ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ದಿಬ್ಬದ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಒಂಟಿಮಿಟ್ಟದಲ್ಲಿ ಕನಸಿನೊಂದಿಗೆ ಪ್ರಾರಂಭವಾದ ಕಥೆ ವಿಚಿತ್ರವಾಗಿದೆ. ಮಣ್ಣಿನ ದಿಬ್ಬದಡಿ ಕಾಣಿಸಿಕೊಂಡ ದೇವರ ಪ್ರತಿಮೆಗಳು ಸಂಚಲನ ಮೂಡಿಸಿತು. ಹುಡುಗನ ಕನಸನ್ನು ದೈವಿಕ ಸಂದೇಶವೆಂದು ನಂಬಿದ ಗ್ರಾಮಸ್ಥರು, ದಿಬ್ಬವನ್ನು ಅಗೆದು 5 ಲೋಹದ ಪ್ರತಿಮೆಗಳನ್ನು ಹೊರತೆಗೆದರು. ಈ ಬಗ್ಗೆ ಅನುಮಾನವೂ ವ್ಯಕ್ತವಾಗುತ್ತಿದೆ.
ಕಡಪ, ಜನವರಿ 3: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕೊನರಾಜುಪಲ್ಲಿಯಲ್ಲಿ ಒಬ್ಬ ಹುಡುಗನ ಕನಸಿನಲ್ಲಿ ದೇವರು ಕಾಣಿಸಿಕೊಂಡಿದ್ದಾರೆ. ದೇವರು ಆ ಹುಡುಗನಿಗೆ ತಾನು ಹಳ್ಳಿಯ ಹೊರವಲಯದಲ್ಲಿರುವ ಬೆಟ್ಟದ ಕೆಳಗೆ ಇರುವ ದಿಬ್ಬದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಈ ವಿಷಯವನ್ನು ಮರುದಿನ ಆ ಹುಡುಗ ತನ್ನ ಗ್ರಾಮಸ್ಥರಿಗೆ ಹೇಳಿದ್ದಾನೆ. ಇದು ದೇವರ ಸಂದೇಶವೆಂದು ಆತನ ಮಾತು ನಂಬಿದ ಇಡೀ ಹಳ್ಳಿಯವರು ದಿಬ್ಬವನ್ನು ಅಗೆಯಲು ಹೋದರು. ಆಗ ಅಲ್ಲಿ 3 ಪಂಚಲೋಹದ ವಿಗ್ರಹಗಳು ಪತ್ತೆಯಾದವು. ನರಸಿಂಹ ಸ್ವಾಮಿ, ಹನುಮಾನ್ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಅಲ್ಲಿ ಕಂಡುಬಂದವು. ಅಲ್ಲಿ ಇನ್ನೂ ಎರಡು ವಿಗ್ರಹಗಳು ಇವೆ ಎಂದು ದೇವರು ಹೇಳಿದ್ದಾರೆ ಎಂದು ಆ ಹುಡುಗ ಹೇಳಿದ್ದಾನೆ. ಅದನ್ನು ಇನ್ನೂ ಪತ್ತೆಹಚ್ಚಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

