Optical Illusion: ಈ ಚಿತ್ರದಲ್ಲಿ100ರ ನಡುವೆ ಅಡಗಿರುವ 10 ಸಂಖ್ಯೆಯನ್ನು ಕಂಡುಹಿಡಿಯುವಿರಾ

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ಡಿ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಇದೀಗ ಇಲ್ಲೊಂದು ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಹತ್ತು ನಂಬರ್‌ನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ರೆ ಈ ಚಿತ್ರದತ್ತ ಕಣ್ಣು ಹಾಯಿಸಿ.

Optical Illusion: ಈ ಚಿತ್ರದಲ್ಲಿ100ರ ನಡುವೆ ಅಡಗಿರುವ 10 ಸಂಖ್ಯೆಯನ್ನು ಕಂಡುಹಿಡಿಯುವಿರಾ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Nov 17, 2025 | 5:10 PM

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಸರಳ ವಾಗಿ ಕಾಣುವ ಈ ಒಗಟನ್ನು ಬಿಡಿಸಲು ನೀವು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಜಾಣರಿಗೆ ಮಾತ್ರ ಇಂತಹ ಒಗಟನ್ನು ಬಿಡಿಸಲು ಸಾಧ್ಯ.ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್ ಚಿತ್ರವನ್ನು ನೋಡಬಹುದು. ಈ ಚಿತ್ರದಲ್ಲಿ 100 ನಡುವೆ ಮರೆಮಾಡಲಾಗಿರುವ 10 ಅನ್ನು ಕಂಡು ಹಿಡಿಯಬೇಕು. ಸಮಯವಕಾಶವಿಲ್ಲದಿದ್ರೂ ಉತ್ತರ ಕಂಡುಕೊಂಡರೆ ಜಾಣರು ಎಂದರ್ಥ.

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ವೃತ್ತಾಕಾರದಲ್ಲಿ ಬಾಕ್ಸ್‌ನಲ್ಲಿ 100 ಸಂಖ್ಯೆಗಳನ್ನು ಸಾಲಾಗಿ ಬರೆಯಲಾಗಿದೆ. ಈ ಸಂಖ್ಯೆಗಳ ನಡುವೆ 10 ಸಂಖ್ಯೆಯೊಂದು ಅಡಗಿದೆ. ಇದನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಇಲ್ಯೂಷನ್ ಚಿತ್ರ ಬಿಡಿಸಿ 10 ಸಂಖ್ಯೆಯನ್ನು ಕಂಡು ಹಿಡಿಯಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

ಇದನ್ನೂ ಓದಿ:ಈ ಚಿತ್ರದಲ್ಲಿ ಮರೆಮಾಡಲಾಗಿರುವ ಮುಖಗಳನ್ನು ಕಂಡುಹಿಡಿಯಬಲ್ಲಿರಾ

10 ನಂಬರ್‌ ನಿಮ್ಮ ಕಣ್ಣಿಗೆ ಬಿದ್ದಿತೇ?

ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರ ಬಿಡಿಸಲು ತಾಳ್ಮೆ ಅತ್ಯಗತ್ಯ. ಸಮಯ ಮಿತಿ ಇಲ್ಲದಿದ್ದರೂ 10 ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವೇ? ಹೆಚ್ಚು ಚಿಂತಿಸಬೇಡಿ. ಈ ಚಿತ್ರವನ್ನು ಹತ್ತಿರದಿಂದ ನೋಡಿದರೆ, ಚಿತ್ರದ ಎಡ ಭಾಗದ ಸುತ್ತಲೂ ಈ ಸಂಖ್ಯೆಯೂ ಅಡಗಿದೆ. ಇಲ್ಲಿ ಇರುವ ಒಂದು ವೃತ್ತದಲ್ಲಿರುವ ಒಂದು ಸಂಖ್ಯೆ 100 ಸಂಖ್ಯೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಈ ಸುಳಿವು ನೀಡಿದರೂ ನಿಮಗೆ ಈ ಒಗಟು ಟ್ರಿಕ್ಕಿ ಎನಿಸುತ್ತಿದೆಯೇ, ಈ ಕೆಳಗಿನ ಚಿತ್ರದಲ್ಲಿ ನಾವು 100 ರ ನಡುವೆ ಅಡಗಿರುವ 10 ಸಂಖ್ಯೆಯನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ