AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಕೆಲವರು ಈ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುತ್ತಾರೆ. ರಸ್ತೆ ಬದಿಯಲ್ಲಿರುವ ಶ್ವಾನಗಳಿಗೆ ಆಹಾರವಿಟ್ಟು ದೊಡ್ಡ ಮನಸ್ಸಿನವರೆನಿಸಿಕೊಳ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ಹಸಿದ ಶ್ವಾನಕ್ಕೆ ಆಹಾರ ನೀಡಿ ಆದರ ಹಸಿವನ್ನು ನೀಗಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jan 06, 2026 | 4:04 PM

Share

ಸೋಶಿಯಲ್ ಮೀಡಿಯಾದಲ್ಲಿ ಕೆಲ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ವ್ಯಕ್ತಿಯ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗುತ್ತದೆ. ಇಲ್ಲೊಬ್ಬ ಯುವಕನು (young man) ಹಸಿದ ಶ್ವಾನಕ್ಕೆ (dog) ಆಹಾರವನ್ನು ನೀಡಿ ಮೂಕ ಪ್ರಾಣಿಯ ಹಸಿವನ್ನು ನೀಗಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕನ ಒಳ್ಳೆತನಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ.

ಮಂಜುನಾಥ್ ಲೋಕಪುರ್ (Manjunath lokapur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಫುಡ್ ಸ್ಟಾಲ್ ಮುಂಭಾಗದಲ್ಲಿ ನಿಂತು ಕೊಂಡಿದ್ದಾನೆ. ಆತನ ಹಿಂಭಾಗದಲ್ಲಿ ಶ್ವಾನವೊಂದು ಕುಳಿತುಕೊಂಡಿದೆ. ಈ ಶ್ವಾನವು ಆತನನ್ನು ಸ್ಪರ್ಶಿಸಿದ್ದು, ನನಗೂ ಕೂಡ ತಿನ್ನಲು ಕೊಡು ಎಂದು ಹೇಳುವಂತಿದೆ ಈ ದೃಶ್ಯ. ಈ ವೇಳೆ ಅಲ್ಲೇ ಇದ್ದ ಇನ್ನೊಬ್ಬ ಯುವಕನು ಈ ಶ್ವಾನವನ್ನು ನೋಡಿದ್ದಾನೆ. ಆ ಬಳಿಕ ಆ ಸ್ಟಾಲ್‌ನಲ್ಲಿ ತಿಂಡಿ ಖರೀದಿಸಿದ್ದು, ಶ್ವಾನಕ್ಕೆ ತಿನ್ನಲು ನೀಡಿ ಅದರ ಹಸಿವನ್ನು ನೀಗಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹಸಿವದವರಿಗೆ ಒಂದು ತುತ್ತು ಅನ್ನ ಹಾಕಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಥ್ಯಾಂಕ್ಸ್, ನಿಮಗೆ ಆ ದೇವರು ಒಳ್ಳೇದು ಮಾಡಲಿ ಎಂದಿದ್ದಾರೆ. ಮತ್ತೊಬ್ಬರು, ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ