ಇಸ್ಲಾಮಾಬಾದ್: ಪಾಕಿಸ್ತಾನ(Pakistan)ದ ಯುವತಿಯೊಬ್ಬಳು ಫುಟ್ಪಾತ್ನಲ್ಲಿ ನೃತ್ಯ (Dance) ಮಾಡಿರುವ ವಿಡಿಯೋ ಭಾರಿ ವೈರಲ್ (Viral) ಆಗುತ್ತಿದ್ದು, ಪರ ಮತ್ತು ವಿರೋಧಗಳು ವ್ಯಕ್ತವಾಗುತ್ತಿದೆ. ಇಸ್ಲಾಮಾಬಾದ್‌ನ ಸಾರ್ವಜನಿಕ ಸ್ಥಳದಲ್ಲಿ ಹುಡುಗಿಯೊಬ್ಬಳು ಪೋಲ್ ಡಾನ್ಸ್ (Pole Dance) ಮಾಡುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಉತ್ತಮ ವೀವ್ಸ್ ಪಡೆದುಕೊಂಡಿದೆ.
⚠️? A girl doing pole dance at I-8 Markaz, Islamabad – Where is the management? CC: @dcislamabad pic.twitter.com/evcRLg9iSz
— Showbiz & News (@ShowbizAndNewz) May 16, 2022
ಮುಸ್ಲಿಂ ಬಾಹುಲ್ಯ ಇರುವ ದೇಶದಲ್ಲಿ ಅವರದ್ದೇ ಆದ ಕಾನೂನು, ನೀತಿ ನಿಯಮಗಳಿದೆ. ಅದರಲ್ಲೂ ಮಹಿಳೆಯರಿಗಂತೂ ಸಾರ್ವಜನಿಕ ಪ್ರದೇಶದಲ್ಲಿ ಹೇಗಿರಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಹೀಗಿದ್ದಾಗ ಯುವತಿಯೊಬ್ಬಳು ಮೈಗೆ ಅಂಟಿಕೊಂಡಿರುವ ಉಡುಪು ಧರಿಸಿ ಪೋಲ್ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಅಧಿಕಾರಿಯವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಜೂನ್ 21ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗೋದು ಬಹುತೇಕ ಫಿಕ್ಸ್
ಪೊಲೀಸ್ ಅಧಿಕಾರಿಯನ್ನು ಟ್ಯಾಗ್ ಮಾಡಿದ ಹಿನ್ನೆಲೆ ಟ್ವೀಟ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಈ ವಿಡಿಯೋ ಮೂರು ದಿನಗಳ ಹಿಂದಿನದ್ದು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ನೃತ್ಯಕ್ಕೆ ನೆಟ್ಟಿಗರು ಟೀಕೆ ಹಾಗೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬೀದಿಗಳಲ್ಲಿ ನೃತ್ಯ ಮಾಡುವುದು ಸಾಮಾನ್ಯ ಎಂದು ಒಂದಷ್ಟು ಮಂದಿ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಕೆಲವು ನೆಟ್ಟಿಗರು ಯುವತಿಯ ಮಾನಸಿಕತೆಯನ್ನು ಪ್ರಶ್ನಿಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕೆಯ ಸಾಮಾಜಿಕ ನೀತಿ ಮತ್ತು ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Petrol Price Today: ದೇಶದಲ್ಲಿ ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
ಇದನ್ನೂ ಓದಿ: ನಾನ್-ವೆಜ್ ವಿಚಾರದಲ್ಲಿ ಅನು ಪ್ರಭಾಕರ್ಗೆ ರೇಗಿಸಿದ್ದ ಪುನೀತ್ ರಾಜ್ಕುಮಾರ್; ನೆನಪಿನ ಪುಟ ತೆರೆದ ನಟಿ
ಇದನ್ನೂ ಓದಿ: Jahangirpuri violence ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣದ ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 10:02 am, Sat, 21 May 22