Video: ಮಗಳ ಕಾಳಜಿಯುತ ಮಾತು ಕೇಳಿ ಭಾವುಕನಾದ ತಂದೆ
ಅಪ್ಪ ಮಗಳ ಬಾಂಧವ್ಯವೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸುಂದರ ಬಾಂಧವ್ಯ ಸಾರುವ ಹೃದಯ ಸ್ಪರ್ಶಿ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಗಳು ತನ್ನ ತಂದೆಗೆ ಬುದ್ಧಿ ಮಾತು ಹೇಳುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಹೀಗಾಗಿ ಅಪ್ಪ ಅಂದ್ರೆ ಮಗಳಿಗೆ ಬೆಸ್ಟ್ ಫ್ರೆಂಡ್, ಹೀರೋ ಎಲ್ಲವೂ ಕೂಡ. ಇತ್ತ ತಂದೆಯ ಪಾಲಿಗೆ ಮಗಳು ಎರಡನೇ ತಾಯಿಯಾಗಿರುತ್ತಾಳೆ. ತನ್ನ ಜೀವನದಲ್ಲಿ ತಂದೆಗೆ ವಿಶೇಷ ಸ್ಥಾನ ನೀಡಿರುತ್ತಾಳೆ. ಆ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಂದಹಾಗೆ, ಪುಟ್ಟ ಮಕ್ಕಳಿಗೆ (little kids) ಬುದ್ಧಿ ಮಾತು ಹೇಳುವಂತೆ ಇಲ್ಲೊಬ್ಬಳು ಮಗಳು ತನ್ನ ತಂದೆಗೆ ಕಿವಿ ಮಾತು ಹೇಳಿದ್ದಾಳೆ. ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕರಾಗಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಬ್ರಹ್ಮ (Brahma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋಗೆ ನಾನು ಅಪ್ಪನಂತೆ ವರ್ತಿಸಲು ಯೋಜಿಸಿದ್ದೆ… ಆದರೆ ಅಪ್ಪ ಗಂಭೀರವಾಗಿ ತೆಗೆದುಕೊಂಡರು ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಎಲ್ಲಿಗೋ ಹೊರಟಿದ್ದು ಆಟೋದಲ್ಲಿ ಕುಳಿತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
I Planned to Act Like Dad… But Dad Got Serious. pic.twitter.com/2b9IqM4Hfe
— 𝐁𝐑𝐀𝐇𝐌𝐀 (@Brahma2910) December 31, 2025
ಮುದ್ದಿನ ಮಕ್ಕಳು ಮೊದಲ ಬಾರಿಗೆ ಒಂಟಿಯಾಗಿ ದೂರದ ಊರಿಗೆ ಹೊರಟು ನಿಂತಾಗ ಹೆತ್ತವರು ಬಸ್ಸು ಅಥವಾ ರೈಲು ಹತ್ತಿದ ಕೂಡಲೇ ತಿಳಿಸಲು, ಅಪರಿಚಿತರು ಏನು ಕೊಟ್ಟರೂ ತೆಗೆದುಕೊಳ್ಳದಂತೆ, ಹಣದ ಅಗತ್ಯವಿದ್ದರೆ ತಿಳಿಸಲು ಹೀಗೆ ಕಾಳಜಿಯುತ ಮಾತುಗಳನ್ನು ಆಡುತ್ತಾರೆ. ಅದೇ ರೀತಿ ಈ ವಿಡಿಯೋದಲ್ಲಿ ಮಗಳು ಕೂಡ ತನ್ನ ತಂದೆಗೆ ಅದೇ ಮಾತನ್ನು ಹೇಳಿರುವುದನ್ನು ಕಾಣಬಹುದು. ಮಗಳ ಮಾತು ಕೇಳಿ ತಂದೆಯ ಕಣ್ಣಲ್ಲಿ ನೀರು ಬಂದಿದೆ. ಕೊನೆಗೆ ಮಗಳು ತಂದೆಯನ್ನು ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾಳೆ.
ಇದನ್ನೂ ಓದಿ:ಮಗಳು ತನ್ನ ಪ್ರೀತಿ ವಿಷ್ಯ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ತಂದೆ
ಈ ವಿಡಿಯೋ ಒಂಬತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ಸುಂದರ ಬಾಂಧವ್ಯ ಎಂದರೆ, ಮತ್ತೊಬ್ಬರು, ಇದು ತಂದೆ ಮತ್ತು ಮಗಳ ನಡುವಿನ ಶುದ್ಧ ಬಂಧ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಪರಿಶುದ್ಧ ಬಾಂಧವ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




