Optical Illusion: ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಿರಿ
ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ನೀವು ಎಷ್ಟು ಬುದ್ಧಿವಂತರು ಎಂದು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಹತ್ತೇ ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಪ್ರಯತ್ನಿಸಿ.

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಆಟಗಳನ್ನು ಹೆಚ್ಚಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಈ ಒಗಟುಗಳನ್ನು ಬಿಡಿಸುವುದರಲ್ಲಿ ಸಮಯ ಕಳೆಯುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಕೆಲವೊಮ್ಮೆ ಕಣ್ಣನ್ನು ಮೋಸಗೊಳಿಸಿ ಭ್ರಮೆಯಲ್ಲಿ ಸಿಲುಕಿಸಲು ಬಹುದು. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಚ್ಚ ಹಸಿರಿನ ಕಾಡಿನಲ್ಲಿ ಜಿಂಕೆಯೊಂದು (deer) ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶವಿದೆ. ಆದರೆ ಇಲ್ಲಿ ನೀಡಿರುವ ಟೈಮ್ ಒಳಗೆ ಈ ಒಗಟನ್ನು ಚಿತ್ರ ಬಿಡಿಸಲು ಸಾಧ್ಯವಾದರೆ ನೀವು ಜಾಣರು ಎಂದರ್ಥ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಮೊದಲ ನೋಟದಲ್ಲೇ ನಿಮ್ಮ ಕಣ್ಣಿಗೆ ಹಚ್ಚ ಹಸಿರಿನ ಕಾಡು ಕಾಣಿಸುತ್ತದೆ. ಇಲ್ಲಿ ಮರಗಿಡಗಳು ಹಾಗೂ ಬಂಡೆಗಳು ಹಸಿರು ಬಣ್ಣದಲ್ಲಿವೆ. ಈ ಹಚ್ಚಹಸಿರಿನಿಂದ ಆವೃತ್ತವಾದ ಈ ಕಾಡಿನಲ್ಲಿ ಜಿಂಕೆಯೊಂದು ಅಡಗಿಕೊಂಡಿದೆ. ಈ ಫೋಟೋದಲ್ಲಿರುವ ಸವಾಲು ಜಿಂಕೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ಹತ್ತು ಸೆಕೆಂಡುಗಳೊಳಗೆ ಈ ಜಿಂಕೆಯನ್ನು ಕಂಡು ಹಿಡಿಯಲು ಪ್ರಯತ್ನಿಸಿ.
ಇದನ್ನೂ ಓದಿ:Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯಿರಿ
ನಿಮ್ಮ ಕಣ್ಣಿಗೆ ಜಿಂಕೆ ಕಾಣಿಸಿತೇ?

ನಮ್ಮ ಆಲೋಚನಾ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಮೆದುಳನ್ನು ಸಿದ್ಧಪಡಿಸುವಲ್ಲಿ ಒಗಟುಗಳು ಈ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಈ ಒಗಟಿನ ಚಿತ್ರದಲ್ಲಿ 10 ಸೆಕೆಂಡುಗಳಲ್ಲಿ ಜಿಂಕೆಯನ್ನು ಹುಡುಕಬೇಕು. ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳಲೇಬೇಕು. ನೀವು ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜಿಂಕೆ ಎಲ್ಲಿದೆ ಎಂದು ನೋಡಿ. ಆದರೆ ಕೆಲವೇ ಕೆಲವೂ ಜನರು ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ನಾವೇ ನಿಮಗೆ ಜಿಂಕೆ ಎಲ್ಲಿದೆ ಎಂದು ಈ ಹೇಳುತ್ತೇವೆ. ಈ ಮೇಲಿನ ಫೋಟೋವನ್ನು ನೋಡಿ, ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿರುವುದನ್ನು ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








