Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ

ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳನ್ನು ಬಿಡುಸುವುದಲ್ಲಿರುವ ಖುಷಿಯೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಈ ಟ್ರಿಕ್ಕಿ ಒಗಟುಗಳನ್ನು ಬಿಡಿಸುವತ್ತ ಹೆಚ್ಚಿನವರು ಆಸಕ್ತಿ ತೋರಿಸುತ್ತಾರೆ. ಇದೀಗ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕುವ ಸವಾಲು ನಿಮ್ಮ ಮುಂದಿದೆ. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Jan 11, 2026 | 9:45 AM

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಕಣ್ಣು ಹಾಯಿಸಿದ್ದಲೆಲ್ಲಾ ಮೆದುಳಿಗೆ ವ್ಯಾಯಾಮ ನೀಡುವ ಒಗಟಿನ ಆಟಗಳೇ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುವುದಲ್ಲದೇ, ಒಗಟು ಬಿಡಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಎಂದು ಪರೀಕ್ಷಿಸುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವ ಟ್ರಿಕ್ಕಿ ಒಗಟು ಇಲ್ಲಿದೆ. ಈ ಉದ್ಯಾನವನದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ನಾಯಿಯನ್ನು ಪತ್ತೆ ಹಚ್ಚಬೇಕು. ಈ ಕಠಿಣ ಒಗಟನ್ನು ಬಿಡಿಸಲು ಇರುವ ಕಾಲಾವಕಾಶ 15 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.

ಈ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳೇ ಹಾಗೆ, ನಮಗೆ ಕಾಣುವುದೇ ಒಂದು. ಅದರಲ್ಲಿ ಅಡಗಿರುವುದೇ ಇನ್ನೊಂದು ಆಗಿರುತ್ತದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಉದ್ಯಾನವನವೊಂದು ಕಾಣಿಸುತ್ತದೆ. ರೆಂಬೆ ಕೊಂಬೆಗಳನ್ನು ಚಾಚಿ ನಿಂತಿರುವ ಎರಡು ಮರವನ್ನು ಕಾಣಬಹುದು. ಈ ಮರದಲ್ಲಿ ಎಲೆಗಳು ಒಣಗಿ ಉದುರಿ ಹೋಗಿವೆ. ನೆಲದ ಮೇಲೆ ಬಿದ್ದಿರುವ ಒಣ ಎಲೆಗಳ ರಾಶಿಯನ್ನು ಕಾಣಬಹುದು. ಇದೆಲ್ಲದರ ನಡುವೆ ನಾಯಿಯೊಂದು ಅಡಗಿ ಕುಳಿತಿದೆ. ಈ ಶ್ವಾನವನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಕಣ್ಣು ಬಿಟ್ಟು ಚಿತ್ರ ನೋಡಿ ನಾಯಿಯನ್ನು ಪತ್ತೆ ಹಚ್ಚಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ

ನಿಮ್ಮ ಕಣ್ಣಿಗೆ ನಾಯಿ ಕಾಣಿಸಿತೇ?

ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರಗಳನ್ನು ನೋಡಿದಾಗಲು ಹಾಗೆಯೇ ಅನಿಸುತ್ತದೆ. ಈ ಉದ್ಯಾನವನದಲ್ಲಿರುವ ಶ್ವಾನವನ್ನು ಹುಡುಕುವುದು ಸುಲಭವೆನಿಸಿದರೂ ಟ್ರಿಕ್ಕಿಯಾಗಿದೆ. ನೀವು ಈ ಒಗಟು ಬಿಡಿಸುವಲ್ಲಿ ಸೋತಿದ್ದೀರಾ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಉದ್ಯಾನವನದಲ್ಲಿ ನಾಯಿ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ