Optical Illusion: ನೀವು ಜಾಣರೇ, ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸಿ
ಒಗಟಿನ ಚಿತ್ರಗಳನ್ನು ಬಿಡಿಸುವುದು ಮೋಜಿನ ಆಟವೇನೋ ಸರಿ. ಆದರೆ ವೀಕ್ಷಣಾ ಸಾಮರ್ಥ್ಯ ಹೆಚ್ಚಿರುವವರು ಕ್ಷಣಾರ್ಧದಲ್ಲಿ ಉತ್ತರ ಕಂಡುಕೊಳ್ಳಲು ಸಾಧ್ಯ. ಇದೀಗ ಇಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಈ ಮೂವರಲ್ಲಿ ಬಾಸ್ ಯಾರೆಂದು ಹೇಳಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ, ಹಾಗಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಮೆದುಳಿಗೆ ಕೆಲಸ ನೀಡುವ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಆಟಗಳನ್ನು ಆಡುವುದೆಂದರೆ ಕೆಲವರಿಗೆ ತುಂಬಾನೇ ಇಷ್ಟ. ಇಂತಹ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅಷ್ಟೇ ಟ್ರಿಕ್ಕಿಯಾಗಿರುತ್ತವೆ. ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಮೂವರು ವ್ಯಕ್ತಿಗಳಿದ್ದು, ಬಾಸ್ ಯಾರೆಂದು ಗುರುತಿಸುವುದೇ ನಿಮ್ಮ ಮುಂದಿರುವ ಸವಾಲು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮಗೆ ಸಮಯಾವಕಾಶವಿದೆ.
ಈ ಚಿತ್ರವು ಏನು ಹೇಳುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರವು ಅಂದುಕೊಂಡಕ್ಕಿಂತ ಭಿನ್ನವಾಗಿರುತ್ತದೆ. ನಮ್ಮ ಕಣ್ಣಿಗೆ ಕಾಣುವುದು ಒಂದಾದರೆ ಉತ್ತರವು ಮತ್ತೊಂದಾಗಿರುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಮೂವರು ವ್ಯಕ್ತಿಗಳಿರುವುದನ್ನು ಕಾಣಬಹುದು. ಆಫೀಸಿನ ರೂಮ್ ಆಗಿದ್ದು, ಒಬ್ಬ ವ್ಯಕ್ತಿ ಬಾಸ್ ಕುಳಿತುಕೊಳ್ಳುವ ಮೇಜಿನ ಬಳಿ ನಿಂತಿದ್ದಾನೆ. ಇನ್ನೊಬ್ಬ ವ್ಯಕ್ತಿ ಟೇಬಲ್ ಬಳಿ ಕುಳಿತಿದ್ದಾನೆ. ಮೂರನೇ ವ್ಯಕ್ತಿ ನಿಂತಿದ್ದಾನೆ. ಬಾಸ್ ಮೇಜಿನ ಬಳಿ ಇರುವ ವ್ಯಕ್ತಿ ಏನನ್ನೋ ಹೇಳುತ್ತಿದ್ದು, ಉಳಿದ ಇಬ್ಬರು ಕೇಳಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಸ್ ಯಾರೆಂದು ಗುರುತಿಸುವುದೇ ಚಾಲೆಂಜ್. ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸುವತ್ತ ಗಮನ ಕೊಡಿ.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಹುಡುಕಬಲ್ಲಿರಾ
ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತೇ?
ಈ ಭ್ರಮೆ ಉಂಟು ಮಾಡುವ ಈ ಚಿತ್ರವು ಸರಳವಾಗಿ ಕಂಡರೂ ಇಲ್ಲಿ ಬಾಸ್ ಯಾರೆಂದು ಗುರುತಿಸುವುದು ಕಷ್ಟಕರ. ಬಾಸ್ ಯಾರೆಂದು ಹೇಳಿದರೆ ನಿಮ್ಮ ಐಕ್ಯೂ ಲೆವೆಲ್ ಅತ್ಯುತ್ತಮವಾಗಿದೆ ಎಂದರ್ಥ. ಎಷ್ಟೇ ತಲೆ ಉಪಯೋಗಿಸಿದ್ರು ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಬಿಳಿ ಶರ್ಟ್ ಧರಿಸಿ ನಿಂತಿರುವ ವ್ಯಕ್ತಿಯೇ ಬಾಸ್.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
