Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ

Talented Kid : ವರ್ಣಮಾಲಿಕೆಯ ಅನುಕ್ರಮದಲ್ಲಿ ನಿರರ್ಗಳವಾಗಿ ಈ ಪುಟ್ಟ ಹುಡುಗಿ 75 ಜಿಲ್ಲೆಗಳ ಹೆಸರುಗಳನ್ನು ಹೇಳುತ್ತಿದ್ದರೆ ಆಹಾ ಎನ್ನಿಸದೇ ಇರದು! 36,000 ನೆಟ್ಟಿಗರು ನೋಡಿರುವ ಈ ವಿಡಿಯೋ ನಿಮಗೂ ಇಷ್ಟವಾದೀತು.

Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 14, 2022 | 10:34 AM

Viral Video : ಒಂದೊಂದು ಮಗುವೂ ವಿಶಿಷ್ಟ. ಎಳವೆಯಲ್ಲಿ ನೀವು ಯಾವುದರತ್ತ ಆಕರ್ಷಿಸುತ್ತೀರೋ ಅದರತ್ತ ಅದು ಆಸಕ್ತಿ ಬೆಳೆಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಈ ಪುಟ್ಟ ಬಾಲಕಿ 38 ಸೆಕೆಂಡುಗಳಲ್ಲಿ 75 ಜಿಲ್ಲೆಗಳ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಒಪ್ಪಿಸಿ ನೆಟ್ಟಿಗರಲ್ಲಿ ಅಚ್ಚರಿ ಹುಟ್ಟಿಸಿದ್ದಾಳೆ. ಈಕೆಯ ಸ್ಮರಣಶಕ್ತಿಗೆ ಬೆರಗಾದ ನೆಟ್ಟಿಗರು ಈ ವಿಡಿಯೋ ವೈರಲ್ ಮಾಡಿದ್ದಾರೆ. ಶುಭಂಕರ್ ಮಿಶ್ರಾ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಆದರ್ಶ ಪ್ರಾತ್ಮಿಕ್​ ವಿದ್ಯಾಲಯದಲ್ಲಿ ಓದುತ್ತಿರುವ ಈ ಬಾಲಕಿಯ ಹೆಸರು ಮೌನ್ವಿ ಚೌರಾಸಿಯಾ.

ಅದ್ಭುತ ಪ್ರತಿಭೆಯ ಬಾಲಕಿ ಹೀಗೆ ನಿರಂತರವಾಗಿ 75 ಜಿಲ್ಲೆಗಳ ಹೆಸರುಗಳನ್ನು ವರ್ಣಮಾಲಿಕೆಯ ಕ್ರಮದಲ್ಲಿ ಹೇಳುವುದನ್ನು ಕೇಳಿದರೆ ಯಾರಿಗೂ ಸಂಚಲನ ಮೂಡದೇ ಇರದು. ಈತನಕ 36,000 ವೀಕ್ಷಣೆ, ಸುಮಾರು 4,000 ಲೈಕ್ಸ್, 700ಕ್ಕೂ ಹೆಚ್ಚು ರೀಟ್ವೀಟ್​ ಪಡೆದಿದೆ ಈ ವಿಡಿಯೋ.

ಈಕೆಯ ನೆನಪಿನ ಶಕ್ತಿ ಬಗ್ಗೆ ನೆಟ್ಟಿಗರು ಪ್ರಶಂಸಿಸಿದ್ದಾರೆ. ‘ಇಂಥ ಅದ್ಭುತ ಸ್ಮರಣಶಕ್ತಿ ಹೊಂದಿರುವ ಈ ಬಾಲೆಗೆ ಅತ್ಯುತ್ತಮ ಭವಿಷ್ಯವಿದೆ’ ಎಂದು ಹಾರೈಸಿದ್ದಾರೆ.

ಮಕ್ಕಳಿಗೆ ಬಾಲ್ಯದಲ್ಲಿ ಹೀಗೆ ಒಂದಿಲ್ಲಾ ಒಂದು ಗುಂಗು, ಕೌಶಲವನ್ನು ಹೊಕ್ಕಿಸಿಬಿಟ್ಟರೆ, ಅವರದೇ ಪ್ರಪಂಚದಲ್ಲಿ ಆಸಕ್ತಿಗಳಲ್ಲಿ ಕಲಿಕೆಯಲ್ಲಿ ಅವರು ಬೆಳೆಯುತ್ತ ಹೋಗುತ್ತಾರೆ. ಪ್ರತಿಯೊಂದಕ್ಕೂ ಸ್ಪೂನ್​ ಫೀಡ್ ಮಾಡಬೇಕಿಲ್ಲ. ಮುಖ್ಯವಾಗಿ, ಸುಲಭವಾಗಿ ಹೊರಪ್ರಭಾವಕ್ಕೆ ಒಳಗಾಗಲಾರರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ