AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹೆಲ್ಮೆಟ್ ಧರಿಸದ ಬೈಕ್ ಸವಾರನನ್ನು ತಡೆದು ನಿಲ್ಲಿಸಿದ ಪೊಲೀಸರು, ಈ ವ್ಯಕ್ತಿ ನೀಡಿದ ಉತ್ತರಕ್ಕೆ ಪೊಲೀಸರೇ ಶಾಕ್

ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಕೆಲವರು ಈ ರೂಲ್ಸ್ ಬ್ರೇಕ್ ಮಾಡ್ತಾರೆ. ಪೊಲೀಸರ ಕೈಯಲ್ಲಿ ತಗಲಾಕಿ ಕೊಳ್ತಾರೆ. ಇಲ್ಲೊಬ್ಬ ಬೈಕ್ ಸವಾರ ಹೆಲ್ಮೆಟ್ ಹಾಕಿಕೊಳ್ಳದೇ ಸಿಕ್ಕಿ ಬಿದ್ದಿದ್ದಾನೆ. ಟ್ರಾಫಿಕ್ ಪೊಲೀಸರ ಹೆಲ್ಮೆಟ್ ಎಲ್ಲಿ ಎನ್ನುತ್ತಿದ್ದಂತೆ ಪ್ರಾಮಾಣಿಕ ಉತ್ತರ ನೀಡಿದ್ದಾನೆ. ಈ ವ್ಯಕ್ತಿಯ ಮಾತು ಕೇಳಿ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಹೆಲ್ಮೆಟ್ ಧರಿಸದ ಬೈಕ್ ಸವಾರನನ್ನು ತಡೆದು ನಿಲ್ಲಿಸಿದ ಪೊಲೀಸರು, ಈ ವ್ಯಕ್ತಿ ನೀಡಿದ ಉತ್ತರಕ್ಕೆ ಪೊಲೀಸರೇ ಶಾಕ್
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Dec 17, 2025 | 1:21 PM

Share

ಇಂದೋರ್, ಡಿಸೆಂಬರ್ 17: ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (helmet) ಧರಿಸುವುದು ಕಡ್ಡಾಯ. ಒಂದು ವೇಳೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ದಂಡ ಬೀಳುವುದಂತೂ ಖಂಡಿತ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಈ ವ್ಯಕ್ತಿಯೂ ನೀಡಿದ ಉತ್ತರಕ್ಕೆ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಆ ಬಳಿಕ ಪೊಲೀಸರು ಹೆಲ್ಮೆಟ್ ತಯಾರಕರಿಗೆ ವಿಶೇಷ ಮನವಿ ಮಾಡಿದ್ದು ಈ ಘಟನೆಯೂ ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore in Madhya Pradesh) ನಡೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿವೇಕಾನಂದ್‌ ತಿವಾರಿ (Vivekanand Tiwari) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಸಂಚಾರಿ ಪೊಲೀಸರು “ಎಲ್ಲರಿಗೂ ಹೆಲ್ಮೆಟ್‌ಗಳು ಅವಶ್ಯಕ. ಕಂಪನಿಗೆ ವಿನಂತಿ: ಎಲ್ಲಾ ಗಾತ್ರದ ಹೆಲ್ಮೆಟ್‌ಗಳನ್ನು ತಯಾರಿಸಿ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಾ ಬರುತ್ತಿರುವುದನ್ನು ಕಾಣಬಹುದು. ಟ್ರಾಫಿಕ್ ಪೊಲೀಸರು ಸವಾರನನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಈ ವ್ಯಕ್ತಿಯೂ ಸರ್ ನನ್ನ ತಲೆ ಸೈಜ್‌ಗೆ ಊರಿನಲ್ಲಿ ಎಲ್ಲೂ ಹೆಲ್ಮೆಟ್  ಸಿಗಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾನೆ. ಹೀಗೆನ್ನುತ್ತಿದ್ದಂತೆ ಪೊಲೀಸರಿಗೆ ಅನುಮಾನ ಬಂದಿದ್ದು, ಬಳಿಯಿದ್ದು ಹೆಲ್ಮೆಟ್ ನೀಡಿ ಇದನ್ನು ಧರಿಸುವಂತೆ ಹೇಳಿದ್ದಾರೆ. ಈ ವ್ಯಕ್ತಿಯ ತಲೆಯ ಗಾತ್ರ ದೊಡ್ಡದಾಗಿದ್ದು,  ಹೀಗಾಗಿ ಹೆಲ್ಮೆಟ್ ಧರಿಸಲು ಸಾಧ್ಯವಾಗಿಲ್ಲ. ಇದನ್ನು ನೋಡುತ್ತಿದ್ದಂತೆ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ಕೊನೆಗೆ ಈ ವಿಡಿಯೋದಲ್ಲಿ ಹೆಲ್ಮೆಟ್ ಕಂಪನಿಗೆ ವಿಶೇಷ ಮನವಿ ಮಾಡಿದ್ದು, ವ್ಯಕ್ತಿಗಳ ತಲೆ ಗಾತ್ರ ದೊಡ್ಡದಿದೆ. ಅವರಿಗೆ ಹೆಲ್ಮೆಟ್ ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಅತ್ಯವಶ್ಯಕ. ಹೀಗಾಗಿ ದೊಡ್ಡ ಗಾತ್ರದ ಹೆಲ್ಮೆಟ್ ಉತ್ಪಾದಿಸಿ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ:ಮಕ್ಕಳಿಗಾಗಿ ಬಸ್ಸಿನಲ್ಲಿ ಆಟಿಕೆ ಸ್ಟೀರಿಂಗ್ ಅಳವಡಿಸಿದ ಬಸ್ ಚಾಲಕ

ಈ ವಿಡಿಯೋ 26 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಪೊಲೀಸರ ಮನವಿಗೆ ಸ್ಪಂದಿಸಿದ ಸ್ಟೀಲ್‌ಬರ್ಡ್ ಹೆಲ್ಮೆಟ್ ಕಂಪನಿ ನಾವು ಈ ವ್ಯಕ್ತಿಗೆ ಹೆಲ್ಮೆಟ್ ಉಡುಗೊರೆ ನೀಡಲು ಬಯಸಿದ್ದೇವೆ. ದಯವಿಟ್ಟು ವ್ಯಕ್ತಿಯ ಸಂಪರ್ಕ ಇದ್ದರೆ ತಿಳಿಸಿದೆ. ಮತ್ತೊಬ್ಬರು ಇಂತಹ ಪೊಲೀಸರು ಇರ್ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಪಾಪ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Wed, 17 December 25