Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ
ಸುಮ್ಮನೆ ಕುಳಿತಿರುವಾಗ ಹೆಚ್ಚಿನವರು ಇಲ್ಯೂಷನ್ ಸೇರಿದಂತೆ ಒಗಟಿನ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಇದು ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಒಗಟಿನ ಚಿತ್ರಗಳತ್ತ ಕಣ್ಣಾಯಿಸುವವರಲ್ಲಿ ನೀವು ಒಬ್ಬರಾಗಿದ್ದರೆ ಇದೀಗ ನಿಮ್ಮ ಮುಂದೆ ಇಲ್ಯೂಷನ್ ಚಿತ್ರವೊಂದಿದೆ. ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಹೇಳುವುದೇ ನಿಮ್ಮ ಮುಂದಿರುವ ಸವಾಲು. ಈ ಒಗಟು ಬಿಡಿಸಲು ಪ್ರಯತ್ನಿಸಿ.

ಒಗಟಿನ ಆಟಗಳೇ ಹಾಗೆ, ಮೆದುಳಿಗೆ ಕೆಲಸ ನೀಡುವುದರೊಂದಿಗೆ ನಿಮ್ಮನ್ನು ಟೈಮ್ ಪಾಸ್ ಮಾಡುತ್ತದೆ. ಇಂತಹ ಮೋಜಿನ ಆಟಗಳನ್ನು ಆಡುವುದರಲ್ಲಿರುವ ಮಜಾನೇ ಬೇರೆ. ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಒಗಟಿನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಟ್ರಿಕ್ಕಿ ಚಿತ್ರವೊಂದಿದೆ. ಈ ಚಿತ್ರದಲ್ಲಿರುವ ಮುಖಗಳನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ನಿಖರವಾದ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಕಣ್ಣಿಗೆ ಸಹಜವಾಗಿರುವಂತೆ ಕಾಣುತ್ತದೆ. ಈ ಚಿತ್ರದಲ್ಲಿ, ಒಬ್ಬ ಮಹಿಳೆ ಹೂದಾನಿಯಲ್ಲಿ ಹೂವುಗಳನ್ನು ಹಾಕುತ್ತಿದ್ದಾಳೆ. ಕೆಲವರು ಈ ಮಹಿಳೆಯನ್ನು ಮಾತ್ರ ನೋಡುತ್ತಾರೆ. ಆದರೆ, ಈ ಚಿತ್ರದಲ್ಲಿ ಇತರ ಮುಖಗಳಿವೆ. ಹೀಗಾಗಿ ನೀವು ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಗುರುತಿಸಬಲ್ಲಿರಾ. 30 ಸೆಕೆಂಡುಗಳಲ್ಲಿ ಎಷ್ಟು ಮುಖಗಳಿವೆ ಎಂದು ಹೇಳಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:ನೀವು ಜಾಣರೇ, ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸಿ
ನಿಖರ ಉತ್ತರ ಹೇಳಲು ಸಾಧ್ಯವಾಯಿತೇ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದು ಮಹಿಳೆ ಮಾತ್ರ. ಸ್ವಲ್ಪ ತಾಳ್ಮೆಯಿಂದ ಗಮನಹರಿಸಿ ಮುಖಗಳನ್ನು ಗುರುತಿಸಲು ಪ್ರಯತ್ನಿಸಿ. ಒಗಟು ಬಿಡಿಸಲು ಸಾಧ್ಯವಾಗುತ್ತಿಲ್ಲವೇ ಹೆಚ್ಚು ತಲೆಕೆಡಿಸಿಕೊಳ್ಳ ಬೇಡಿ. ನಾವೇ ನಿಮಗೆ ಈ ಚಿತ್ರದಲ್ಲಿರುವ ಮುಖಗಳೆಷ್ಟು ಎಂದು ಹೇಳುತ್ತೇವೆ. ಈ ಚಿತ್ರದಲ್ಲಿ ಒಟ್ಟು ಮೂರು ಮುಖಗಳಿವೆ. ಒಂದು ಮಹಿಳೆಯ ಮುಖ. ಹಾಗೂ ಈ ಹೂದಾನಿಯ ಎರಡೂ ಬದಿಗಳಲ್ಲಿ ಎರಡು ಮುಖಗಳಿವೆ. ಒಟ್ಟು ಮೂರು ಮುಖಗಳು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Wed, 7 January 26
