Viral Video: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಜಿಲೇಬಿ ಮೇಕರ್ ಮಷಿನ್; ವಿಡಿಯೋ ಇಲ್ಲಿದೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಪ್ರತಿನಿತ್ಯ ಹಾಸ್ಯಮಯ ಮತ್ತು ಆಸಕ್ತಿದಾಯಕ ವಿಡಿಯೋ, ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ X ಖಾತೆಯಲ್ಲಿ ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಜಿಲೇಬಿ ತಯಾರಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಆಧುನಿಕ ಶೈಲಿಯ ಜಿಲೇಬಿ ತಯಾರಿಕೆಯ ದೃಶ್ಯವನ್ನು ಕಂಡು ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡಿ.

Viral Video: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಜಿಲೇಬಿ ಮೇಕರ್ ಮಷಿನ್; ವಿಡಿಯೋ ಇಲ್ಲಿದೆ ನೋಡಿ
3D printer jalebis Image Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Feb 21, 2024 | 6:38 PM

ಹೇಳಿ ಕೇಳಿ ಇದು ಆಧುನಿಕ ಯುಗ. ಯಾವ ಕೆಲಸ ಆದರೂ ಸರಿ ಫಟಾಫಟ್ ಮುಗಿಯಬೇಕು ಎನ್ನುವ ಧೋರಣೆ ಎಲ್ಲರಲ್ಲೂ ಬೆಳೆಯುತ್ತಿದೆ. ಈ ಕಾಲದಲ್ಲಿ ಬಹಳಷ್ಟು ಎಲ್ಲಾ ಕೆಲಸಗಳು ಮಷಿನ್ ಗಳಲ್ಲಿಯೇ ನಡೆಯುತ್ತವೆ. ಫ್ಯಾಕ್ಟರಿಗಳಲ್ಲಿ ಫುಡ್ ತಯಾರಿಸುವುದರಿಂದ ಹಿಡಿದು ಕೃಷಿ ಕಾರ್ಯಕ್ಕೆ, ಮನೆಯಲ್ಲಿ ಪಾತ್ರೆ ತೊಳೆಯಲು, ಕಸ ಗುಡಿಸಲು ಕೂಡಾ ಯಂತ್ರಗಳನ್ನು ಬಳಸಲಾಗುತ್ತಿದೆ. ಅದೇ ರೀತಿ ಈಗ ಜಿಲೇಬಿ ತಯಾರಿಸಲು ಕೂಡಾ ಮಷಿನ್ ಬಂದಿದೆ. ಹೌದು ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಜಿಲೇಬಿ ವ್ಯಾಪಾರಿ ಯಂತ್ರದ ಸಹಾಯದಿಂದ ಎಷ್ಟು ಸಲೀಸಾಗಿ ಜಿಲೇಬಿಯನ್ನು ತಯಾರಿಸುತ್ತಿದ್ದಾರೆ ಎಂಬುದನ್ನು ನೋಡಬಹುದು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ತಂತ್ರಜ್ಞಾನ ಜಗತ್ತಿನಲ್ಲಿ ಈಗ ಜಿಲೇಬಿಯನ್ನು ಕೂಡಾ ಯಂತ್ರದಿಂದ ತಯಾರಿಸಬಹುದು ಎಂಬುದನ್ನು ತೋರಿಸಿದೆ. ಸಾಮಾನ್ಯವಾಗಿ ಹಿಟ್ಟನ್ನು ತಯಾರಿಸಿ ಆ ಹಿಟ್ಟನ್ನು ಒಂದು ಬಟ್ಟೆಗೋ ಅಥವಾ ಪ್ಲಾಸ್ಟಿಕ್ ಕವರ್ ಗೋ ಹಾಕಿ ಅದನ್ನು ಎಣ್ಣೆಯಲ್ಲಿ ಬಿಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ರುಚಿ ರುಚಿಯಾದ ಜಿಲೇಬಿ ತಯಾರಿಸುತ್ತಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಾಪಾರಿಯೊಬ್ಬರು ಯಂತ್ರದ ಸಹಾಯದಿಂದ ಕ್ಷಣ ಮಾತ್ರದಲ್ಲಿ ಜಿಲೇಬಿ ಹಿಟ್ಟನ್ನು ಎಣ್ಣೆಯಲ್ಲಿ ಬಿಡುವುದನ್ನು ಕಾಣಬಹುದು. ಈ ವಿಶೇಷ ಯಂತ್ರದ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಏನು ಹೇಳಿದ್ದಾರೆ ನೋಡಿ..

ಆನಂದ್ ಮಹೀಂದ್ರಾ ಅವರು ತಮ್ಮ X ಹಂಚಿಕೊಂಡಿರುವ ವಿಡಿಯೋದಲ್ಲಿ ಪಾಕಿಸ್ತಾನದ ಫೈಸಲಾಬಾದಿನ ಸ್ಥಳೀಯ ಆಹಾರ ಮಾರಾಟಗಾರರೊಬ್ಬರು ಹೊಸ ಆಧುನಿಕ ಯಂತ್ರವನ್ನು ಬಳಸಿಕೊಂಡು ಬಿಸಿಬಿಸಿ ಜಿಲೇಬಿ ತಯಾರಿಸುತ್ತಿರುವುದನ್ನು ಕಾಣಬಹುದು. ಒಂದು ಕಂಟೇನರ್ ಗೆ ಜಿಲೇಬಿ ಹಿಟ್ಟನ್ನು ಹಾಕಿ 3D ಪ್ರಿಂಟ್ ಪೈಪ್ ಸಹಾಯದಿಂದ ಆ ಹಿಟ್ಟನ್ನು ಎಣ್ಣೆಗೆ ಬಿಟ್ಟು ಜಿಲೇಬಿಯನ್ನು ತಯಾರಿಸಿದ್ದಾರೆ.

ಈ ಆಧುನಿಕ ಶೈಲಿಯ ಜಿಲೇಬಿ ತಯಾರಿಕೆಯ ವಿಡಿಯೋವನ್ನು ಕಂಡು ಆನಂದ್ ಮಹೀಂದ್ರಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, “ನಾನು ಕೂಡಾ ಟೆಕ್ ಬಫ್. ಆದರೆ 3D ಪ್ರಿಂಟರ್ ಪೈಪ್ ಸಹಾಯದಿಂದ ಜಿಲೇಬಿ ತಯಾರಿಸುವುದನ್ನು ನೋಡಿದಾಗ ನನಗೆ ಮಿಕ್ಸ್ಡ್ ಫೀಲಿಂಗ್ಸ್ ಉಂಟಾಗಿದೆ. ಇದು ಕೂಡಾ ಚೆನ್ನಾಗಿದೆ ಆದರೆ ಸಾಂಪ್ರದಾಯಿಕ ಶೈಲಿಯಲ್ಲಿ ಕೈಯಿಂದ ಜಿಲೇಬಿ ತಯಾರಿಸುವುದು ಒಂದು ಕಲೆ, ಅದರ ರುಚಿ ಚೆನ್ನಾಗಿರುತ್ತದೆ. ಬಹುಶಃ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಓಲ್ಡ್ ಫ್ಯಾಷನೈಡ್ ನಾನಾಗಿದ್ದೇನೋ ಎಂದು ನನಗನಿಸುತ್ತಿದೆ” ಎಂದು ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾಯಿ ಕದಿಯಲು ಬಂದಿದ್ದ ಎಂದು ವ್ಯಕ್ತಿಯೊಬ್ಬರನ್ನು ಅದರದ್ದೇ ಗೂಡಿನಲ್ಲಿ ಬಂಧಿಸಿದ ಬಾರ್ ಸಿಬ್ಬಂದಿ

ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನಗೂ ಕೂಡಾ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಿದ ಜಿಲೇಬಿಯೇ ಇಷ್ಟ. ಅದರ ಮುಂದೆ ಯಾವ ರುಚಿಯೂ ಇಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಹೇಳಿದ್ದು ಸರಿ ಸರ್ ಹ್ಯಾಂಡ್ ಮೇಡ್ ಜಿಲೇಬಿಗಳೇ ಚೆನ್ನಾಗಿರುತ್ತವೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ʼಏನೇ ಹೇಳಿ ಕೈಯಾರೆ ಮಾಡಿದ ಆಹಾರಗಳೇ ಹೆಚ್ಚು ರುಚಿಕರವಾಗಿರುತ್ತವೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Wed, 21 February 24

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ