Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಫೋಟೋಗಳು ಹರಿದಾಡುತ್ತಿರುತ್ತವೆ. ಇಂತಹ ಕಠಿಣ ಸವಾಲಿನ ಒಗಟುಗಳನ್ನು ಬಿಡಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಇದೀಗ ಇಲ್ಲೊಂದು ಬಲು ಕಷ್ಟಕರವಾದ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳ ಒಳಗೆ ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ

Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Oct 06, 2025 | 2:59 PM

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ಗಳು (Optical illusion) ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಸಾಕಷ್ಟು ಫೋಟೋಗಳು ಹರಿದಾಡುತ್ತಿರುತ್ತವೆ. ದೃಷ್ಟಿ ಮತ್ತು ಬುದ್ಧಿಗೆ ಸವಾಲು ನೀಡುವ ಈ ಆಟವನ್ನು ಆಡುವ ಖುಷಿಯೇ ಬೇರೆ. ಇದೀಗ ಇಲ್ಲೊಂದು ನಿಮ್ಮ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಆಮೆಗಳ ನಡುವೆ ಹಾವೊಂದು ಅಡಗಿದೆ. ನಿಮ್ಮ ಏಕಾಗ್ರತೆ ಹಾಗೂ ವೀಕ್ಷಣಾ ಕೌಶಲ್ಯ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಈ ಆಟವನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಈ ಚಿತ್ರದಲ್ಲಿ ಏನೆಲ್ಲಾ ಇದೆ?

ವೈರಲ್ ಆಪ್ಟಿಕಲ್ ಭ್ರಮೆಯನ್ನು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮೊದಲ ನೋಟದಲ್ಲಿ ಆಮೆಗಳನ್ನು ಹೊಂದಿರುವ ಕಾಡಿನ ದೃಶ್ಯವನ್ನು ಕಾಣಬಹುದು. ಈ ಸರೀಸೃಪಗಳು ಹಚ್ಚ ಹಸಿರಿನ ಜರೀಗಿಡಗಳು ಮತ್ತು ಮರದ ಕಾಂಡಗಳ ನಡುವೆ ಹರಡಿಕೊಂಡಿವೆ. ಈ ಆಮೆಗಳ ನಡುವೆ ಹಾವನ್ನು ಮರೆ ಮಾಡಲಾಗಿದೆ. ಹತ್ತು ಸೆಕೆಂಡುಗಳಲ್ಲಿ ಈ ಹಾವನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Spot the snake in this sneaky
byu/Quirkynator inFindTheSniper

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ಕಂಡು ಹಿಡಿದ್ರೆ ನೀವು ಜಾಣರು ಎಂದರ್ಥ
ಈ ಚಿತ್ರದಲ್ಲಿ ಅಣಬೆಗಳ ನಡುವೆ ಅಡಗಿರುವ ಇಲಿಯನ್ನು ಕಂಡುಹಿಡಿಯಿರಿ
ಹುಲ್ಲಿನ ನಡುವೆ ಅಡಗಿರುವ ಸಣ್ಣದಾದ ಕಪ್ಪೆಯನ್ನು ಕಂಡುಹಿಡಿಯಿರಿ
ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಿರಿ

ಇದನ್ನೂ ಓದಿ:Optical Illusion: ಮರದ ಕೊಂಬೆಗಳ ನಡುವೆ ಅಡಗಿರುವ ಗೂಬೆಯನ್ನು ಕಂಡು ಹಿಡಿದ್ರೆ ನೀವು ಜಾಣರು ಎಂದರ್ಥ

ನಿಮ್ಮ ಕಣ್ಣಿಗೆ ಹಾವು ಕಂಡಿತೇ?

ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್‌ ನಿಮಗೂ ಇದ್ರೆ ಈ ಒಗಟಿನ ಚಿತ್ರ ನಿಮಗೆ ಖುಷಿ ನೀಡುತ್ತದೆ. ಹಾವು ಮತ್ತು ಆಮೆಗಳು ಬಹಳ ಹೋಲುವುದರಿಂದ, ಈ ಸರೀಸೃಪವನ್ನು ಗುರುತಿಸುವುದು ಕಷ್ಟ. ಈ ಹಾವಿನ ಚರ್ಮದ ಬಣ್ಣವು ಹಸಿರು ಹಿನ್ನೆಲೆಯೊಂದಿಗೆ ಬೆರೆತಿದೆ. ನಿಮ್ಮ ಕಣ್ಣಿಗೆ ಹಾವು ಕಂಡಿಲ್ಲವೆಂದಾದರೆ ಹೆಚ್ಚು ಚಿಂತಿಸಬೇಡಿ. ಹಾವು ಈ ಚಿತ್ರದ ಎಡಭಾಗದಲ್ಲಿದ್ದು, ಈ ಹಾವನ್ನು ಕೆಳಗಿನಿಂದ ನಾಲ್ಕು ಆಮೆಗಳ ಮೇಲೆ ಪತ್ತೆ ಮಾಡಬಹುದು. ನೀವು ಕಣ್ಣು ಬಿಟ್ಟು ಈ ಚಿತ್ರ ನೋಡಿದರೆ ಹಾವು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ