Viral: ಡಿವೋರ್ಸ್‌ ಪಡೆದ ಖುಷಿಗೆ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಮಹಿಳೆ; ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 05, 2024 | 11:57 AM

ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನಿ ಮಹಿಳೆಯೊಬ್ಬರು ಗಂಡನಿಂದ ಡಿವೋರ್ಸ್‌ ಸಿಕ್ಕ ಖುಷಿಗೆ ಫ್ರೆಂಡ್ಸ್‌ ಜೊತೆ ಸೇರಿ ಅದ್ದೂರಿ ಪಾರ್ಟಿ ಮಾಡಿದ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು. ಇದೀಗ ಪಾಕಿಸ್ತಾನದಲ್ಲಿ ಅಂತಹದ್ದೇ ಇನ್ನೊಂದು ಘಟನೆ ನಡೆದಿದ್ದು, ಮಹಿಳೆಯೊಬ್ಬರು ಗಂಡನಿಂದ ಮುಕ್ತಿ ಸಿಕ್ತಲ್ವಾ ದೇವ್ರೇ ಎಂದು ಡಿವೋರ್ಸ್‌ ಸಿಕ್ಕ ಖುಷಿಗೆ ಮದುವೆ ಫೋಟೋಗಳನ್ನು ಹರಿದು ಹಾಕಿ, ಕೇಕ್‌ ಕಟ್‌ ಮಾಡಿ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದಾಂಪತ್ಯ ಜೀವನದಲ್ಲಿ ಜಗಳ, ಮನಸ್ತಾಪಗಳಿರುವುದು ಸಾಮಾನ್ಯ. ಇದೇ ಗಲಾಟೆಯಿಂದ ಸುಮಾರಷ್ಟು ವಿಚ್ಛೇದನಗಳು ಕೂಡಾ ನಡೆದಿವೆ. ಆದ್ರೆ ಡಿವೋರ್ಸ್‌ ಪಡೆದ ಬಳಿಕ ನೋವು, ಒಂಟಿತನ, ಹತಾಶೆಯನ್ನು ಅನುಭವಿಸಿದವರೇ ಹೆಚ್ಚು. ಅಂತದ್ರಲ್ಲಿ ಇಲ್ಲೊಬ್ಬರು ಪಾಕಿಸ್ತಾನಿ ಮಹಿಳೆ ಮಾತ್ರ ಕೊನೆಗೂ ಗಂಡನಿಂದ ಮುಕ್ತಿ ಸಿಕ್ತಲ್ವಾ ದೇವ್ರೇ ಎಂದು ಡಿವೋರ್ಸ್‌ ಸಿಕ್ಕ ಖುಷಿಗೆ ಮದುವೆ ಫೋಟೋಗಳನ್ನು ಹರಿದು ಹಾಕಿ, ಕೇಕ್‌ ಕಟ್‌ ಮಾಡಿ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಈಕೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನಿ ಮಹಿಳೆ ಡಿವೋರ್ಸ್‌ ಪಾರ್ಟಿ ಮಾಡಿದ್ದ ಸುದ್ದಿಯೊಂದು ಸಖತ್ ಸದ್ದು ಮಾಡಿತ್ತು. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದ್ದು, ಪಾಕಿಸ್ತಾನದ ಮಹಿಳೆಯೊಬ್ಬರು ಹ್ಯಾಪಿ ಡಿವೋರ್ಸ್‌ ಎಂದು ಬರೆದಿರುವ ಕೇಕ್‌ ಕಟ್‌ ಮಾಡಿ, ಮದುವೆ ಫೋಟೋಗಳನ್ನು ಹರಿದು ಹಾಕಿ ಹಾಗೂ ತಮ್ಮ ನಿಕಾಹ್‌ ದುಪಟ್ಟಾವನ್ನು ಹರಿದು ಹಾಕುವ ಮೂಲಕ ತಮ್ಮ ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಶೋನಿ ಕಪೂರ್‌ (SnoneeKapoor) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬರು ಗಂಡನಿಂದ ಡಿವೋರ್ಸ್‌ ಸಿಕ್ಕ ಖುಷಿಯಲ್ಲಿ ಹ್ಯಾಪಿ ಡಿವೋರ್ಸ್‌ ಎಂದು ಬರೆದಿರುವ ಕೇಕ್‌ ಕಟ್‌ ಮಾಡಿ ನಂತರ ಮದುವೆ ಫೋಟೋಗಳನ್ನು ಹಾಗೂ ನಿಕಾಹ್‌ ದುಪಟ್ಟಾವನ್ನು ಹರಿದು ಹಾಕುವ ಹರಿದು ಹಾಕುವ ಮೂಲಕ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸಿಂಗಾಪುರ ಬಡ ರಾಷ್ಟ್ರದಿಂದ ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದಾಗಿದ್ದು ಹೇಗೆ?

ನವೆಂಬರ್‌ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 62 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪುರುಷರು ಕೂಡಾ ಆದಷ್ಟು ಬೇಗ ಇಂತಹ ಸಂಭ್ರಮಾಚರಣೆಗಳನ್ನು ಮಾಡಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಡಿವೋರ್ಸ್‌ ಪಡೆಯುವುದು ಸಹಜ ಆದರೆ ಅದರ ಸಂಭ್ರಮಾಚರಣೆಯನ್ನು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡುವ ಅವಶ್ಯಕತೆ ಇತ್ತೇʼ ಎಂದು ಕೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ