Optical Illusion: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ
ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಟ್ರಿಕ್ಕಿಯಾಗಿರುತ್ತದೆ. ಕೆಲವರು ಇಂತಹ ಚಿತ್ರಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಕಂಡುಹಿಡಿಯುವ ಸವಾಲು ಇದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭ, ಇನ್ನು ಕೆಲವರಿಗೆ ಕಷ್ಟಕರ. ಈ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಆದರೆ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಕಣ್ಣು ಬಿಟ್ಟು ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ.
ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಏನು ಕಾಣಿಸಿತು?

ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರವು ನೋಡುವುದಕ್ಕೆ ಸುಲಭವಾಗಿ ಕಂಡರೂ ಟ್ರಿಕ್ಕಿಯಾಗಿರುತ್ತದೆ. ಇದೀಗ ಈ ಚಿತ್ರವೂ ಅಷ್ಟೇ ಕಠಿಣ ಸವಾಲಿನದ್ದಾಗಿದ್ದು, ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಮೂವರು ಕಾಡಿನಲ್ಲಿ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ನಾಲ್ಕನೇ ವ್ಯಕ್ತಿಯೂ ಇಲ್ಲಿ ಅಡಗಿ ಕುಳಿತಿದ್ದಾನೆ. ಈ ವ್ಯಕ್ತಿಯನ್ನು ಗುರುತಿಸುವುದೇ ಇಲ್ಲಿರುವ ಸವಾಲು. ಏಳು ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ
ನಾಲ್ಕನೇ ವ್ಯಕ್ತಿ ನಿಮ್ಮ ಕಣ್ಣಿಗೆ ಬಿದ್ದನೇ?
ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ವ್ಯಕ್ತಿಯನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ನೇರವಾಗಿ ನೋಡಬೇಡಿ. ನಿಮ್ಮ ಫೋನ್‌ನ್ನು ತಿರುಗಿಸಿ ಅಥವಾ ಬೇರೆ ದೃಷ್ಟಿ ಕೋನದಿಂದ ನೋಡಲು ಪ್ರಯತ್ನಿಸಿ. ಮರಗಳ ನಡುವಿನ ಸ್ಥಳಗಳು ಮತ್ತು ನೆರಳುಗಳಿಂದ ರಚಿಸಲಾದ ಆಕಾರಗಳ ಮೇಲೆ ಕೇಂದ್ರೀಕರಿಸಿ. ಆಗ ಮಾತ್ರ ಮನುಷ್ಯನ ಆಕೃತಿಯನ್ನು ಕಾಣಲು ಸಾಧ್ಯ. ಈ ಎಲ್ಲಾ ಸುಳಿವು ನೀಡಿದರೂ ನಾಲ್ಕನೇ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಿಲ್ಲವೇ. ನಾವೇ ಉತ್ತರವನ್ನು ಹೇಳುತ್ತೇವೆ. ಮರದ ಕಾಂಡಗಳ ನಡುವಿನ ಖಾಲಿ ಜಾಗದಲ್ಲಿ ನಾಲ್ಕನೇ ವ್ಯಕ್ತಿಯನ್ನು ಜಾಣತನದಿಂದ ಇರಿಸಲಾಗಿದೆ. ನಾವು ನಾಲ್ಕನೇ ವ್ಯಕ್ತಿಯನ್ನು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
