
ಪ್ರತಿನಿತ್ಯ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ (Optical Illusion) ಫೋಟೋಗಳು ಹರಿದಾಡುತ್ತಿರುತ್ತವೆ. ಇಂತಹ ಒಗಟುಗಳನ್ನು ಬಿಡಿಸುವುದೇ ಸವಾಲಿನ ಕೆಲಸ. ಕೆಲವರಿಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಚಿರತೆಯೊಂದು (leopard) ಅವಿತು ಕುಳಿತುಕೊಂಡಿದೆ. ಈ ಕಾಡು ಪ್ರಾಣಿಯನ್ನು ನೀವು 13 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಿದ್ರೆ ನೀವು ಜಾಣರು ಎಂದರ್ಥ.
ನಿಮ್ಮ ಕಣ್ಣನ್ನು ಮೋಸಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟವನ್ನು ನೋಡಬಹುದು. ಈ ಬೆಟ್ಟದ ಮೇಲೆ ಒಣಹುಲ್ಲುಗಳು ಇದ್ದು, ಇಲ್ಲಿ ಚಿರತೆಯೊಂದು ಅವಿತು ಕುಳಿತಿದೆ. ತನ್ನ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಜಾಣತನದಿಂದ ಚಿರತೆಯನ್ನು ಜಾಣತನದಿಂದ ಮರೆಮಾಡಲಾಗಿದೆ. ನಿರ್ದಿಷ್ಟ ಸಮಯದೊಳಗೆ ಈ ಪ್ರಾಣಿಯನ್ನು ಹುಡುಕಲು ಪ್ರಯತ್ನಿಸಿ.
ಇದನ್ನೂ ಓದಿ:ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಉಭಯವಾಸಿ ಜೀವಿಯನ್ನು ಪತ್ತೆ ಹಚ್ಚಿ
ಎಷ್ಟೆ ತಲೆಕೆಡಿಸಿಕೊಂಡರೂ, ಕಣ್ಣು ಅಗಲಿಸಿ ನೋಡಿದರೂ ಚಿರತೆಯೊಂದು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹೊಂದಿದವರೂ ಮಾತ್ರ ಇಂತಹ ಒಗಟನ್ನು ಬಿಡಿಸಲು ಸಾಧ್ಯ. ಈ ಕೆಳಗಿನ ಚಿತ್ರದಲ್ಲಿ ಚಿರತೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ