Viral Video : ಅಪ್ಪಣೆ ಬೇಡ, ಆಮಂತ್ರಣ ಬೇಡ, ಹೀಗೆ ಹೊಕ್ಕುಬಿಡುವುದೆ ನೀನು?

Elephant : ಈ ಮನೆಯಲ್ಲಿ ತಿಂಡಿ ಇದೆ ಅಂತ ಈ ಆನೆಗೆ ಹೇಗೆ ಗೊತ್ತಾಯಿತು? ಸೀದಾ ಮನೆಯೊಳಗೆ ಹೊಕ್ಕು ಬಾಯಿಚಪ್ಪರಿಸಿ ಆ ಸಣ್ಣ ಬಾಗಿಲಿನಲ್ಲಿ ತನ್ನ ದೊಡ್ಡ ದೇಹವನ್ನು ತೂರಿಕೊಂಡು ಅಂತೂ ಹೊರಬಂದಿದೆ.

Viral Video : ಅಪ್ಪಣೆ ಬೇಡ, ಆಮಂತ್ರಣ ಬೇಡ, ಹೀಗೆ ಹೊಕ್ಕುಬಿಡುವುದೆ ನೀನು?
ಅಬ್ಬಾ ಎಂಥ ರುಚಿಯಾದ ತಿಂಡಿಯಿತ್ತು ಗೊತ್ತಾ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 11:11 AM

Viral Video : ತಿಂಡಿತಿನಿಸಿನ ಪರಿಮಳ ಬರುತ್ತಿದ್ದಂತೆ ನಿಮ್ಮ ಮೂಗು ಮನಸು ಹೇಗೆ ಅರಳುತ್ತದೆಯೋ ಹಾಗೆಯೇ ಪ್ರಾಣಿಗಳಿಗೂ ಆಗುತ್ತದೆ. ಸಸ್ತನಿಗಳಲ್ಲಿ ವಾಸನಾಗ್ರಹಣ ಶಕ್ತಿ ಪ್ರಬಲವಾಗಿದೆ. ಅದರಲ್ಲೂ ಆನೆ, ನಾಯಿಗಳಲ್ಲಿ ಇದು ತೀವ್ರವಾಗಿದೆ. ಇಲ್ಲಿರುವ ಈ ವಿಡಿಯೋ ನೋಡಿ, ಆನೆಯೊಂದು ಚಿಕ್ಕಬಾಗಿಲಿನೊಳಗೆ ತನ್ನ ದೈತ್ಯ ದೇಹಿ ಆನೆಯೊಂದು ಅತ್ಯಂತ ಕೌಶಲದಿಂದ ತನ್ನ ದೇಹವನ್ನು ಬಾಗಿಲಿನೊಳಗಿನಿಂದ ತಳ್ಳಿಕೊಂಡು  ಹೊರಬರುತ್ತಿದೆ. ಈ ಮನೆಯವರು ಇದಕ್ಕೆ ತಿಂಡಿ ತಿನ್ನಲು ಕರೆದಿದ್ದರಾ ಏನು ವಿಷಯ? ವಿಡಿಯೋ ನೋಡಿ.

ನಮಗೇನಿಷ್ಟವೋ ಅದನ್ನು ಪಡೆಯಬೇಕೆಂದರೆ ಯಾವ ಅಡೆತಡೆಗಳನ್ನೂ ಹೊಕ್ಕು ಹೊರಬರುವ ತಂತ್ರ, ಕೌಶಲ ನಮಗೆ ಗೊತ್ತಿರುತ್ತದೆ ಅಲ್ಲವೆ? ಈ ಆನೆಯೂ ಹೀಗೇ ಮಾಡಿದಂತಿದೆ. ಈ ಮನೆಯೊಳಗಿನಿಂದ ಅದಕ್ಕೆ ತಿಂಡಿ ಪರಿಮಳ ಬಂದಿದೆ. ತಡೆದುಕೊಳ್ಳಲಾಗದೆ ನೇರ ಈ ಮನೆಯನ್ನು ಹೊಕ್ಕಿದೆ. ತನಗೆ ಬೇಕಾದ್ದನ್ನು ತಿಂದು ಹೊರಬರುವಾಗ ತುಸು ಕಷ್ಟವಾಗಿದೆ. ಆದರೂ ತನ್ನ ಗಜಗಾತ್ರವನ್ನು ಆ ಬಾಗಿಲಿನಲ್ಲಿ ತೂರಿಕೊಂಡು ಅಂತೂ ಹೊರಬಂದಿದೆ.

ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ನಾಯಿ, ಆನೆ, ಬೆಕ್ಕು ಮುಂತಾದ ಸಸ್ತನಿಗಳು ಮೈಲುಗಟ್ಟಲೆ ದೂರದಿಂದ ವಾಸನೆ ಗ್ರಹಿಸಿ ಆ ಆಹಾರವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.’ ಎಂದು ಅವರು ಈ ವಿಡಿಯೋಗೆ ನೋಟ್​ ಬರೆದಿದ್ದಾರೆ. ಈ ಪೋಸ್ಟ್​ ಐಎಫ್​ಎಸ್ ಅಧಿಕಾರಿ ಸಾಕೇತ್ ಬಡೋಲಾ ಹಂಚಿಕೊಂಡ ಈ ಪೋಸ್ಟ್​ ಅನ್ನೇ ಸುಸಾಂತ ರೀಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಇನ್ನೇನು 11,000 ವೀಕ್ಷಕರನ್ನು ತಲುಪುತ್ತದೆ. 700 ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ ಈ ಪೋಸ್ಟ್​.

ಅನೇಕರು ಇದು ಈ ಮನೆಯೊಳಗೆ ಯಾವ ತಿಂಡಿ ತಿನ್ನಲು ಹೋಗಿತ್ತು ಎಂಬುದನ್ನು ಊಹಿಸಿ ಪೋಸ್ಟ್​ ರೀಟ್ವೀಟ್​ ಮಾಡಿದ್ದಾರೆ. ‘ಈ ಮುದ್ದಾದ, ದೈತ್ಯದೇಹಿ ಅತ್ಯಂತ ಬುದ್ಧಿವಂತ ಪ್ರಾಣಿ. ಕಬ್ಬು ಇದರ ನೆಚ್ಚಿನ ಆಹಾರಗಳಲ್ಲಿ ಒಂದು. ಹಾಗಾಗಿ ಕಬ್ಬಿನ ಮೋಹಕ್ಕೆ ಒಳಗಾಗಿ ಇದು ಇಲ್ಲಿಗೆ ಹೋಗಿತ್ತಾ? ಎಂದಿದ್ದಾರೆ. ‘ಈ ಆನೆಗಳು ಯಾವಾಗಲೂ ಸ್ಮಾರ್ಟ್​ ಮತ್ತು ಅಷ್ಟೇ ವಿನಮ್ರಭಾವಜೀವಿಗಳು. ತೊಂದರೆಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಿ’ ಎಂದು ಸಲಹೆ ನೀಡಿದ್ದಾರೆ ಮತ್ತೊಬ್ಬ ನೆಟ್ಟಿಗರು. ‘ಭೂಮಂಡಲದ ಮೇಲಿರುವ ಅತ್ಯಂತ ಮನಮೋಹಕ ಜೀವಿ ಇದು’ ಎಂದು ಮಗದೊಬ್ಬರು ಪ್ರೀತಿ ವ್ಯಕ್ತಪಡಿಸಿದ್ದಾರೆ.

ನೀವೂ ಹುಷಾರು! ರುಚಿಯಾದ ತಿಂಡಿ ಮಾಡಿದಾಗ…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:10 am, Wed, 14 September 22