Mai Dhai : ‘ನಾನು ತಡವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದೆ. ಈ ಮೊದಲೇ ಕಾರ್ಯಕ್ರಮಗಳನ್ನು ಕೊಡಲು ಆರಂಭಿಸಿದ್ದರೆ ನನ್ನ ಮಗಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ’ ಎನ್ನುತ್ತಾರೆ 103 ವರ್ಷದ ಪಾಕಿಸ್ತಾನೀ ಜಾನಪದ ಗಾಯಕಿ ಮಾಯೀ ಧಾಯೀ. ಇವರು ವಾಸವಾಗಿರುವುದು ಸಿಂಧ್ ಪ್ರಾಂತ್ಯದ ಥಾಪಾರ್ಕರ್ನಲ್ಲಿ (Tharparkar). ಹಾರ್ಮೋನಿಯಂ ವಾದಕ ಜಮಾಲ್ ಸಹಾಬ್ ಮತ್ತು ಢೋಲ್ವಾದಕ ಮುಹಮ್ಮದ್ ಫಕೀರ್ ಎನ್ನುವವರೊಂದಿಗೆ ಮಾಯೀ ಧಾಯೀ ಎಂಬ ಜಾನಪದ ಬ್ಯಾಂಡ್ ಅನ್ನು ಕಟ್ಟಿಕೊಂಡು ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಡಲಾರಂಭಿಸಿದರು. ಇದೀಗ ಕೋಕ್ ಸ್ಟುಡಿಯೋದಲ್ಲಿ ಹಾಡಿರುವ ಹಳೆಯ ಹಾಡೊಂದು ವೈರಲ್ ಆಗಿದೆ. ಈ ಹಾಡನ್ನು ಹಾಡಿದಾಗ ಇವರ ವಯಸ್ಸು 96!
‘ನಮ್ಮ ಬುಡಕಟ್ಟು ಜನರಲ್ಲಿ ಅನೇಕ ಉತ್ತಮ ಗಾಯಕಿಯರಿದ್ದಾರೆ ಆದರೆ ಸಾಮಾಜಿಕ ಒತ್ತಡಗಳ ಕಾರಣದಿಂದಾಗಿ ಅವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಲಾರರು’ ಎನ್ನುವ ಮಾಯೀ 2015ರಲ್ಲಿ ಅಮೆರಿಕದಲ್ಲಿ ಪ್ರದರ್ಶನ ನೀಡಿ ಮನೆಮಾತಾದರು, ಅಲ್ಲಿಯತನಕ ಎಲೆಮರೆಯಲ್ಲಿ ಕುಳಿತು ಹಾಡುವ ಹಕ್ಕಿಯಂತಿದ್ದರು. ಅಂದಹಾಗೆ ಆಕೆ ಹಾಡಿದ ಸಾಹಿತ್ಯದ ಬಗ್ಗೆ ನೆಟ್ಟಿಗರಲ್ಲಿ ಬಹಳಷ್ಟು ಕುತೂಹಲ ಹುಟ್ಟಿದೆ. ಶ್ರೀಮಂತ ಮತ್ತು ರಾಜರುಗಳ ಗಾಂಜಾ, ಅಫೀಮು ಸಾರಾಯಿ ಖಯಾಲಿಯನ್ನು ಅದು ವರ್ಣಿಸುತ್ತದೆ.
ಅರೆ ಗಾಂಜು ರೆ ಪಿಯೆ ಗಜ ಪತೀ
ಭಾಂಗ ಪಿಯೇ ಭೂಪಾಲ
ಅಮಲ ಆರೂಗೆ ಛತ್ರಪತಿ
ದಾರೂರಿ ಪಿಯೇ ದಾತಾರ
ಇದನ್ನೂ ಓದಿ : Viral: ಸ್ವಿಗ್ಗಿ ಇನ್ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ
ಜು. 14ರಂದು ಅಕುಲ್ ಎನ್ನುವವರು ಇದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇದು ವೈರಲ್ ಆಗುತ್ತಲೇ ಇದೆ. ಸುಮಾರು 10 ಮಿಲಿಯನ್ ಜನರು ಮಾಯಿಯ ಹಾಡು ಕೇಳಿದ್ದಾರೆ. 3.5 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಹಸ್ರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಈಕೆ ರಾಜಸ್ತಾನಿ ಹಾಡನ್ನು ಹಾಡುತ್ತಿದ್ದಾಳೆ ಎಂದಿದ್ದಾರೆ. ಹಾಡಿನ ಸಾಹಿತ್ಯಕ್ಕೆ ರಾಜಸ್ತಾನಿ ಅರ್ಥವನ್ನೂ ಹುಡುಕಿದ್ದಾರೆ. ಆದರೆ ಈಕೆ ಪಾಕಿಸ್ತಾನಿ ಮೂಲದ ಗಾಯಕಿಯಾಗಿದ್ದು ಗಾಯಕೀ ಶೈಲಿಯಲ್ಲಿ ಮತ್ತು ಸಾಹಿತ್ಯದಲ್ಲಿ ರಾಜಸ್ತಾನಿ ಸಂಗೀತದ ಪರಿಮಳವಿದೆ.
ವಯಸ್ಸು ಎನ್ನುವುದು ಮನಸ್ಸಿನಲ್ಲಿ ತುಂಬಿಕೊಂಡ ಸಂಖ್ಯೆ ಅಷ್ಟೇ ತಾನೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:37 am, Wed, 26 July 23