Optical Illusion: ಆನೆ ಹಿಂಡಿನ ಮಧ್ಯೆ ಅಡಗಿರುವ ಘೇಂಡಾಮೃಗವನ್ನು ಪತ್ತೆ ಹಚ್ಚಬಲ್ಲಿರಾ?

ಚಿತ್ರದಲ್ಲಿ ಆನೆಗಳ ಹಿಂಡಿನ ನಡುವೆ ಎಲ್ಲೋ ಒಂದು ಘೇಂಡಾಮೃಗ ಅಡಗಿದೆ. ಆರು ಸೆಕೆಂಡಿನಲ್ಲಿ ಅದನ್ನು ನಿಮ್ಮಿಂದ ಹುಡುಕಲು ಸಾಧ್ಯವೇ? ನೀವು ಈ ಚಿತ್ರವನ್ನು ಕೆಲ ಹೊತ್ತಿನವರೆಗೆ ಸರಿಯಾಗಿ ಗಮನಿಸಿದರೆ ಮಾತ್ರ ಘೇಂಡಾಮೃಗವನ್ನು ಪತ್ತೆ ಹಚ್ಚಲು ಸಾಧ್ಯ. ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusion: ಆನೆ ಹಿಂಡಿನ ಮಧ್ಯೆ ಅಡಗಿರುವ ಘೇಂಡಾಮೃಗವನ್ನು ಪತ್ತೆ ಹಚ್ಚಬಲ್ಲಿರಾ?
Optical Illusion
Image Credit source: Bright Side

Updated on: Feb 01, 2024 | 4:41 PM

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಚಿತ್ರದಲ್ಲಿ ಆನೆಗಳ ಗುಂಪನ್ನು ಕಾಣಬಹುದು. ಆದರೆ ಎಲ್ಲೋ ಆನೆಗಳ ನಡುವೆ ಮರಿ ಖಡ್ಗಮೃಗವೂ ಅಡಗಿದೆ. ಇಂದಿನ ಸವಾಲು ಕೂಡ ಅದೇ. ನೀವು 6 ಸೆಕೆಂಡುಗಳಲ್ಲಿ ಘೇಂಡಾಮೃಗವನ್ನು ಕಂಡುಹಿಡಿಯಬೇಕು . ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ಘೇಂಡಾಮೃಗವನ್ನು ಪತ್ತೆ ಹಚ್ಚಲು ಸಾಧ್ಯ. ಇದು ನಿಮ್ಮ ಕಣ್ಣಿಗೆ ಸವಾಲೆಳೆಸುವ ಆಟವಾಗಿದ್ದು, ನೀವು ಉತ್ತರವನ್ನು ಕಂಡು ಹುಡುಕಲು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.

ಚಿತ್ರದಲ್ಲಿ ಆನೆಗಳು ಮರಿಯಾನೆಗಳೊಂದಿಗೆ ಮೋಜು ಮಾಡುತ್ತಾ ಸಂತೋಷವಾಗಿರುವುದನ್ನು ಕಾಣಬಹುದು. ಆದರೆ ಅಷ್ಟೂ ಆನೆಗಳ ನಡುವೆ ಅಡಗಿರುವ ಘೇಂಡಾಮೃಗವನ್ನು ನೀವು ಗುರುತಿಸಬಹುದೇ? ಈ ಕಾರ್ಯ ನೀವು ಅಂದುಕೊಂಡಷ್ಟು ಸುಲಭವಲ್ಲ. ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂದು ಪರೀಕ್ಷಿಸಲು ನೀಡಿರುವ ಸವಾಲಿನ ಆಟವಾಗಿದೆ.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ನಿಗದಿತ ಸಮಯದೊಳಗೆ ನಿಮಗೆ ಆನೆ ಹಿಂಡಿನ ಮಧ್ಯೆ ಅಡಗಿರುವ ಘೇಂಡಾಮೃಗವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇ? ನೀವು ಎಷ್ಟೇ ಚಿತ್ರವನ್ನು ದಿಟ್ಟಿಸಿ ನೋಡಿದರೂ ಮರಿ ಘೇಂಡಾಮೃಗವನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಈ ಕೆಳಗಿನ ಚಿತ್ರದಲ್ಲಿ ಘೇಂಡಾಮೃಗವನ್ನು ಗುರುತಿಸಲಾಗಿದೆ. ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us