AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರು ಜೀವನ ಇಷ್ಟೊಂದು ದುಬಾರಿ ಏಕೆ? ಎಂದು ಪ್ರಶ್ನಿಸಿದ ಮಹಿಳೆ

ಕೈ ತುಂಬಾ ಸಂಬಳ ಇದ್ರೂ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜೀವನ ನಡೆಸೋದು ಕಷ್ಟ. ಇಂತಹದ್ದೇ ಅನುಭವ ಬೆಂಗಳೂರಿನ ಮಹಿಳೆಗೆ ಆಗಿದೆ. ಈ ನಗರದಲ್ಲಿ ದೈನಂದಿನ ಜೀವನ ಏಕೆ ಇಷ್ಟೊಂದು ದುಬಾರಿಯಾಗಿದೆ ಎಂದು ಪ್ರಶ್ನೆ ಮಾಡಿರುವ ವಿಡಿಯೋ ಸದ್ಯ ವೈರಲ್‌ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರು ಜೀವನ ಇಷ್ಟೊಂದು ದುಬಾರಿ ಏಕೆ? ಎಂದು ಪ್ರಶ್ನಿಸಿದ ಮಹಿಳೆ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Dec 28, 2025 | 1:47 PM

Share

ಬೆಂಗಳೂರು, ಡಿಸೆಂಬರ್ 28: ಈಗಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಕೂಡ ಕಡಿಮೆಯೇ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಕೈಯಲ್ಲಿದ್ದ ದುಡ್ಡೆಲ್ಲಾ ಖಾಲಿ. ಅದಲ್ಲದೇ ಅಲ್ಪ ಸ್ವಲ್ಪ ಸಂಬಳದಲ್ಲಿ ದಿನನಿತ್ಯ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಹೇಳುವಷ್ಟು ಸುಲಭವಲ್ಲ. ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ (Bengaluru) 500 ರೂ 50ಕ್ಕೆ ಸಮಾನ ಎಂದೇನಿಸುತ್ತಿದೆ ಎಂದು ಮಹಿಳೆಯೊಬ್ಬರು ಹೇಳಿದ್ದು, ಖರ್ಚು ವೆಚ್ಚಗಳು ಹೆಚ್ಚಾಗುತ್ತಿದೆ ಎಂದಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ದೀಪಾ ಗುಪ್ತಾ (its.me.dipaaa) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದೀಪಾ ಗುಪ್ತಾ ಎಂಬ ಮಹಿಳೆ ಬೆಂಗಳೂರಿನಲ್ಲಿ ಹಣ ಎಷ್ಟು ಬೇಗನೆ ಖಾಲಿಯಾಗುತ್ತದೆ. ಸಣ್ಣ ಪ್ರವಾಸಗಳು ಸಹ ದುಬಾರಿಯಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ 500 ರೂ 50 ರೂಪಾಯಿಗಳಂತೆ ಭಾಸವಾಗುವುದು ಏಕೆ. ನಾನು 500 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ನಾನು 50 ರೂಪಾಯಿ ಖರ್ಚು ಮಾಡುತ್ತಿರುವಂತೆ ಭಾಸವಾಗುತ್ತದೆ. ನೀವು ಮನೆಯಿಂದ ಹೊರಗಡೆ ಹೊರಟರೆ ನಿಮ್ಮ ಕೈಯಲ್ಲಿರುವ  500 ರೂ ಯಾವುದಕ್ಕೂ ಸಾಕಾಗಲ್ಲ. ನೀವು 50 ರೂಪಾಯಿಗೆ ತಿನ್ನುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನೀವು ನಿಜವಾಗಿಯೂ ಖರ್ಚು ಮಾಡುತ್ತಿರುವುದು 500 ರೂಪಾಯಿಗಳನ್ನು. ಈ ನಗರ ಯಾಕೆ ಇಷ್ಟೊಂದು ದುಬಾರಿ ಎಂದು ಮಹಿಳೆ ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Dipa Gupta (@its.me.dipaaa)

ಇದನ್ನೂ ಓದಿ:ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನಗೂ ಹೀಗೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ನನಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ