ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ನಿಮಗೆ ಚಿತ್ರವನ್ನು ಮೊದಲು ನೋಡಿದಾಗ ಎಲ್ಲಾ ‘E’ ಅಕ್ಷರಗಳು ಒಂದೇ ರೀತಿ ಇರುವಂತೆ ಕಾಣಿಸುತ್ತಿರಬಹುದು. ಆದರೆ ಈ ಚಿತ್ರವನ್ನು ನೀವು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಭಿನ್ನವಾಗಿರುವ ಒಂದೇ ‘E’ ಅಕ್ಷರವನ್ನು ಪತ್ತೆ ಹಚ್ಚಬಹುದು. ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಮೂರೇ ಸೆಕೆಂಡುಗಳಲ್ಲಿ ಭಿನ್ನವಾಗಿರುವ ‘E’ ಅಕ್ಷರವನ್ನು ಕಂಡು ಹುಡುಕಿ. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಪತ್ತೆ ಹಚ್ಚಿ ನೋಡೋಣ.
ಈ ಸವಾಲಿನ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ಮೇಲೆ ನೀಡಿರುವ ಚಿತ್ರದಲ್ಲಿ ಸಾಕಷ್ಟು ‘E’ ಅಕ್ಷರಗಳನ್ನು ಕಾಣಬಹುದು. ಆದರೆ ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಒಂದೇ ಒಂದು ಭಿನ್ನವಾಗಿರುವುದನ್ನು ಪತ್ತೆಹಚ್ಚಬಹುದು. ಇದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಮೆದುಳನ್ನು ಚುರುಕುಗೊಳಿಸಲು ಸಹಾಯಕವಾಗಿದೆ.
ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?
ಇನ್ನೂ ನಿಮಗೆ ಭಿನ್ನವಾಗಿರುವ ‘E’ ಅಕ್ಷರವನ್ನು ಹುಡುಕಲು ಕಷ್ಟವಾಗುತ್ತಿದೆಯೇ? ಚಿತ್ರವನ್ನು ಸರಿಯಾಗಿ ನೋಡಿ. ಚಿತ್ರ ಸಾಕಷ್ಟು ಸಿಂಪಲ್ ಎಂದೆನಿಸಿದರೂ ಕೂಡ ಉತ್ತರವನ್ನು ಕಂಡುಹುಡುಕುವುದು ಅಷ್ಟು ಸುಲಭವಲ್ಲ. ಹಾಗಿದ್ದರೆ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದ ವೃತ್ತಗಳಲ್ಲಿ ಭಿನ್ನವಾಗಿರುವ ‘E’ ಅಕ್ಷರವನ್ನು ಗುರುತಿಸಲಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ