇ ಇಲ್ಲ. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ತೆಂಗಿನ ಮರದ ಕಾಂಡದ ಮೇಲೆ ಮರೆಮಾಡಲಾಗಿರುವ ಹಲ್ಲಿಯನ್ನು ಕಂಡು ಹಿಡಿಯಲು ಸಿದ್ಧವಿದ್ರೆ ಈಗಿನಿಂದಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
Key- Sentence1407 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರದಲ್ಲಿ ತೆಂಗಿನ ಮರವನ್ನು ಕಾಣಬಹುದು. ಅದರ ಒರಟಾದ, ಉಂಗುರಾಕಾರದ ತೊಗಟೆ ಹಾಗೂ ನಾರಿನ ಪದರಗಳಿವೆ. ಹಚ್ಚ ಹಸಿರಿನ ಗರಿಯೂ ಎಲ್ಲೆಡೆ ಚಾಚಿದ್ದು, ಮರದ ಮೇಲೆ ಹಲ್ಲಿಯನ್ನು ಮರೆಮಾಡಲಾಗಿದೆ. ಅದನ್ನು ಹುಡುಕುವ ಬಹುದೊಡ್ಡ ಸವಾಲು ನಿಮಗಿದೆ. ಈ ಒಗಟು ಬಿಡಿಸಲು ಸಮಯಾವಕಾಶವಿಲ್ಲದಿದ್ರೂ ಎಷ್ಟು ಬೇಗ ಬಿಡಿಸುತ್ತಿರೋ ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?
ಈ ಚಿತ್ರದಲ್ಲಿರುವ ತೆಂಗಿನ ಮರವನ್ನು ಗಮನಿಸಿದಾಗ ನಿಮ್ಮ ಕಣ್ಣಿಗೆ ಹಲ್ಲಿಯೂ ಕಾಣುವುದಿಲ್ಲ. ಇಂತಹ ಕೆಲವು ಒಗಟನ್ನು ಬಿಡಿಸುವಾಗ ಹೆಚ್ಚು ಗಮನ ಹರಿಸುವುದು ಮುಖ್ಯ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಸಾಮಾನ್ಯವಾಗಿ ನೀವು ಗೊಂದಲಕ್ಕೆ ಒಳಗಾಗುತ್ತೀರಿ. ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಗಮನಹರಿಸಿ ಹಲ್ಲಿ ಎಲ್ಲಿದೆ ಎಂದು ಹುಡುಕಿ. ಒಂದು ವೇಳೆ ನಿಮ್ಮ ಕಣ್ಣಿಗೆ ಹಲ್ಲಿಯೂ ಬಿದ್ದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಅತ್ಯುತ್ತಮವಾಗಿದೆ ಎನ್ನುವುದು ಖಾತರಿಯಾಗುತ್ತದೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಗುರುತಿಸಿ ಜಾಣರು ಎನಿಸಿಕೊಳ್ಳಿ
ನಿಮ್ಮ ಕಣ್ಣಿಗೆ ಹಲ್ಲಿ ಬಿದ್ದಿತೆ?
ಎಷ್ಟೇ ಪ್ರಯತ್ನಪಟ್ಟರೂ ಈ ತೆಂಗಿನ ಮರದಲ್ಲಿ ಹಲ್ಲಿ ಎಲ್ಲಿದೆ ಎಂದು ಹೇಳಲು ನಿಮ್ಮಿಂದ ಸಾಧ್ಯವಾಗಿಲ್ಲವೇ, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಲು ತಾಳ್ಮೆ ಅಗತ್ಯ. ಒಮ್ಮೆ ಏಕಾಗ್ರತೆಯಿಂದ ಈ ಚಿತ್ರದತ್ತ ಕಣ್ಣು ಹಾಯಿಸಿ, ಹಲ್ಲಿ ಎಲ್ಲಿದೆ ಎಂದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sun, 28 September 25








