Viral Vedio: ಬೈಕ್​ ಹಿಂಬದಿ ಸೀಟ್​ಲ್ಲಿ ಕುಳಿತ ಎತ್ತು: ಬೈಕ್​ ಸವಾರನ ಈ ಸಾಹಸಕ್ಕೆ ದಂಗಾದ ನೆಟ್ಟಿಗರು

ವಿಡಿಯೋದಲ್ಲಿ ಆ ವ್ಯಕ್ತಿ ಹೋರಿನ್ನು ಬೈಕ್​​ಗೆ ಹಗ್ಗದಿಂದ ಕಟ್ಟಿ ಹಿಂಬದಿಯ ಸೀಟಿನಲ್ಲಿ ಕೂರಿಸಿದ್ದಾನೆ. ಜೊತೆಗೆ ಫುಲ್​ ಸ್ಪೀಡ್‌ನಲ್ಲಿ ಬೈಕ್ ಓಡಿಸುತ್ತಿದ್ದಾನೆ. ಎತ್ತು ಕೂಡ ಆರಾಮವಾಗಿ ಬೈಕ್‌ನಲ್ಲಿ ಕುಳಿತಿರುವುದು ನಾವು ನೋಡಬಹುದು.

Viral Vedio: ಬೈಕ್​ ಹಿಂಬದಿ ಸೀಟ್​ಲ್ಲಿ ಕುಳಿತ ಎತ್ತು: ಬೈಕ್​ ಸವಾರನ ಈ ಸಾಹಸಕ್ಕೆ ದಂಗಾದ ನೆಟ್ಟಿಗರು
Viral Vedio
Updated By: ಗಂಗಾಧರ​ ಬ. ಸಾಬೋಜಿ

Updated on: Sep 13, 2022 | 9:24 PM

ಇಂಟರ್ನೆಟ್ ಅದ್ಭುತ ಮತ್ತು ತಮಾಷೆ ವಿಡಿಯೋಗಳ ಉಗ್ರಾಣವಾಗಿದೆ. ಪ್ರತಿದಿನ ಒಂದಿಲ್ಲ ಒಂದು ಹೊಸ ವಿಡಿಯೋಗಳು ಕಾಣಸಿಗುತ್ತವೆ. ಇವು ನಮಗೆ ಮನರಂಜನೆ ಸಹ ನೀಡುತ್ತವೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗೆ ವೈರಲ್ ಆದ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಬೈಕ್‌ನಲ್ಲಿ ಎತ್ತು ಹೊತ್ತುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಆ ವ್ಯಕ್ತಿ ಎತ್ತನ್ನು ಬೈಕ್​​ಗೆ ಹಗ್ಗದಿಂದ ಕಟ್ಟಿ ಹಿಂಬದಿಯ ಸೀಟಿನಲ್ಲಿ ಕೂರಿಸಿದ್ದಾನೆ. ಜೊತೆಗೆ ಫುಲ್​ ಸ್ಪೀಡ್‌ನಲ್ಲಿ ಬೈಕ್ ಓಡಿಸುತ್ತಿದ್ದಾನೆ. ಎತ್ತು ಕೂಡ ಆರಾಮವಾಗಿ ಬೈಕ್‌ನಲ್ಲಿ ಕುಳಿತಿರುವುದು ನಾವು ನೋಡಬಹುದು. ಬೈಕ್ ಚಾಲಕ ಎಷ್ಟು ಅದ್ಭುತವಾಗಿ ಸಮತೋಲನ ಕಾಯ್ದುಕೊಂಡಿದ್ದಾನೆ ಎಂದು ನೋಡಿದರೆ ಸಾಕಷ್ಟು ಆಶ್ಚರ್ಯವಾಗುತ್ತದೆ.

ಈ ವಿಲಕ್ಷಣ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಅನಿಮಲ್ಸ್‌ಇಂಥೆನೇಚರ್‌ಟುಡೇ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಸದ್ಯ ಇದು ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಬಳಕೆದಾರರು ವಿಡಿಯೋ ನೋಡಿ ನಕ್ಕು ಸುಮ್ಮನಾದರೆ, ಇನ್ನು ಕೆಲವರು ಎತ್ತನ್ನು ಹೀಗೂ ಸಾಗಿಸಬಹುದಾ ಎಂದು ಆಶ್ಚರ್ಯ ಪಟ್ಟರು. ಮತ್ತೊಬ್ಬ ನೆಟ್ಟಿಗ ಹೋಂಡಾ ಬೈಕ್ ಮೇಲೆ ಏನು ಬೇಕಾದರೂ ಸಾಗಿಸಬಹುದು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮೂರನೆಯವರು ಸೂಪರ್ ಅನಿಮಲ್ ಟ್ಯಾಕ್ಸಿ ಎಂದು ಬರೆದಿದ್ದುಕೊಂಡಿದ್ದು, ನಾಲ್ಕನೆಯ ವ್ಯಕ್ತಿ ಇದು ತಮಾಷೆಯಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published On - 9:22 pm, Tue, 13 September 22