Optical Illusion: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ
ಮೆದುಳಿಗೆ ಕಸರತ್ತು ನೀಡುವ ಆಟಗಳನ್ನು ಆಡುವುದರಲ್ಲಿರುವ ಮಜಾನೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಟ್ರಿಕ್ಕಿ ಒಗಟಿನ ಆಟಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಮೆದುಳಿಗೆ ಹುಳ ಬಿಡುತ್ತದೆ. ಈ ಎರಡು ಚಿತ್ರದಲ್ಲರುವ ವ್ಯತ್ಯಾಸಗಳನ್ನು ಗುರುತಿಸುವುದೇ ಸವಾಲು. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ

ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಖಂಡಿತ ನೆರವಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದ್ದಲ್ಲೆಲಾ ಈ ಒಗಟಿನ ಚಿತ್ರಗಳು ಕಾಣ ಸಿಗುತ್ತವೆ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಈ ಚಿತ್ರಗಳ ನಡುವೆ ಮೂರು ವ್ಯತ್ಯಾಸಗಳಿವೆ, ನೀವು ಅದನ್ನು 45 ಸೆಕೆಂಡುಗಳೊಳಗೆ ಕಂಡು ಹಿಡಿಯಬೇಕು.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸುತ್ತದೆ?

ಒಗಟುಗಳನ್ನು ಬಿಡಿಸುವ ಮೂಲಕ ನಿಮ್ಮ ಮೆದುಳಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಈ ಇಲ್ಯೂಷನ್ ಚಿತ್ರದಲ್ಲಿ ಪುಟ್ಟ ಹುಡುಗಿಯೊಬ್ಬಳು ಮಳೆಯಲ್ಲಿ ಕೊಡೆ ಹಿಡಿದು ಆಟವಾಡುತ್ತಿದ್ದಾಳೆ. ಇಲ್ಲಿರುವ ಎರಡು ಚಿತ್ರಗಳು ಒಂದೇ ರೀತಿ ಕಂಡರೂ ಇದರಲ್ಲಿ ಮೂರು ಸಣ್ಣ ವ್ಯತ್ಯಾಸಗಳಿವೆ. ಎರಡು ಫೋಟೋಗಳ ನಡುವಿನ ವ್ಯತ್ಯಾಸಗಳನ್ನು 45 ಸೆಕೆಂಡುಗಳೊಳಗೆ ಕಂಡುಹಿಡಿಯಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ
ಈ ಒಗಟು ಬಿಡಿಸಲು ಸಾಧ್ಯವಾಯಿತೇ?
ಈ ಎರಡು ಚಿತ್ರಗಳಲ್ಲಿನ ವ್ಯತ್ಯಾಸವನ್ನು ಕಂಡು ಹಿಡಿಯಲು ರೆಡಿ ಇದ್ರೆ ಈ ಚಿತ್ರಗಳತ್ತ ಕಣ್ಣು ಹಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಇಲ್ಲಿ ನೀಡಿರುವ ಸಮಯದೊಳಗೆ ಮೂರು ವ್ಯತ್ಯಾಸಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ. ನಾವೇ ಆ ವ್ಯತ್ಯಾಸಗಳನ್ನು ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
