
ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಚಿತ್ರಗಳು ಒಂದು ಕ್ಷಣ ನಿಮ್ಮ ಕಣ್ಣನ್ನೇ ಮೋಸಗೊಳಿಸುತ್ತವೆ. ಹೀಗಾಗಿ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ಹೆಚ್ಚಿನವರು ಇಂತಹ ಒಗಟು ಬಿಡಿಸುವಾಗ ಸೋಲುತ್ತಾರೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಪ್ರಕೃತಿ ನಡುವೆ ಎಷ್ಟು ಆಮೆಗಳಿವೆ ಎಂದು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ. ಹೀಗಾಗಿ ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಒಂದು ಚಾಲೆಂಜ್.
ಮೆದುಳಿಗೆ ಕಸರತ್ತು ನೀಡುವ ಆಟಗಳು ಮತ್ತು ಸಂಕೀರ್ಣ ಒಗಟುಗಳನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವು ಅಷ್ಟೇ ಕಠಿಣ ಸವಾಲಿನದ್ದಾಗಿದೆ. ನೀವಿಲ್ಲಿ ಸುಂದರವಾದ ಪ್ರಕೃತಿ ದೃಶ್ಯವನ್ನು ಕಾಣಬಹುದು. ನಿಮ್ಮ ಕಣ್ಣಿಗೆ ಒಂದು ದೊಡ್ಡ ಆಮೆ ಕಾಣಿಸುತ್ತಿರಬಹುದು. ಆದರೆ ಆ ಫೋಟೋದಲ್ಲಿ ಇನ್ನಷ್ಟು ಆಮೆಗಳಿವೆ. ನೀವು ಇಲ್ಲಿ ಒಟ್ಟು ಎಷ್ಟು ಆಮೆಗಳಿವೆ ಎಂದು ಕಂಡುಹಿಡಿಯಬೇಕು. ಕಣ್ಣು ಅಗಲಿಸಿ ಪ್ರತಿಯೊಂದು ಮೂಲೆಯನ್ನು ಪರೀಕ್ಷಿಸಿ ನಿಖರವಾದ ಉತ್ತರ ಹೇಳಲು ಪ್ರಯತ್ನಿಸಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ
ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಕಾಣುವುದು ಒಂದು, ಆದರೆ ಅದರಲ್ಲಿ ಅಡಗಿರುವುದು ಇನ್ನೊಂದು ಆಗಿರುತ್ತದೆ. ನೀವು ಎಷ್ಟೇ ಹುಡುಕಿದರೂ ಚಿತ್ರದಲ್ಲಿರುವ ಆಮೆಗಳೆಷ್ಟು ಎನ್ನುವುದನ್ನು ಹೇಳಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಒಟ್ಟು 8 ಆಮೆಗಳಿವೆ. ಈ ಕೆಳಗಿನ ಚಿತ್ರದಲ್ಲಿ ಆಮೆಗಳನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ