
ಆಪ್ಟಿಕಲ್ ಇಲ್ಯೂಷನ್ಗಳು ಕೆಲವೊಮ್ಮೆ ಇಲ್ಲದ ವಸ್ತುಗಳು ಇರುವಂತೆ ಮೋಸಗೊಳಿಸುತ್ತವೆ. ಈ ಮೊದಲೆಲ್ಲಾ ಅವುಗಳನ್ನು ಮಾಟಮಂತ್ರ, ಆತ್ಮ, ಅಲೌಕಿಕ ಶಕ್ತಿ ಎಂದೆಲ್ಲಾ ಹೇಳುತ್ತಿದ್ದರು. ಇಲ್ಯೂಷನ್ ಎಂಬುದು ಲ್ಯಾಟಿನ್ನಲ್ಲಿ ಇಲ್ಯುಡೆರೆ ಇಂದ ಬಂದಿದೆ. ಮೋಸಮಾಡುವುದು ಎಂಬುದು ಇದರರ್ಥ. ಈ ಆಫ್ಟಿಕಲ್ ಚಿತ್ರಗಳು ಮಾನವನ ಕಣ್ಣನ್ನು ಮೋಸಗೊಳಿಸುತ್ತವೆ, ಮೆದುಳಿಗೆ ಹೆಚ್ಚು ಕೆಲಸ ಕೊಡುತ್ತವೆ. ಮೆದುಳು ಹಾಗೂ ಕಣ್ಣುಗಳ ನಡುವೆ ಹೋರಾಟ ನಡೆಸುತ್ತವೆ.
ಏ ಬೆಕ್ಕುಗಳು ಅಲ್ಲೇ ಇರಬೇಕು ಹುಡುಕು ಎಂದು ಮೆದುಳು ಹೇಳಿದರೆ, ಇಲ್ಲೇನು ಕಾಣ್ತಿಲ್ಲ ಎಂದು ಕಣ್ಣುಗಳು ಹೇಳುತ್ತವೆ, ಕೊನೆಗೆ ಹುಡುಕಿ ಹುಡಿಕಿ ಕೆಲವೊಮ್ಮೆ ಕಣ್ಣುಗಳು ಗೆದ್ದರೆ ಕೆಲವೊಮ್ಮೆ ಸೋಲು ಕಾಣುತ್ತವೆ. ಕಣ್ಣುಗಳು ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಹೇಗೆ ಗ್ರಹಿಸುತ್ತವೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ಇದು ಸಹಕಾರಿ.
ಅಂತಹ ಒಂದು ಆಪ್ಟಿಕಲ್ ಭ್ರಮೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ, ಅಲ್ಲಿ ಓದುಗರು ಚಿತ್ರದಲ್ಲಿ ಅಡಗಿರುವ ಬೆಕ್ಕುಗಳನ್ನು 7 ಸೆಕೆಂಡುಗಳಲ್ಲಿ ಹುಡುಕುವಂತೆ ಕೇಳಲಾಗಿದೆ. ನಿಮ್ಮ ಕಣ್ಣುಗಳನ್ನು ಪರೀಕ್ಷಿಸಲು ನೀವು ಸಿದ್ಧರಿದ್ದೀರಾ? ಹಾಗಾದರೆ ಈ ಆಪ್ಟಿಕಲ್ ಇಲ್ಯೂಷನ್ ಪಜಲ್ ಅನ್ನು ಈಗಲೇ ಸಾಲ್ವ್ ಮಾಡಿ.
Illusion
ಮೇಲೆ ಹಂಚಿಕೊಳ್ಳಲಾದ ಚಿತ್ರದಲ್ಲಿ ಹೂವುಗಳು, ಕಲ್ಲು ಬಂಡೆ, ಮರಗಳ ಚಿತ್ರವಿದೆ, ಅಲ್ಲಿ ಎರಡು ಬೆಕ್ಕುಗಳಿವೆ. ನೀವು 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ. ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ.
ಚಿತ್ರದ ಎಲ್ಲಾ ಭಾಗಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ನೀವು ಅಡಗಿರುವ ಬೆಕ್ಕುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಕೊನೆಯ ಕೆಲವು ಸೆಕೆಂಡುಗಳು ಉಳಿದಿವೆ, ಎಷ್ಟು ಜನರಿಗೆ ಬೆಕ್ಕುಗಳು ಕಾಣಿಸ್ತು.
ಸಮಯದ ಮಿತಿಯೊಳಗೆ ಅಡಗಿದ್ದ ಬೆಕ್ಕುಗಳನ್ನು ಕಂಡುಹಿಡಿದ ತೀಕ್ಷ್ಣ ದೃಷ್ಟಿಯಿರುವ ಓದುಗರಿಗೆ ಅಭಿನಂದನೆಗಳು. ಯಾರಿಗೆ ಕಾಣಿಸಿಲ್ಲವೋ ಎಲ್ಲಿದೆ ಎಂಬುದನ್ನು ಈ ಚಿತ್ರದ ಮೂಲಕ ನೋಡಿ.
Cat (2)
ಈ ಆಪ್ಟಿಕಲ್ ಇಲ್ಯೂಷನ್ ನಿಮಗೆ ಇಷ್ಟವಾಗಿದ್ದರೆ ಇದನ್ನು ಬೇರೆಯವರೊಂದಿಗೂ ಹಂಚಿಕೊಳ್ಳಿ, ಅವರು ಬೆಕ್ಕುಗಳನ್ನು ಎಷ್ಟು ಬೇಗ ಗುರುತಿಸಬಲ್ಲರು ಎಂಬುದನ್ನು ನೋಡಿ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ