Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕಾಡೆಮ್ಮೆ ದಾಳಿ; ಆಟೋ ರಿಕ್ಷಾ ಲೈಟ್​ಗಳು ತಂದಿಟ್ಟ ಆಘಾತ

Bison Attack : ವನ್ಯಪ್ರಾಣಿಗಳು ಜೀವಿಸುವ ಪ್ರದೇಶವಿದು. ಇಲ್ಲಿ ಕತ್ತಲಿದೆ. ಹೆಡ್​ಲೈಟ್ ಹಾಕಿಕೊಂಡು ಈ ಆಟೋರಿಕ್ಷಾ ನಿಂತಿದೆ. ನುಗ್ಗಿಬಂದ ಕಾಡೆಮ್ಮೆ ಮುಂದೇನು ಮಾಡಿರಬಹುದು? ವಿಡಿಯೋ ನೋಡಿ.

Viral Video : ಕಾಡೆಮ್ಮೆ ದಾಳಿ; ಆಟೋ ರಿಕ್ಷಾ ಲೈಟ್​ಗಳು ತಂದಿಟ್ಟ ಆಘಾತ
ಆಟೋ ರಿಕ್ಷಾಗೆ ಗುದ್ದಿದ ಗೂಳಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 13, 2022 | 4:10 PM

Viral Video : ವನ್ಯಜೀವಿಗಳ ಲೋಕ ಬಹಳೇ ಅದ್ಭುತ. ಅವುಗಳ ಜೀವನಶೈಲಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ನೋಡಿದ್ದೀರಿ. ನೋಡುತ್ತ ನೋಡುತ್ತ ಒಮ್ಮೊಮ್ಮೆ ಅವುಗಳನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆ ಉಂಟಾಗುವುದು ಸಹಜ. ಆದರೆ, ಕಾಡುಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಎನ್ನುವುದಂತೂ ಊಹಿಸಲಸಾಧ್ಯ. ಯಾವತ್ತಾದರೂ ಅವುಗಳ ಅತಂಕಕಾರಿ ವರ್ತನೆಗೆ ನೀವು ಈಡಾದಿರೋ, ಅಕಸ್ಮಾತ್​ ಬದುಕುಳಿದರೆ ದುಃಸ್ವಪ್ನದಂತೆ ಆ ದೃಶ್ಯ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಇಲ್ಲಿರುವ ವಿಡಿಯೋ ಗಮನಿಸಿ. ರಾತ್ರಿಯ ಹೊತ್ತು. ಆಟೋ ರಿಕ್ಷಾ ತನ್ನ ಪಾಡಿಗೆ ತಾನು ನಿಂತಿದೆ. ಕಾಡೆಮ್ಮೆಯೊಂದು ಆಕ್ರಮಣಕಾರಿ ರೀತಿಯಲ್ಲಿ ಆಟೋರಿಕ್ಷಾಕ್ಕೆ ತೀವ್ರವಾಗಿ ಗುದ್ದಿ ಓಡಿಹೋಗಿದೆ. ಮುಂದೇನಾಗಿದೆ ಗಮನಿಸಿ.

ವೈಲ್ಡ್​ ಲೆನ್ಸ್​ ಇಕೋ ಎಂಬ ಟ್ವಿಟರ್​ ಪುಟ ಹಂಚಿಕೊಂಡ ಈ ವಿಡಿಯೋ ಪೋಸ್ಟ್​ನಲ್ಲಿ ಐಎಫ್​ಎಸ್​ ಅಧಿಕಾರಿಗಳಾದ ಸುಸಾಂತ ನಂದಾ ಮತ್ತು ಪರ್ವೀನ್​ ಕಸ್ವಾನ್ ಅವರನ್ನು ಟ್ಯಾಗ್ ಮಾಡಲಾಗಿದೆ. ಈ ಕಾಡೆಮ್ಮೆಯು ಪೊದೆಗಳತ್ತ ಚಲಿಸಲು ಹೊರಟಿದ್ದು, ಒಂದು ಕ್ಷಣ ನಿಲ್ಲುತ್ತದೆ. ಎದುರಿಗಿದ್ದ ಆಟೋ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುತ್ತದೆ. ಸದ್ಯ! ಪೊದೆಗಳೊಳಗೆ ತನ್ನಪಾಡಿಗೆ ತಾ ಹೊರಡುತ್ತದೆ. ಬದುಕಿದೆಯಾ ಬಡಜೀವವೇ ಎಂದುಕೊಂಡಿರಲು ಸಾಕು ಆ ಆಟೋ ಡ್ರೈವರ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ‘ಅಬ್ಬಾ ಎಂಥ ಭಯಾನಕವಿದು. ನಾನು 9 ವರ್ಷದವನಿದ್ದಾಗ ನಾಗರಹೊಳೆಗೆ ಹೋಗಿದ್ದೆವು. ನನ್ನ ತಾಯಿ ಮತ್ತು ಚಿಕ್ಕಪ್ಪನೊಂದಿಗೆ ಆ ಮುಸ್ಸಂಜೆಯಲ್ಲಿ ಜೀಪಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ನಾವು ಕಾಡೆಮ್ಮೆಗಳ ಹಿಂಡಿನ ದಾಳಿಗೆ ಈಡಾದೆವು. ಒಂದು ಕಾಡೆಮ್ಮೆ ನಮ್ಮನ್ನು ಕಂದಕಕ್ಕೆ ತಳ್ಳಿತು. ಗಾಯಗೊಂಡೆವಾದರೂ ಬಚಾವಾದೆವು’ ಎಂದು ಟ್ವಿಟರ್ ಖಾತೆದಾರರೊಬ್ಬರು ಹಳೆಯ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ಕಾಡೆಮ್ಮೆಗಳು ಮೊದಲೇ ಚುರುಕು ಬುದ್ಧಿಯ ಪ್ರಾಣಿಗಳು ಮತ್ತು ವೇಗವಾಗಿ ಓಡುವಂಥ ಬಲವುಳ್ಳವುಗಳು. ವಾಹನಗಳ ಹೆಡ್​ಲೈಟ್​ನ ಪ್ರಖರ ಬೆಳಕಿಗೆ ಅವು ತೀವ್ರ ಪ್ರಚೋದನೆಗೆ ಒಳಗಾಗುತ್ತವೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ 7,84,700 ವೀಕ್ಷಕರ ಗಮನ ಸೆಳೆದಿದೆ. ಸುಮಾರು 4,000 ದಷ್ಟು ಜನರು ಇದನ್ನು ಮೆಚ್ಚಿದ್ದಾರೆ.

ಪ್ರಾಣಿಯೋ ಮನುಷ್ಯನೋ, ಆಕ್ರಮಣಕಾರಿ ಸ್ವಭಾವ ಎಂದು ಗೊತ್ತಾದ ತಕ್ಷಣ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ಜೀವ ಅತ್ಯಮೂಲ್ಯ. ವನ್ಯಜೀವಿಗಳು ವಾಸಿಸುವ ಸ್ಥಳಗಳಲ್ಲಿ ಪ್ರಯಾಣಿಸುವಾಗ ಅವುಗಳಿಗೆ ತೊಂದರೆಯಾಗದಂತೆ ಪ್ರಯಾಣಿಸುವುದು ನಮ್ಮ ಜವಾಬ್ದಾರಿ ಕೂಡ. ಹಾಗಾಗಿ ಅವುಗಳಿಂದ ತೊಂದರೆಗೆ ಒಳಗಾಗುವ ಮೊದಲೇ ನಾವು ಪ್ರಜ್ಞೆ ಬೆಳೆಸಿಕೊಳ್ಳುವುದು ಒಳಿತು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:05 pm, Tue, 13 September 22