
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಬ್ಯುಸಿನೇ. ಈ ಬಿಡುವಿಲ್ಲದ ಕೆಲಸದ ನಡುವೆ ಮೈಂಡ್ ರಿಲ್ಯಾಕ್ಸ್ ಆಗಿಸಲು ಒಗಟುಗಳನ್ನು ಬಿಡಿಸುವತ್ತ ಆಸಕ್ತಿ ತೋರಿಸುತ್ತಾರೆ. ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಚಿತ್ರಗಳು ಬಿಡಿಸಿ ತಮ್ಮ ಮೆದುಳಿನ ಸಾಮರ್ಥ್ಯ ಪರೀಕ್ಷಿಸಿಕೊಳ್ಳುತ್ತಾರೆ. ನೀವೇನಾದ್ರೂ ಇಂತಹ ಒಗಟಿನ ಚಿತ್ರವನ್ನು ಬಿಡಿಸಲು ಆಸಕ್ತಿ ತೋರಿಸುತ್ತಿದ್ದೀರಾ ಅಂತಾದ್ರೆ ಈ ಚಿತ್ರವು ನಿಮಗೆ ಸಹಾಯಕವಾಗಿದೆ. ಇದರಲ್ಲಿರುವ ಸವಾಲು ಇಲ್ಲಿರುವ ಸೂಜಿಯನ್ನು ಗುರುತಿಸುವುದು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಚ್ಚಹಸಿರಾದ ಮರಗಳು, ಸಸ್ಯಗಳು ಮತ್ತು ಹುಲ್ಲು ಇವೆ. ಇಲ್ಲಿ ಆಮೆ ನಿಧಾನವಾಗಿ ನಡೆಯುತ್ತಿದ್ದರೆ, ಮೊಲವು ಮರದ ನೆರಳಿನಲ್ಲಿ ಮಲಗಿದೆ. ಆದರೆ ಈ ಚಿತ್ರದಲ್ಲಿ ಸೂಜಿಯನ್ನು ಜಾಣತನದಿಂದ ಮರೆ ಮಾಡಲಾಗಿದೆ. ನೀವು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತರ ಹೇಳಲು ಪ್ರಯತ್ನಿಸಿ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಗಿಳಿಯನ್ನು ಹುಡುಕಬಲ್ಲಿರಾ
ಈ ಒಗಟಿನ ಚಿತ್ರವನ್ನು ಮೊದಲು ನೋಡಿದಾಗ ಹಚ್ಚ ಹಸಿರಿನ ಮರಗಿಡಗಳು, ಮೊಲ ಹಾಗೂ ಆಮೆಯನ್ನು ಮಾತ್ರ ಕಾಣುತ್ತೀರಿ. ಸಹಜವಾಗಿ ಈ ಚಿತ್ರವು ನಿಮ್ಮ ಕಣ್ಣನ್ನು ಮೋಸಗೊಳಿಸಿ, ಸೂಜಿ ನಿಮ್ಮ ಕಣ್ಣಿಗೆ ಕಾಣದಂತೆ ಮಾಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಸೂಜಿ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈ ಕೆಳಗಿನ ಚಿತ್ರದಲ್ಲಿ ಸೂಜಿ ಎಲ್ಲಿದೆ ಎಂದು ನಾವೇ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ