
ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೆಚ್ಚಿನವರು ಇಂತಹ ಆಪ್ಟಿಕಲ್ ಇಲ್ಯೂಷನ್ (Optical Illusion) ಒಗಟಿನ ಚಿತ್ರವನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಈ ಚಿತ್ರವನ್ನು ನೋಡಿದ ಕೂಡಲೇ ಉತ್ತರ ಕಂಡುಕೊಳ್ಳುವುದು ಕಷ್ಟಕರ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಬಣ್ಣಬಣ್ಣದ ರಾಮ ಗಿಳಿಗಳಿವೆ. ಇಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಊಸರವಳ್ಳಿಯನ್ನು ಮರೆಮಾಡಲಾಗಿದೆ. ಇದನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ನೋಡಿ.
ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳಲಾದ ಈ ಇಲ್ಯೂಷನ್ ಚಿತ್ರದಲ್ಲಿ ಮರದ ಕೊಂಬೆ ಮೇಲೆ ಕಲರ್ ಫುಲ್ ರಾಮಗಿಳಿಗಳು ಕುಳಿತಿರುವುದನ್ನು ಕಾಣಬಹುದು. ಈ ಗಿಳಿಗಳ ನಡುವೆ ಊಸರವಳ್ಳಿಯೊಂದು ಅಡಗಿ ಕುಳಿತಿದೆ. ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣೇ, ಈ ಚಿತ್ರದಲ್ಲಿ ಅಡಗಿರುವ ಆಮೆಗಳನ್ನು ಗುರುತಿಸಿ
ಗಿಳಿಗಳ ನಡುವೆ ಅಡಗಿರುವ ಊಸರವಳ್ಳಿಯನ್ನು ಕಂಡು ಹಿಡಿಯುವುದು ನಿಮಗೆ ಕಷ್ಟವಾಗಬಹುದು. ಈ ಚಿತ್ರವನ್ನು ತಕ್ಷಣ ಗಮನಿಸಿದಾಗ ನಿಮ್ಮ ಕಣ್ಣಿಗೆ ಊಸರವಳ್ಳಿ ಕಾಣುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಈ ಸರೀಸೃಪವೂ ಕಾಣಿಸಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಊಸರವಳ್ಳಿ ಎಲ್ಲಿದೆ ಎಂದು ನಾವೇ ನಿಮಗೆ ಹೇಳುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ