Viral: ಇದೇನ್‌ ಹುಚ್ಚಾಟ…. ಹುಲಿ ಬಾಯಿಯೊಳಗೆ ಕೈ ಹಾಕಿದ ಯುವಕ; ವಿಡಿಯೋ ವೈರಲ್‌

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಚಿತ್ರ ವಿಚಿತ್ರ ವಿಡಿಯೋಗಳನ್ನು ನೋಡಿದಾಗ ಇದೆಂಥಾ ಹುಚ್ಚಾಟ ಎಂದು ಹಣೆ ಚಚ್ಚಿಕೊಳ್ಳುತ್ತವೆ. ಇದೀಗ ಅಂತಹದ್ದೇ ಅಚ್ಚರಿಯ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಯುವಕನೊಬ್ಬ ಹುಲಿ ಬಾಯಿಯೊಳಗೆ ಕೈ ಹಾಕಿ ನಾಯಿ ಮರಿಯ ಜೊತೆ ಆಟ ಆಡಿದ ಹಾಗೆ ಹುಲಿಯ ಜೊತೆ ಆಟವಾಡಿದ್ದಾನೆ. ಈತನ ಈ ಭಂಡ ಧೈರ್ಯಕ್ಕೆ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಹುಲಿ, ಸಿಂಹ, ಇತ್ಯಾದಿ ಕಾಡು ಪ್ರಾಣಿಗಳನ್ನು ಕಂಡರೆ ಹೆಚ್ಚಿನವರು ಭಯ ಪಡುತ್ತಾರೆ. ಕಾಡಿನಲ್ಲಿ ಬಿಡಿ, ಮೃಗಾಲಯದಲ್ಲಿ ಹುಲಿಯನ್ನು ನೋಡಿದರೂ ಭಯ ಪಡುವವರು ಹಲವರಿದ್ದಾರೆ. ಆದ್ರೆ ಇಲ್ಲೊಬ್ಬ ಯುವಕ ಹುಲಿಯ ಪಕ್ಕದಲ್ಲಿಯೇ ಕುಳಿದ ಅದರ ಬಾಯೊಳಗೆ ಕೈ ಹಾಕಿದ್ದಾನೆ. ಹೌದು ತಾನು ಸಾಕಿದ ಹುಲಿಯ ಬಾಯಿಗೆ ಕೈ ಹಾಕಿ ನಾಯಿ ಮರಿಯೊಂದಿಗೆ ಆಟವಾಡಿದಂತೆ ಹುಲಿಯೊಂದಿಗೆ ಆಟವಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಯುವಕನ ಹುಚ್ಚಾಟಕ್ಕೆ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಭಾರತದ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವನ್ಯಜೀವಿಗಳನ್ನು ಮನೆಗಳಲ್ಲಿ ಸಾಕಬಾರದು ಎಂಬ ಕಾನೂನು ಇದೆ. ಆದ್ರೆ ಕೆಲ ದೇಶಗಳಲ್ಲಿ ಕಾನೂನಿನ ಹೊರತಾಗಿಯೂ ವನ್ಯ ಜೀವಿಗಳನ್ನು ಸಾಕುವವರಿದ್ದಾರೆ. ಅದೇ ರೀತಿ ಪಾಕಿಸ್ತಾನಿ ಇನ್‌ಫ್ಲುಯೆನ್ಸರ್‌ ನೌಮನ್‌ ಹಸನ್‌ (Nouman.hassan1) ಎಂಬಾತ ಕೂಡಾ ಹುಲಿಯೊಂದನ್ನು ಸಾಕಿದ್ದು, ಹುಲಿಯೊಂದಿಗಿನ ವಿಡಿಯೋಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾನೆ.

ಇದೀಗ ಆತ ತಾನು ಸಾಕಿರುವ ಹುಲಿಯ ಬಾಯಿಯೊಳಗೆ ಕೈ ಹಾಕಿ ಅದರೊಂದಿಗೆ ಆಟವಾಡಿದಂತಹ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಜೊತೆಗೆ “ನನ್ನ ಹುಲಿ ರಾಕಿ ತುಂಬಾನೇ ಫ್ರೆಂಡ್ಲಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರು ವಿಡಿಯೋದಲ್ಲಿ ಪಾಕಿಸ್ತಾನಿ ಯುವಕ ಹುಲಿಯ ಬಾಯಿಯೊಳಗೆ ಕೈ ಹಾಕುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹುಲಿಯೂ ಕೂಡಾ ಆತನಿಗೆ ಏನು ತೊಂದರೆ ಮಾಡದೆ, ಬೆಕ್ಕಿನಂತೆ ಅವನೊಂದಿಗೆ ಆಟವಾಡಿದೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಕರಿ ಬೆಕ್ಕನ್ನು 10 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಅಕ್ಟೋಬರ್‌ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವನೇನು ನಾಯಿ ಸಾಕಿದಂಗೆ ಹುಲಿಯನ್ನು ಸಾಕಿದ್ದಾನೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜವಾದ ಪ್ರೀತಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ