
ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ನಮ್ಮ ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತವೆ. ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟಗಳನ್ನು ಇಷ್ಟಪಡುತ್ತಾರೆ. ಈ ಮೋಜಿನ ಆಟಗಳನ್ನು ಆಡುವ ಖುಷಿಯೇ ಬೇರೆ. ಆದರೆ ಇದೀಗ ತಲೆ ಕೆಡಿಸಿಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮವನ್ನು ಸಹ ನೀಡುತ್ತದೆ. ಇದೀಗ ಇಲ್ಲೊಂದು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವ ಫೋಟೋವೊಂದು ವೈರಲ್ ಆಗಿದ್ದು, ಮರದ ಕೊಂಬೆಗಳ ನಡುವೆ ಗೂಬೆಯನ್ನು ಮರೆ ಮಾಡಲಾಗಿದೆ. ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂಬುದನ್ನು ಎಂದು ನೋಡಿ..
FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರದಲ್ಲಿ ಹಂಚಿಕೊಳ್ಳಲಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡಿ ಮೆದುಳಿಗೆ ಕೆಲಸವನ್ನು ನೀಡುತ್ತವೆ. ಈ ಚಿತ್ರದಲ್ಲಿ ಕೊಂಬೆಗಳು ಹರಡಿಕೊಂಡಿದ್ದು, ಹಚ್ಚಹಸಿರಿನ ಎಲೆಗಳನ್ನು ಕಾಣಬಹುದು. ಈ ಕೊಂಬೆಗಳ ನಡುವೆ ಸೂರ್ಯನ ಬೆಳಕು ಹರಡಿಕೊಂಡಿದೆ. ಈ ಕೊಂಬೆಗಳ ನಡುವೆ ಗೂಬೆಯನ್ನು ಮರೆ ಮಾಡಲಾಗಿದೆ. ನೀವು ತಾಳ್ಮೆ ಹಾಗೂ ಏಕಾಗ್ರತೆಯಿಂದ ಗೂಬೆ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶ ನೀಡಿಲ್ಲದಿದ್ದರೂ ಒಗಟು ಬಿಡಿಸಲು ಸಾಧ್ಯವಾದರೆ ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.
Find the owl
byu/AnonymousWombat229 inFindTheSniper ಇದನ್ನೂ ಓದಿ
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಣಬೆಗಳ ನಡುವೆ ಅಡಗಿರುವ ಇಲಿಯನ್ನು ಕಂಡುಹಿಡಿಯಿರಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಲೆಗೆ ಹುಳ ಬಿಡುತ್ತದೆ. ಈ ಚಿತ್ರದಲ್ಲಿ ಮರೆ ಮಾಡಿರುವ ಗೂಬೆಯನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಆದರೆ ನೀವು ಎಷ್ಟೇ ಪ್ರಯತ್ನಿಸಿದರೂ ತಲೆ ನೋವು ಬರುತ್ತಿದೆಯೇ ಹೊರತು ಉತ್ತರ ಹುಡುಕಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ತಾಳ್ಮೆ ಹಾಗೂ ಏಕಾಗ್ರತೆಯಿಂದ ಈ ಪಕ್ಷಿ ಎಲ್ಲಿದೆ ಎಂದು ಹುಡುಕಿ ಹೇಳಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ