
ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಬಹುದಾದ ಒಗಟಿನ ಚಿತ್ರಗಳನ್ನು ಬಿಡಿಸುತ್ತಿದ್ದರೆ ಸಮಯ ಕಳೆದದ್ದೇ ತಿಳಿಯಲ್ಲ. ಜನರನ್ನು ದಾರಿ ತಪ್ಪಿಸುವ ಚಿತ್ರಗಳೇ ಈ ಆಪ್ಟಿಕಲ್ ಇಲ್ಯೂಷನ್. ಈ ಚಿತ್ರಗಳು ಸಾಮಾನ್ಯ ಚಿತ್ರಗಳಂತೆ ಕಾಣಿಸಬಹುದು, ಆದರೆ ಇದು ಟ್ರಿಕ್ಕಿ ಒಗಟಿನ ಆಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು (Optical Illusion) ವೈರಲ್ ಆಗುತ್ತಿರುತ್ತವೆ. ನೀವು ಈ ಹಿಂದೆ ಇಂತಹ ಒಗಟನ್ನು ಬಿಡಿಸಲು ವಿಫಲವಾಗಿದ್ದೀರಬಹುದು. ಆದರೆ ಇಲ್ಯೂಷನ್ ಚಿತ್ರದಲ್ಲಿರುವ ಕಪ್ ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 9 ಸೆಕೆಂಡುಗಳು ಮಾತ್ರ.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೀವು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಸಾಮಾನ್ಯ ಚಿತ್ರದಂತೆ ಕಾಣಿಸುತ್ತದೆ. ಇಲ್ಲಿ ಕ್ರಿಸ್ಮಸ್ ಟ್ರೀಯನ್ನು ನೋಡಬಹುದು. ಈ ಟ್ರೀ ಹತ್ತಿರದಲ್ಲಿ ಇಬ್ಬರು ಮಕ್ಕಳು ನಾಯಿಮರಿಯನ್ನು ಹಿಡಿದುಕೊಂಡು ನಿಂತಿದ್ದಾರೆ. ಈ ಇಬ್ಬರು ಮಕ್ಕಳ ನಡುವೆ ಒಂದು ಕಪ್ ಇರಿಸಲಾಗಿದೆ. ಈ ಚಿತ್ರದಲ್ಲಿ ನೀವು ಕಪ್ ಅನ್ನು ಗುರುತಿಸಿದರೆ, ನಿಮ್ಮ ಐಕ್ಯೂ ಲೆವೆಲ್ ಅದ್ಭುತವಾಗಿದೆ ಎಂದರ್ಥ.
ಇದನ್ನೂ ಓದಿ: ಜಸ್ಟ್ 10 ಸೆಕೆಂಡುಗಳಲ್ಲಿ ಈ ಕಾಡಿನಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ
ಈ ಒಗಟಿನ ಚಿತ್ರಗಳುನಿಮ್ಮ ಕಣ್ಣನು ಮೋಸಗೊಳಿಸಿ, ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಈ ಚಿತ್ರವು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಿದ್ದೀರಬಹುದು. ಆದರೆಇಲ್ಲಿ ಜಾಣತನದಲ್ಲಿ ಮರೆಮಾಡಲಾಗಿರುವ ಕಪ್ ಹುಡುಕಲು ಸಾಧ್ಯವಾಗಿಲ್ಲವೇ, ಹೆಚ್ಚು ಚಿಂತಿಸಬೇಡಿ. ಈ ಮೇಲಿನ ಚಿತ್ರದಲ್ಲಿ ಕಪ್ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ಕೆಂಪು ಬಣ್ಣದ ಕಪ್ ಕಂಡಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ