AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ?

ಬೆಂಗಳೂರಲ್ಲೋ ಅಥವಾ ಬೇರಾವುದೋ ಊರಿನಲ್ಲೋ ನೀವು ಹೋಗುತ್ತಿರುವಾಗ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅಥವಾ ಕಟ್ಟುತ್ತಿರುವ ಮನೆಯಿದ್ದರೆ ಆ ಮನೆಯ ಮುಂದೆ ದೊಡ್ಡ ಕಣ್ಣುಗಳ ಮಹಿಳೆಯೊಬ್ಬರ ಫೋಟೋವನ್ನು ನೇತು ಹಾಕಿರುವುದನ್ನು ನೀವು ಕೂಡ ನೋಡಿರಬಹುದು. ಹೊಸ ಮನೆಗಳ ಮುಂದೆ ದೊಡ್ಡ ಕಣ್ಣುಗಳ ಈ ಮಹಿಳೆಯ ಫೋಟೋ ತೂಗುಹಾಕುವುದೇಕೆ? ಅಷ್ಟಕ್ಕೂ ಯಾರೀಕೆ? ಎಂಬ ಅನುಮಾನ ಎಂದೂ ನಿಮ್ಮನ್ನು ಕಾಡಿಲ್ಲವೇ?

Viral Photo: ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ?
Big Eyed Woman Photo
ಸುಷ್ಮಾ ಚಕ್ರೆ
|

Updated on: Jan 06, 2026 | 8:56 PM

Share

ಬೆಂಗಳೂರು, ಜನವರಿ 6: ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ನಿರ್ಮಾಣವಾಗುತ್ತಿರುವ ಕಟ್ಟಡವಿದ್ದರೆ ಅಥವಾ ಹೊಸದಾಗಿ ಕಟ್ಟಿದ ಮನೆಯಿದ್ದರೆ ಅದರ ಮುಂದೆ ನೀವು ಈ ದೊಡ್ಡ ಕಣ್ಣುಗಳ ಮಹಿಳೆಯ ಭಯಭೀತಗೊಳಿಸುವ ಫೋಟೋವನ್ನು ಖಂಡಿತ ನೋಡಿರುತ್ತೀರಿ. ಅದರಲ್ಲೂ ನೀವು ಬೆಂಗಳೂರಿನಲ್ಲಿ (Bengaluru) ಇರುವವರಾದರೆ ಈ ಫೋಟೋ ನೋಡದೆ ಇರಲು ಸಾಧ್ಯವೇ ಇಲ್ಲ. ಸೀರೆಯುಟ್ಟ ಮಹಿಳೆ ದೊಡ್ಡ ಬಟ್ಟಲುಕಂಗಳನ್ನು ಬಿಟ್ಟುಕೊಂಡು ಹೆದರಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.

ಸಾಮಾನ್ಯವಾಗಿ, ಯಾವುದಾದರೂ ಹೊಸ ಕಟ್ಟಡ ಕಟ್ಟುವಾಗ, ಅಥವಾ ಕಟ್ಟಿದ ಮನೆಯ ಗೃಹಪ್ರವೇಶಕ್ಕೂ ಮೊದಲು ಆ ಮನೆಗೆ ದೃಷ್ಟಿಯಾಗಬಾರದು ಎಂದು ವಿಕಾರವಾದ ಯಾವುದಾದರೂ ಮುಖವಾಡ ತಂದು ನೇತುಹಾಕುವುದು ವಾಡಿಕೆ. ಆದರೆ, ಆ ಮುಖವಾಡದ ಜಾಗವನ್ನು ಈಗ ಈ ಮಹಿಳೆ ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್

ಮಹಾರಾಷ್ಟ್ರದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಹಲವು ಮನೆಗಳ ಎದುರು ಈ ಮಹಿಳೆಯ ಫೋಟೋ ನೋಡಿದ್ದರು. ಯಾರೀಕೆ? ಎಂದು ತಲೆಕೆಡಿಸಿಕೊಂಡಿದ್ದರು. ಗೂಗಲ್ ಲೆನ್ಸ್​​ನಲ್ಲಿ ಈ ಫೋಟೋ ಹಾಕಿ ಹುಡುಕಿದರೂ ಮಾಹಿತಿ ಸಿಗಲಿಲ್ಲ ಎಂದು ಆ ಮಹಿಳೆ ಫೇಸ್​​​ಬುಕ್​ನಲ್ಲಿ ಬರೆದಿದ್ದರು. ಈ ಪೋಸ್ಟ್ ಕೂಡಲೆ ಎಲ್ಲರ ಗಮನ ಸೆಳೆಯಿತು. ಇದು 3.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಭಾರೀ ಚರ್ಚೆಗೆ ನಾಂದಿ ಹಾಡಿತು.

ಅನೇಕ ಬಳಕೆದಾರರು ಈ ಫೋಟೋ ಹಾಕುವ ಕಾರಣವನ್ನು ವಿವರಿಸಿದ್ದಾರೆ. ಕೆಟ್ಟ ದೃಷ್ಟಿ ತಗುಲದಂತೆ ಈ ರೀತಿಯ ಫೋಟೋಗಳನ್ನು ಹಾಕಲಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ರೀತಿ ಮಹಿಳೆಯ ಫೋಟೋ ಹಾಕಿದ್ದಕ್ಕೆ ಕೋಪವನ್ನೂ ಹೊರಹಾಕಿದ್ದಾರೆ. ಮೀಮ್​​ಗಳಿಂದ ಪ್ರಭಾವಿತರಾಗಿ ರೀಲ್ಸ್ ಮಾಡುವ ಮಹಿಳೆಯ ಫೋಟೋವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Video: ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್‌ ಆಯ್ತು ದೃಶ್ಯ

ಬಾಟ್ ಪ್ರಕಾರ, ಈ ಫೋಟೋದಲ್ಲಿರುವ ಮಹಿಳೆ ಕರ್ನಾಟಕದ ಯೂಟ್ಯೂಬರ್ ನಿಹಾರಿಕಾ ರಾವ್. ಅವರ ಈ ವಿಚಿತ್ರವಾದ ಮುಖಭಾವವು 2023ರ ವೈರಲ್ ವೀಡಿಯೊ ಕ್ಲಿಪ್‌ನಿಂದ ಹುಟ್ಟಿಕೊಂಡಿತು. ಅದು ನಂತರ ಜನಪ್ರಿಯ ಮೀಮ್ ಆಗಿ ವೈರಲ್ ಆಗಿತ್ತು. ಕ್ರಮೇಣ ಆಕೆಯ ಆ ಫೋಟೋವನ್ನು ದೃಷ್ಟಿಗೊಂಬೆಯ ಬದಲು ಹಲವರು ತಮ್ಮ ಮನೆಯೆದುರು ಹಾಕಲಾರಂಭಿಸಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ